Advertisement

ಮಹಾರಾಷ್ಟ್ರದ ಸ್ಯಾನಿಟೈಸರ್‌ ಕಾರ್ಖಾನೆ ಘಟಕದಲ್ಲಿ ಸ್ಫೋಟ: ಇಬ್ಬರ ಸಾವು

09:05 AM Apr 14, 2020 | Team Udayavani |

ಮಹಾರಾಷ್ಟ್ರದ ಪಾಲ್ಗರ್‌ನ ತಾರಾಪುರ ಸ್ಯಾನಿಟೈಸರ್‌ ಕಾರ್ಖಾನೆ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸೋಮವಾರ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ.

Advertisement

ಕೋವಿಡ್ ವಿರುದ್ಧ ರಕ್ಷಣೆ ಪಡೆಯಲು ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಸ್ಯಾನಿಟೈಸರ್‌ಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಅವುಗಳನ್ನು ತಯಾರಿಸಲು ಲಾಕ್‌ಡೌನ್‌ ನಡುವೆಯೂ ಕಾರ್ಖಾನೆಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು.

ಸ್ಫೋಟ ನಡೆದ ಸಂದರ್ಭದಲ್ಲಿ ತಾರಾಪುರ ರಾಸಾಯನಿಕ ವಲಯದಲ್ಲಿರುವ ಸ್ಯಾನಿಟೈಸರ್‌ ಮತ್ತು ಹ್ಯಾಂಡ್‌ ವಾಶ್‌ ಘಟಕದಲ್ಲಿ 66 ಕಾರ್ಮಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next