Advertisement

ಅಶ್ಲೀಲ ಚಿತ್ರ ಸಂಗ್ರಹಿಸಿ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ಬೆದರಿಕೆ ಕರೆ: ಇಬ್ಬರ ಬಂಧನ

02:51 PM Nov 25, 2020 | keerthan |

ಮಂಗಳೂರು: ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಬಳಸಿ ಯುವಕರೊಂದಿಗೆ ವ್ಯವಹರಿಸಿ ಅಶ್ಲೀಲ ಚಿತ್ರಗಳನ್ನು ಸಂಗ್ರಹಿಸಿ, ನಂತರ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಬ್ಲ್ಯಾಕ್ ಮೇಲ್ ಮಾಡಿದ ಇಬ್ಬರು ಯುವಕರನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಗೋಕುಲ್ ರಾಜ್ (20 ವ) ಮತ್ತು ಪವನ್ ಎಲ್. (20 ವ) ಬಂಧಿತರು. ಇವರಿಬ್ಬರೂ ಬೆಂಗಳೂರು ನಿವಾಸಿಗಳಾಗಿದ್ದಾರೆ.

ಆರೋಪಿಗಳು ಸಾಕ್ಷೀರಾಜ್ ಎಂಬ ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಸೃಷ್ಟಿಸಿ ಮಂಗಳೂರಿನ ರಾಜೇಶ್ ಎಂಬವರೊಂದಿಗೆ ಸಂಪರ್ಕ ಸಾಧಿಸಿದ್ದರು. ಆರೋಪಿಗಳು ಮೊದಲು ಅಶ್ಲೀಲ ಫೋಟೊಗಳನ್ನು ಕಳುಹಿಸಿ ನಂತರ ರಾಜೇಶ್ ಅವರಿಂದ ಫೋಟೊಗಳನ್ನು ಪಡೆದಿದ್ದರು. ನಂತರ ಆ ಫೋಟೊಗಳನ್ನು ಬಳಸಿ ಬೆದರಿಸಿ ಹಣ ಪಡೆದಿದ್ದರು.

ಇದನ್ನೂ ಓದಿ:ಕ್ಷೌರ ಮಾಡಲು ಹೋದವನನ್ನು ಅಟ್ಟಾಡಿಸಿ ಚಾಕುವಿನಿಂದ ಇರಿದು ಕೊಲೆ

ಇನ್ನಷ್ಟು ಫೋಟೊಗಳಿಗೆ ಬೇಡಿಕೆ ನೀಡಿದಾಗ ರಾಜೇಶ್ ನಿರಾಕರಿಸಿದ್ದು, ಆಗ ಆರೋಪಿಗಳು ಹಿರಿಯ ಪೊಲೀಸ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ಬೆದರಿಕೆ ಹಾಕಿ ವಂಚಿಸಿದ್ದರು. ಈ ಕುರಿತು ರಾಜೇಶ್ ಪೊಲೀಸರಿಗೆ ದೂರು ನೀಡಿದ್ದು, ಸೈಬರ್ ಕ್ರೈಂ ಪೊಲೀಸ್ ನಿರೀಕ್ಷಕ ಬಿ.ಸಿ.ಗಿರೀಶ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next