Advertisement

ಬ್ಲಾಕ್‌ಮೇಲ್ ಜಮಾನ: ಆನ್‌ಲೈನ್‌ನಲ್ಲಿ ಇದ್ದಾರೆ, ಕಾಮಣ್ಣನ ಮಕ್ಕಳು!

01:45 PM Aug 09, 2017 | |

ಕಾಮಣ್ಣರು ಈಗ ಕೇವಲ ಬೀದಿಗಳಲ್ಲಲ್ಲ, ಆನ್‌ಲೈನ್‌ನಲ್ಲೂ ಇದ್ದಾರೆ. ಹಾಗಂತ ಸ್ತ್ರೀ, ಸಾಮಾಜಿಕ ಜಾಲತಾಣ ಬಳಸದೇ ಇರಲಾಗುತ್ತದೆಯೇ? ಅದು ಆಕೆಯ ಸ್ವಾತಂತ್ರ್ಯ..

Advertisement

ಒಂಟಿ ಹೆಣ್ಣೊಬ್ಬಳು ಸುಮ್ಮನೆ ನಡೆದು ಹೋಗುತ್ತಿದ್ದರೂ ಸಾಕು ಹತ್ತಾರು ಕಣ್ಣುಗಳು ಮುತ್ತಿಕೊಳ್ಳುತ್ತವೆ. ಮಾರ್ಕೆಟ್‌, ಬಸ್‌, ರೈಲುಗಳಲ್ಲಿ ರಶ್‌Ïನ ನೆಪದಲ್ಲಿ ಅವಳನ್ನು ಮುಟ್ಟುವ ಚಪಲ ಬಹುತೇಕರಿಗೆ. ದಿನನಿತ್ಯ ಇಂಥ ಕರ್ಮಗಳಿಂದ ಅವಳು ಕುಗ್ಗಿ ಹೋಗುತ್ತಾಳೆ. ಅವಳಿಗೆ, ಅವಳ ಒಂಟಿತನಕ್ಕೆ ಈ ಸಮಾಜ ಸೇಫ್ ಅಲ್ಲ ಎಂಬುದು ಹಲವು ಬಾರಿ ಪ್ರೂವ್‌ ಆಗುತ್ತಲೇ ಬಂದಿದೆ. ಅಂದಹಾಗೆ, ಅವಳಿಗೆ ಈಗ ಆನ್‌ಲೈನ್‌ ಜಾಲತಾಣಗಳು ಕೂಡ ಸೇಫ್ ಅಲ್ಲ ಎಂಬುದು ಸರ್ವವಿಧಿತ. 

ಜಾಲತಾಣಗಳಲ್ಲೂ ಲೈಂಗಿಕ ಕಿರುಕುಳ ನಡೆಯುತ್ತಿದೆ ಎಂದರೆ, ನೀವು ಅದನ್ನು ನಂಬಲೇಬೇಕು. ನೀವು ಇದನ್ನು ನಂಬಲೇಬೇಕು. ಇದು ಬಹುತೇಕ ಸಾರಿ ಯಾರ ಕಣ್ಣಿಗೂ ಬೀಳದೇ ನಡೆದು ಹೋಗುವುದರಿಂದ ಸಮಾಜದ ನಡುವೆ ಅಷ್ಟಾಗಿ ಕಂಡು ಬರುವುದಿಲ್ಲ. ಹೆಣ್ಣು ಇಂಥ ವಿಷಯಗಳನ್ನು ಹೇಳಿಕೊಳ್ಳಲು ಆಗದೇ ಬಿಡಲು ಆಗದೇ ಮಾನಸಿಕವಾಗಿ ಸಾಕಷ್ಟು ಕುಗ್ಗಿ ಹೋಗುತ್ತಾಳೆ. ಇದು ಆಕೆಯ ಮೇಲಾಗುವ ದೈಹಿಕ ಅತ್ಯಾಚಾರದ ಪ್ರಯತ್ನದಷ್ಟೇ ಹಿಂಸೆಯನ್ನು ತಂದುಕೊಡುತ್ತದೆ. ಫೇಸ್‌ಬುಕ್‌, ವಾಟ್ಸಾéಪ್‌, ಟ್ವಿಟ್ಟರ್‌ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ಹಿಂದೆ ಬಿದ್ದು ಪದೇಪದೆ ಸಂದೇಶಗಳನ್ನು ಕಳುಹಿಸುವುದು, ಮಾತಿಗೆಳೆಯುವುದು, ಪ್ರಪೋಸ್‌ ಮಾಡುವುದು, ಅಶ್ಲೀಲ ಸಂದೇಶಗಳನ್ನು ರವಾನಿಸುವುದು, ಚಾಟ್‌ ಹಿಸ್ಟರಿಗಳನ್ನು, ಫೋಟೋಗಳನ್ನು ಇಟ್ಟುಕೊಂಡು ಬ್ಲಾಕ್‌ವೆುàಲ್‌ ಮಾಡುವುದು… ಮುಂತಾದವು ನಡೆಯುತ್ತಿವೆ. ಇದರಿಂದ ಮಹಿಳೆ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾಳೆ.

ಹಾಗಾದ್ರೆ, ಅವಳೇನು ಮಾಡ್ಬೇಕು? 
ರಸ್ತೆ, ಆಫೀಸ್‌, ಬಸ್‌ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಆಕೆಗೆ ತನ್ನನ್ನು ಸೇಫ್ ಮಾಡಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಅವಳ ನಡೆನುಡಿ, ಮಾತುಕತೆ, ದಿರಿಸಿನ ಬಗೆಗೆ ಸಾಕಷ್ಟು ಪರ ವಿರೋಧಗಳಿದ್ದರೂ ಒಂದು ಹೆಣ್ಣನ್ನು ಹೆಣ್ಣಿನಂತೆಯೇ ಕಾಣುವುದನ್ನು, ಗೌರವಿಸುವುದನ್ನು ಸಮಾಜ ಬಯಸುತ್ತದೆ. ಹೊರಗೆ ಕಾಮಣ್ಣರಿದ್ದಾರೆ ಎಂದು ಆಕೆ ಹೊರಗೆ ಬರದೇ ಇರಲು ಸಾಧ್ಯವೇ!? ಸಾಮಾಜಿಕ ಜಾಲತಾಣಗಳಲ್ಲೂ ಹೀಗೆ ನಡೆಯುತ್ತಿರುವಾಗ ಆಕೆ ಅವುಗಳನ್ನು ಬಳಸದೇ ಇರಲಾಗುತ್ತದೆಯೇ? ಅದು ಆಕೆಯ ಸ್ವಾತಂತ್ರ್ಯ. ಅದನ್ನು ನಾವು ಗೌರವಿಸಬೇಕು. ಆದರೆ, ಅವಳು ಒಂದಿಷ್ಟು ಜಾಗರೂಕತೆಗಳನ್ನು ರೂಢಿಸಿಕೊಂಡಿದ್ದೇ ಆದಲ್ಲಿ, ಆಕೆ ಅದರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದು.

– ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯುವಾಗ ಎಲ್ಲೂ ನಿಮ್ಮ ಕಾಯಂ ವಿಳಾಸ ನಮೂದಿಸಬೇಡಿ. ಕಚೇರಿ ಅಥವಾ ಇತರೆ ಯಾವುದಾದರೂ ವಿಳಾಸ ನೀಡಿ, ಖಾತೆ ತೆರೆಯಿರಿ.

Advertisement

– ಪಾಸ್‌ವರ್ಡ್‌ಗಳ ಬಗೆಗೆ ಎಚ್ಚರ ಇರಲಿ. ತುಂಬಾ ಸುಲಭವಾದ, ಕದಿಯಬಹುದಾದ ಪಾಸ್ವರ್ಡ್‌ಗಳು ಬೇಡ. ಯಾರೊಂದಿಗೂ ಯಾವುದೇ ಕಾರಣಕ್ಕೂ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳಬೇಡಿ. 

– ಅಪರಿಚಿತರಿಂದ ಬರುವ ಮೇಲ್‌, ಫ್ರೆಂಡ್‌ಶಿಪ್‌ ರಿಕ್ವೆಸ್ಟ್‌, ಮಸೇಜ್‌ಗಳ ಬಗೆಗೆ ನಿಗಾ ಇರಲಿ. ನಿಮಗೆ ಗೊತ್ತಿಲ್ಲದ ಯಾವುದೇ ಮೇಲ್‌ ಹಾಗೂ ಮತ್ತೂಂದಕ್ಕೂ ಪ್ರತಿಕ್ರಿಯಿಸಲು ಹೋಗ್ಬೇಡಿ.

– ನಿಮ್ಮ ಮೊಬೈಲ್‌ ನಂಬರ್‌, ಅದು ನಿಮ್ಮ ವೈಯಕ್ತಿಕ. ಅದನ್ನು ಹಂಚುವುದು ತರವಲ್ಲ. ಅದು ಆತ್ಮೀಯ ವಲಯ ಬಿಟ್ಟು, ಗಡಿದಾಟಲು ಬಿಡಬೇಡಿ. 

– ಅಪರಿಚಿತರೊಂದಿಗೆ ಮಾತಿಗಿಳಿಯುವುದು, ಆಮಿಷಕ್ಕೆ ಒಳಗಾಗುವುದು ಒಳ್ಳೆಯದಲ್ಲ. 

– ಕಿರಿ ಕಿರಿ ಎನಿಸುವ ವ್ಯಕ್ತಿಗಳ ಸಂಪರ್ಕವನ್ನು ಬ್ಲಾಕ್‌ ಮಾಡಿ.

– ಪದೇಪದೆ ಚಾಟ್‌ಗೆ ಆಹ್ವಾನಿಸುವ, ಅಶ್ಲೀಲ ಮಾತಾಡುವ, ಸಂದೇಶಗಳನ್ನು ಕಳುಹಿಸುವವರ ಚಾಟಿಂಗ್‌ ಹಿಸ್ಟರಿ ಸಮೇತ ಸೈಬರ್‌ ವಿಭಾಗಕ್ಕೆ ದೂರು ನೀಡಿ.

– ವೈಯಕ್ತಿಕ ಮಾಹಿತಿ ಹರಿಬಿಡುವುದು, ಚಲ್ಲುಚಲ್ಲಾಗಿ ವರ್ತಿಸುವುದು, ಕೆರಳಿಸುವ ಫೋಟೋಗಳನ್ನು ಹಾಕುವುದಕ್ಕೆ ಒಂದು ಮಿತಿ ಹಾಕಿಕೊಳ್ಳಿ. 

ಸದಾಶಿವ್‌ ಸೊರಟೂರು

Advertisement

Udayavani is now on Telegram. Click here to join our channel and stay updated with the latest news.

Next