Advertisement

Mudigere: ರಾತ್ರಿ ಬೆಳಗಾಗುವುದರೊಳಗೆ ಕಿಡಿಗೇಡಿಗಳಿಂದ ವಾಮಾಚಾರ, ಬೆಚ್ಚಿಬಿದ್ದ ಮಲೆನಾಡು

11:04 AM Oct 19, 2024 | Team Udayavani |

ಚಿಕ್ಕಮಗಳೂರು: ಕಿಡಿಗೇಡಿಗಳ ಗುಂಪೊಂದು ಬೆಳ್ಳಂಬೆಳಗ್ಗೆ ವಾಮಾಚಾರ ನಡೆಸಿರುವ ಘಟನೆ ಮೂಡಿಗೆರೆ ತಾಲೂಕಿನ ಹೆಡದಾಳು ಗ್ರಾಮದಲ್ಲಿ ಶನಿವಾರ(ಅ.19) ಬೆಳಕಿಗೆ ಬಂದಿದ್ದು ಇದರಿಂದ ಮಲೆನಾಡಿನ ಜನ ಬೆಚ್ಚಿ ಬಿದ್ದಿದ್ದಾರೆ.

Advertisement

ಶನಿವಾರ ಮುಂಜಾನೆ ಸುಮಾರು ಐದು ಗಂಟೆಯ ಸುಮಾರಿಗೆ ಹಡೆದಾಳು ಗ್ರಾಮದ ಮೂರೂ ರಸ್ತೆ ಕೂಡುವ ಜಾಗದಲ್ಲಿ ಕಿಡಿಗೇಡಿಗಳ ಗುಂಪು ಬಾಳೆಎಲೆ ಮೇಲೆ ಹಸಿರು ಬಳೆ ಮೇಲೆ ಮಣ್ಣಿನ ಬೊಂಬೆ ಇಟ್ಟು ವಾಮಾವಾರ(ಬಾಳೆಎಲೆ, ಹಸಿರು ಬಳೆ, ಮಡಕೆಗೆ ಕಾಳಿ ರೂಪ ನೀಡಿ ಮಾಟ) ನಡೆಸಿದ್ದಾರೆ.

ಹೆಡದಾಳು ಗ್ರಾಮದ ಚೇತನ್ ಎಂಬುವರ ಮನೆ ಮುಂದೆಯೇ ವಾಮಾಚಾರ ನಡೆದಿದ್ದು ಇದನ್ನು ಈ ಹಳ್ಳಿಯ ಜನರು ಕಂಡಿದ್ದಾರೆ, ಆದರೆ ವಾಮಾಚಾರಕ್ಕೆ ಹೆದರಿ ಮನೆಯಿಂದ ಹೊರಬರದ ಹಳ್ಳಿಗರು.

ಸ್ಥಳದಲ್ಲಿ ಅರಿಶಿನ-ಕುಂಕುಮ, ಕಾಯಿ, ಹಣ್ಣು ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

Advertisement

ಇದನ್ನೂ ಓದಿ: Tender Scam: ಹಿರಿಯ ಐಎಎಸ್ ಅಧಿಕಾರಿ, ಮಾಜಿ ಆರ್‌ಜೆಡಿ ಶಾಸಕ ಅರೆಸ್ಟ್

Advertisement

Udayavani is now on Telegram. Click here to join our channel and stay updated with the latest news.

Next