ಮೈಸೂರು: ಕಾಂಗ್ರೆಸ್ ಹೈಕಮಾಂಡ್‌ಗೆ ರಾಜ್ಯ ಕಾಂಗ್ರೆಸ್ ನಾಯಕರು ಕಪ್ಪ ಕಾಣಿಕೆ ಸಲ್ಲಿರುವುದು ಡೈರಿಯಲ್ಲಿ ಉಲ್ಲೇಖ ವಾಗಿರುವ ಬೆನ್ನಲ್ಲೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿರುವ ಬಿಜೆಪಿ ನಾಯಕರು ನಗರದಲ್ಲಿ ಶನಿವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ನಗರದ ರಾಮಕೃಷ್ಣನಗರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದ ನ್ಯೂ ಕಾಂತರಾಜ ಅರಸ್ ರಸ್ತೆಯಲ್ಲೇ ಧರಣಿ ಕುಳಿತ ಬಿಜೆಪಿ ಮುಖಂಡರು ಹಾಗೂ ಕಾರ್ಯ ಕರ್ತರು, ಕಾಂಗ್ರೆಸ್ ಹೈಕಮಾಂಡ್‌ಗೆಕಪ್ಪ ನೀಡಿರುವ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಧಿಕ್ಕಾರದ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿ ಸಿದರು. ಅಲ್ಲದೆ ಹೈಕಮಾಂಡ್‌ಗೆ ಕೋಟ್ಯಂತರ ರೂ. ಕಪ್ಪನೀಡಿರುವ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ್ ಮಾತನಾಡಿ, ಭ್ರಷ್ಟಾಚಾರ ಸಾಬೀತು ಮಾಡಿದರೆ ಸನ್ಯಾಸತ್ವ ತೆಗೆದು ಕೊಳ್ಳುತ್ತೇನೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಸನ್ಯಾಸತ್ವ ಎಂಬುದು ಪವಿತ್ರವಾಗಿದ್ದು ಇವರಂತಹ ಸಳ್ಳುರು, ಲೂಟಿಕೋರರು ಆ ಸ್ಥಾನ ತೆಗೆದುಕೊಂಡು ಅದರ ಘನತೆ ಹಾಳು ಮಾಡುವುದು ಬೇಡ, ನೀವು ರಾಜೀನಾಮೆ ನೀಡಬೇಕು. ನಿಮಗೆ ಸರಿಯಾದ ಜಾಗ ಜೈಲು, ಹೀಗಾಗಿ ನೀವು ಜೈಲಿಗೆ ಹೋಗಬೇಕಾದ ವ್ಯಕ್ತಿಯೇ ಹೊರತು ಸನ್ಯಾಸ ತೆಗೆದುಕೊಳ್ಳುವ ವ್ಯಕ್ತಿತ್ವ ನಿಮ್ಮದಲ್ಲ. ನೀವು ಸಿಎಂ ಕುರ್ಚಿ ಬಿಡಬೇಕು ಅಲ್ಲಿಯವರಗೂ ಬಿಜೆಪಿ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಬರಗಾಲದ ಹಣವನ್ನು ನಿಮ್ಮ ಹೈಕಮಾಂಡ್‌ಗೆ ರವಾನಿಸಿರುವ ನಿಮ್ಮದು 420 ಸರ್ಕಾರವಾಗಿದ್ದು, ಬಿ.ಎಸ್. ಯಡಿಯೂರಪ್ಪಅವರು ಕೆಲದಿನಗಳ ಹಿಂದಯೇ ಡೈರಿ ವಿಷಯ ಬಹಿರಂಗ ಮಾಡಿದಾಗ ಕಾಂಗ್ರೆಸ್‌ನವರು ಹಗುರವಾಗಿ ಮಾತನಾಡಿ ಲೇವಡಿ ಮಾಡಿದರು. ಇದೀಗ ನೀವು ಜನತೆಗೆ ಉತ್ತರ ಕೊಡಲೇಬೇಕು ಎಂದು ಅವರು ಆಗ್ರಹಿಸಿದರು. ಮಾಜಿ ಸಚಿವ ಎಸ್.ಎ. ರಾಮದಾಸ್ ಮಾತನಾಡಿ, ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ತಮ್ಮನ್ನು ಬಂಧಿಸಲಾಗಿದೆ.
ಇದು ಪೊಲೀಸರ ತಪ್ಪಲ್ಲ, ಬದಲಾಗಿ ರಾಜ್ಯ ಸರ್ಕಾರದ ದೌರ್ಜನ್ಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕವಾಗಿ ರಾಜೀನಾಮೆ ಕೊಡುವವರೆಗೂ ಮತ್ತು ಅವರ ಭ್ರಷ್ಟಾಚಾರ ಸಾಬೀತು ಹಾಕಿ ಜೈಲು ಸೇರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದ¸ìದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ. ಶಿವಣ್ಣ, ನಗರಾಧ್ಯಕ್ಷ ಡಾ. ಮಂಜುನಾಥ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.