Advertisement

ಬ್ಲ್ಯಾಕ್ ಪ್ಯಾಂಥರ್ ಖ್ಯಾತಿಯ ಹಾಲಿವುಡ್ ಸ್ಟಾರ್ ನಟ ಚಾಡ್ ವಿಕ್ ಬೋಸ್ ಮನ್ ಇನ್ನಿಲ್ಲ

01:14 PM Aug 29, 2020 | Nagendra Trasi |

ಮಣಿಪಾಲ: ಬ್ಲ್ಯಾಕ್ ಪ್ಯಾಂಥರ್ ಖ್ಯಾತಿಯ ಹಾಲಿವುಡ್ ಹೀರೋ “ಚಾಡ್ ವಿಕ್ ಬೋಸ್ ಮನ್ (43) ತೀವ್ರ ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿರುವುದಾಗಿ ಮೂಲಗಳು ತಿಳಿಸಿವೆ.

Advertisement

ಬೋಸ್ ಮನ್ ಅವರು ಲಾಸ್ ಏಂಜಲೀಸ್ ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದು, ಬೋಸ್ ಮನ್ ಅವರು ಪತ್ನಿ ಹಾಗೂ ಕುಟುಂಬ ಸದಸ್ಯರು ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿರುವುದಾಗಿ ಬೋಸ್ ಮನ್ ಪ್ರಚಾರಕರ್ತ ನಿಕಿ ಅಸೋಸಿಯೇಟೆಡ್ ಪ್ರೆಸ್ ಗೆ ತಿಳಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ದೊಡ್ಡ ಕರುಳು ಕ್ಯಾನ್ಸರ್ ನಿಂದ ಬ್ಲ್ಯಾಕ್ ಪ್ಯಾಂಥರ್ ಬಳಲುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೋಸ್ ಮನ್ ಸಾವನ್ನಪ್ಪಿರುವುದಾಗಿ ಕುಟುಂಬ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ನೀನೊಬ್ಬ ನಿಜವಾದ ಹೋರಾಟಗಾರ, ಚಾಡ್ ವಿಕ್ ನಿಜಕ್ಕೂ ಎಲ್ಲದಕ್ಕೂ ಅರ್ಹ ವ್ಯಕ್ತಿಯಾಗಿದ್ದಾರೆ. ಸಿನಿಮಾಗಳ ಮೂಲಕವೇ ಎಲ್ಲರ ಪ್ರೀತಿ ಪಾತ್ರರಾಗಿದ್ದೀರಿ. ಅನಾರೋಗ್ಯದ ನಡುವೆಯೇ ಬೋಸ್ ಮನ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದರು. ಕಿಮೋ ಥೆರಪಿ ಸಂದರ್ಭದಲ್ಲಿಯೂ “ಅವೆಂಜರ್ಸ್, ಬ್ಲ್ಯಾಕ್ ಪ್ಯಾಂಥರ್, 21 ಬ್ರಿಡ್ಜ್, ಡಾ.ಬ್ಲಡ್ ಸೇರಿದಂತೆ ಹಲವಾರು ಪ್ರಮುಖ ಸಿನಿಮಾಗಳಲ್ಲಿ ನಟಿಸಿದ್ದರು.

Advertisement

ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದರೂ ಕೂಡಾ ಬೋಸ್ ಮನ್ ಯಾವತ್ತೂ ಸಾರ್ವಜನಿಕವಾಗಿ ಆ ಬಗ್ಗೆ ಹೇಳಿಕೊಂಡಿರಲಿಲ್ಲವಾಗಿತ್ತು.  ದಕ್ಷಿಣ ಕರೋಲಿನಾದಲ್ಲಿ ಬೋಸ್ ಮನ್ ಜನಿಸಿದ್ದು, ಹಾರ್ವರ್ಡ್ ಯೂನಿರ್ವಸಿಟಿಯಲ್ಲಿ ಪದವಿ ಪಡೆದಿದ್ದರು.

ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ ಬೋಸ್ ಮನ್ 2003ರಲ್ಲಿ ಟೆಲಿವಿಷನ್ ನಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 2008ರಲ್ಲಿ ದ ಎಕ್ಸ್ ಪ್ರೆಸ್, 2012ರ ದ ಕಿಲ್ ಹೋಲ್, 2013ರಲ್ಲಿ ಬೇಸ್ ಬಾಲ್ ದಂತಕತೆ, ಜಾಕಿ ರಾಬಿನ್ ಸನ್ ಜೀವನಾಧಾರಿತ “42” ಎಂಬ ಹೆಸರಿನ ಹಾಲಿವುಡ್ ಸಿನಿಮಾದಲ್ಲಿ ನಟಿಸಿದ್ದರು. ನಂತರ ಡ್ರಾಫ್ಟ್ ಡೇ, ಗಾಡ್ಸ್ ಆಫ್ ಈಜಿಪ್ಟ್, ಕ್ಯಾಪ್ಟನ್ ಅಮೆರಿಕಾ, ಮಾರ್ಷಲ್, 2018ರಲ್ಲಿ ಬಿಡುಗಡೆ ಕಂಡಿದ್ದ ಬ್ಲ್ಯಾಕ್ ಪ್ಯಾಂಥರ್ ಬೋಸ್ ಮನ್ ಗೆ ಅಪಾರ ಜನಪ್ರಿಯತೆ ತಂದು ಕೊಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next