Advertisement

ಕಪ್ಪುಹಣ ಮಾಹಿತಿ ವಿನಿಮಯ ಇನ್ನು ಸುಲಭ

08:05 AM Aug 07, 2017 | Harsha Rao |

ಹೊಸದಿಲ್ಲಿ: ಕಪ್ಪುಹಣ ಕುರಿತಾಗಿ ಸ್ವಿಸ್‌ ಬ್ಯಾಂಕ್‌ಗಳ ಮಾಹಿತಿಯನ್ನು ಹಂಚಿಕೊಳ್ಳಲು ಸ್ವಯಂಚಾಲಿತ ವಿಧಾನವನ್ನು ಸ್ವಿಜರ್ಲೆಂಡ್‌ ಶುರುಮಾಡಲಿದ್ದು, ಇದಕ್ಕೆ ಪೂರಕವಾಗಿ, ಭಾರತದ ದತ್ತಾಂಶ ಭದ್ರತಾ ಕಾನೂನುಗಳಿಗೆ ತೃಪ್ತಿ ವ್ಯಕ್ತಪಡಿಸಿದೆ. 

Advertisement

ಸ್ವಿಸ್‌ ಕಾನೂನು ಪ್ರಕಾರ, ಆದೇಶ ಹಂಚಿಕೊಳ್ಳಲಿರುವ ಬ್ಯಾಂಕಿಂಗ್‌ ಮಾಹಿತಿ ಹಂಚಿಕೊಂಡರೆ, ಸೋರಿಕೆ ಮಾಡಿದರೆ, ಕೂಡಲೇ ಮಾಹಿತಿ ಹಂಚುವಿಕೆ ತಡೆಹಿಡಿಯಲಾಗುತ್ತದೆ. ಇದಕ್ಕೆ ಪೂರಕವಾಗಿ ವಿಸ್ತೃತ ಅಧಿಸೂಚನೆಯನ್ನು ಸ್ವಿಸ್‌ ಹೊರಡಿಸಿದ್ದು, “ಹಣಕಾಸು ಖಾತೆಗಳ ಬಗ್ಗೆ ಸ್ವಯಂಚಾಲಿತ ಮಾಹಿತಿ ಹಂಚಿಕೆ ವಿಧಾನ’ದಲ್ಲಿ ಈ ವಿಚಾರ ಹೇಳಲಾಗಿದೆ.

ಭಾರತದೊಂದಿಗೆ ಮಾಹಿತಿ ಹಂಚಿಕೆ ಶುರುವಾಗುವ ಅಧಿಕೃತ ದಿನಾಂಕ ಘೋಷಿಸುವ ನಿರ್ಧಾರವನ್ನು ಸ್ವಿಜರ್ಲೆಂಡ್‌ನ‌ ಪರಮೋತ್ಛ ಆಡಳಿತ ಸಮಿತಿ ಸ್ವಿಸ್‌ ಫೆಡರಲ್‌ ಕೌನ್ಸಿಲ್‌ಗೆ ವಹಿಸಿದ್ದಾಗಿ ಹೇಳಿದೆ. 2018ರಲ್ಲಿ ಮಾಹಿತಿ ವಿನಿಮಯ ವ್ಯವಸ್ಥೆ ಶುರುವಾಗಲಿದ್ದು, 2019ರಲ್ಲಿ ಮೊದಲ ಹಂತದ ಮಾಹಿತಿ ಭಾರತಕ್ಕೆ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next