ಬೆಂಗಳೂರು: ಅಮಾನ್ಯಗೊಂಡ ನೋಟುಗಳ ಬದಲಾವಣೆಗೆ ಸಿದ್ಧತೆ ನಡೆಸಿದ್ದ ನಾಲ್ವರು ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಹಣದ ಸಮೇತ ಬಂಧಿಸಿದ್ದಾರೆ. ಆರೋಪಿಗಳಿಂದ ಹಳೆಯ 500 ಮತ್ತು 1000 ರೂ. ಮುಖ ಬೆಲೆಯ 1 ಕೋಟಿ ರೂ. ಮೌಲ್ಯದ ನೋಟುಗಳು, ಒಂದು ಫಾರ್ಚೂನರ್ ಕಾರು, 4 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಲಕ್ಷ್ಮೀಪತಿ, ಕಾಂತರಾಜುಗೌಡ, ಬೈಯಪ್ಪ ರೆಡ್ಡಿ ಮತ್ತು ಶ್ಯಾಮ್ ಬಂಧಿತರು.
ಮತ್ತೂಬ್ಬ ಆರೋಪಿ ರಾಜೀವ್ ಗುಪ್ತ ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳು ರೆಸಿಡೆನ್ಸಿ ರಸ್ತೆಯ ಮೇಯೋ ಹಾಲ್ ಕೋರ್ಟ್ ಹತ್ತಿರದ ನಂದಿನಿ ಮಿಲ್ಕ್ ಪಾರ್ಲರ್ ಬಳಿ ಫಾರ್ಚೂನರ್ ಕಾರಿನಲ್ಲಿ ನೋಟುಗಳ ಬದಲಾವಣೆ ಸಿದ್ಧತೆ ನಡೆಸಿದ್ದರು. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹೋದರರಾಗಿರುವ ಬಂಧಿತ ಲಕ್ಷ್ಮೀಪತಿ ಮತ್ತು ಕಾಂತರಾಜು ಬಾಣಸವಾಡಿಯಲ್ಲಿ ನೆಲೆಸಿದ್ದು, ರಿಯಲ್ ಎಸ್ಟೇಟ್ ವ್ಯವಹಾರ ನಡೆಸುಧಿತ್ತಿದ್ದಾರೆ. ಇನ್ನುಳಿದ ಆರೋಪಿಗಳು ಇವರ ವ್ಯವಧಿಹಾಧಿರಕ್ಕೆ ಸಹಾಯ ಮಾಡುತ್ತಿದ್ದರು. ಪತ್ತೆಯಾಧಿಗಿರುವ ಕೋಟಿ ಮೌಲ್ಯದ ಹಳೇ ನೋಟುಧಿಗಳು ಲಕ್ಷ್ಮೀಪತಿ ಮತ್ತು ಕಾಂತರಾಜು ಸೇರಿವೆ.
ನವೆಂಬರ್‌ನಲ್ಲಿ ನೋಟುಗಳು ಅಮಾನ್ಯಗೊಂಡ ನಂತರ ಮನೆಯಲ್ಲಿದ್ದ ಹಳೇ ನೋಟುಗಳನ್ನು ಸಹೋದರರು ಬದಲಾವಣೆ ಮಾಡಿಕೊಂಡಿರಲಿಲ್ಲ. ಈ ಬಗ್ಗೆ ಆಪ್ತರೊಂದಿಗೆ ಚರ್ಚಿಸಿ, ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬರ ಸಲಹೆ ಮೇರೆಗೆ ಆಡುಗೋಡಿ ನಿವಾಸಿ, ಬಡ್ಡಿ ವ್ಯವಹಾರ ನಡೆಸುವ ರಾಜೀವ್ ಗುಪ್ತಾನನ್ನು ಆರೋಪಿಗಳು ಸಂಪರ್ಕಿಸಿದ್ದರು. ಶೇ.60ರಷ್ಟು ಹೊಸ ನೋಟುಗಳು ಬದಲಾವಣೆ ಮಾಡಿಕೊಡುವುದಾಗಿ ರಾಜೀವ್ ಗುಪ್ತಾ ತಿಳಿಸಿದ್ದ.
ಅದರಂತೆ ಭಾನುವಾರ ಮಧ್ಯಾಹ್ನ ಮೇಯೋ ಹಾಲ್ ಬಳಿ ಹಳೇ ನೋಟುಗಳನ್ನು ತರಲು ಸೂಚಿಸಿದ್ದ. ಈ ನಡುವೆ ರಾಜೀವ್ ಗುಪ್ತಾ ಮತ್ತು ಲಕ್ಷ್ಮೀಪತಿ ನಡುವೆ ನಡೆದ ದಂಧೆಯ ಮಾತುಕತೆ ಬಾತ್ಮೀದಾರರೊಬ್ಬರಿಗೆ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಡ್ಡಿ ವ್ಯವಹಾರ ನಡೆಸುವ ರಾಜೀವ್ ಗುಪ್ತಾ ನೋಟು ಅಮಾನ್ಯಗೊಂಡ ಬಳಿಕ ಬ್ಲ್ಯಾಕ್ ಆ್ಯಂಡ್ ವೈಟ್ ದಂಧೆಯಲ್ಲಿ ತೊಡಗಿರುವ ಅನುಮಾನವಿದೆ. ಅಲ್ಲದೇ ಈತನ ಮೊಬೈಲ್ ನಂಬರ್ ಸಿಡಿಆರ್ ಪರಿಶೀಲಿಸುತ್ತಿದ್ದು, ಕೆಲ ರಿಯಲ್ ಎಸ್ಟೇಟ್ ಉದ್ಯಮಿಗಳು, ಬಿಲ್ಡರ್‌ಗಳ ಜತೆ ನೇರ ಸಂಪರ್ಕದಲ್ಲಿರುವುದು ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.