ವಿಜಯಪುರ: ಎಸ್ಎಸ್ಎಲ್ಸಿ. ಪರೀಕ್ಷೆ ಬರೆಯಲು ಅಣಿಯಾಗಿದ್ದ ವಿದ್ಯಾರ್ಥಿಯೊಬ್ಬನ ಫೋಟೋಗೆ ಪೂಜೆ ಸಲ್ಲಿಸಿ, ವಾಮಾಚಾರ ಮಾಡಿರುವ ಘಟನೆ ಅರಕೇರಿ ತಾಂಡಾದಲ್ಲಿ ಜರುಗಿದೆ.
ಸೋಮವಾರ ಎಸ್‌ಎಸ್ಎಲ್ ಸಿ ಪರೀಕ್ಷೆ ಬರೆಯಲು ಸಿದ್ಧವಾಗಿದ್ದ ವಿದ್ಯಾರ್ಥಿಯ ಫೋಟೋ, ಪ್ರವೇಶ ಪತ್ರದ ನಕಲು ಪ್ರತಿ ಇರಿಸಿ, ಮಡಿಕೆ ಇರಿಸಿ, ಹೂಮಾಲೆ ಹಾಕಿ ಕಾಯಿ, ಕರ್ಪೂರ ಸಹಿತ ಪೂಜೆ ಮಾಡುವ ಮೂಲಕ ವಿಕೃತಿ ಮೆರೆಯಲಾಗಿದೆ.
ವಿಜಯಪುರ ತಾಲೂಕಿನ ಅರಕೇರಿ ತಾಂಡಾ 1 ರಲ್ಲಿ ನಡೆದಿದೆ. ತಾಂಡಾ ಬಳಿಯ ರಾಷ್ಟ್ರೀಯ ಹೆದ್ದಾರಿ 50 ಪರಿಸರದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷಾರ್ಥಿ ಸಚಿನ್ ಎಂಬ ವಿದ್ಯಾರ್ಥಿಯ ಪೋಟೋ ಇರಿಸಿ, ದಿವಂಗತ ಸಚಿನ್ ಎಂದು ಬರೆಸಿ ಈ ವಿಕೃತಿ ಮೆರೆಯಲಾಗಿದೆ.
ಇದನ್ನೂ ಓದಿ:ಮೈಸೂರು: ಪರೀಕ್ಷೆ ಬರೆಯುವ ವೇಳೆ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು
ವಿದ್ಯಾರ್ಥಿ ಪರೀಕ್ಷೆಗೆ ತೆರಳುವ ಮುನ್ನವೇ ಈ ವಿಕೃತಿ ಮೆರೆದಿರುವ ವಿಷಯ ತಿಳಿದು ವಿದ್ಯಾರ್ಥಿ ಸಚಿನ್ ಹಾಗೂ ಪಾಲಕರು ಆತಂಕಕ್ಕೆ ಸಿಲುಕಿದ್ದರು. ಘಟನೆಯಿಂದ ವಿದ್ಯಾರ್ಥಿ ಭಯಭೀತನಾಗಿದ್ದ. ಘಟನೆಯಿಂದ ಪೋಷಕರೂ ಭಯ ವ್ಯಕ್ತಪಡಿಸಿದ್ದರು.
ಆದರೆ ನೆರೆದವರು ಸಚಿನ್ ಹಾಗೂ ಪಾಲಕರಿಗೆ ಧೈರ್ಯ ತುಂಬಿ, ಪರೀಕ್ಷೆಗೆ ಕಳಿಸಿದ್ದಾರೆ.
ನಮ್ಮ ಮಗನ ಪೋಟೋ ವಾಮಾಚಾರದ ಫೂಜೆ ಸಲ್ಲಿಸಲಾಗಿದೆ. ಈ ದುಷ್ಕೃತ್ಯ ಎಸಗಿದವರನ್ನು ಪೊಲೀಸರು ಪತ್ತೆಹಚ್ಚಿ ಕ್ರಮಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.