Advertisement

ಮುಷ್ಟಿಗೇರಿ ಗ್ರಾಮದ ಬ್ಲ್ಯಾಕ್ ಫಂಗಸ್ ರೋಗಿ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಸಾವು

08:51 PM May 23, 2021 | Team Udayavani |

ಕೆರೂರ : ಇಲ್ಲಿಗೆ ಸಮೀಪದ ಮುಷ್ಟಿಗೇರಿ ಗ್ರಾಮದ ಬ್ಲಾಕ್ ಫಂಗಸ್ ರೋಗಿ ಮಂಜುನಾಥ ದತ್ತಾತ್ರೇಯ ಕುಲಕರ್ಣಿ(42) ರವಿವಾರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Advertisement

ಕೋವಿಡ್ ಸೋಂಕಿತನಾಗಿದ್ದ ಮಂಜುನಾಥಗೆ ಬ್ಲಾಕ್ ಫಂಗಸ್ (ಕಪ್ಪುಶೀಲೀಂಧ್ರ) ರೋಗವು ಮೇ, 21ರಂದು ಪತ್ತೆಯಾಗಿತ್ತು. ಮೊದಲು ಕೊರೊನ ರೋಗದಿಂದ ಬಾಗಲಕೋಟೆ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಈತ ಮೇ 21 ರಂದು ಕಪ್ಪು ಶೀಲೀಂದ್ರ ಸೋಂಕು ಖಚಿತವಾದ ನಂತರ ಬಾಗಲಕೋಟ ಜಿಲ್ಲಾಡಳಿತ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆಂದು ರವಾನಿಸಲಾಗಿತ್ತು.

ಅದರೆ ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಮೃತಪಟ್ಟನು.ಮದ್ಯಾಹ್ನ ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿತು.

ಇದನ್ನೂ ಓದಿ :ಕೋವಿಡ್‌ನಿಂದಾಗಿ ಚೀನಾದಿಂದ ಭಾರತಕ್ಕೆ ಬಂದರೂ ಸೋಂಕಿಗೆ ಬಲಿಯಾದ ಸಂಶೋಧಕ

Advertisement

Udayavani is now on Telegram. Click here to join our channel and stay updated with the latest news.

Next