Advertisement

ಬ್ಲ್ಯಾಕ್‌ ಫಂಗಸ್‌ ರೋಗಿಗೆ ಸಿಗ್ತಿಲ್ಲ ಚಿಕಿತ್ಸೆ

09:08 PM May 26, 2021 | Team Udayavani |

ಹಾವೇರಿ: ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತ ಮಹಿಳೆಯೊಬ್ಬರಿಗೆ ಬ್ಲ್ಯಾಕ್‌ ಫಂಗಸ್‌ ರೋಗ ಕಂಡು ಬಂದಿದ್ದು, ಚಿಕಿತ್ಸೆಗೆ ಸೂಕ್ತ ಔಷಧ ವಿಲ್ಲದೇ ಸಾವು ಬದುಕಿನ ನಡುವೆ ಹೋರಾಡುವಂತಾಗಿದೆ.

Advertisement

ಹಾನಗಲ್ಲ ತಾಲೂಕಿನ ಮಾಸನಕಟ್ಟಿ ಗ್ರಾಮದ ಲಲಿತಾ ಸಂಕಣ್ಣನವರ ಎಂಬ 45 ವರ್ಷದ ಮಹಿಳೆಯಲ್ಲಿ ಬ್ಲ್ಯಾಕ್‌ ಫಂಗಸ್‌ ರೋಗ ಕಾಣಿಸಿಕೊಂಡಿದೆ. ಅವರನ್ನು ಹುಬ್ಬಳ್ಳಿ ಕಿಮ್ಸ್‌ಗೆ ಕಳುಹಿಸಿದ್ದರೂ ಅಲ್ಲಿ ದಾಖಲಿಸಿಕೊಳ್ಳದೇ ವಾಪಸ್‌ ಕಳುಹಿಸಿದ್ದಾರೆ. ನಮ್ಮಲ್ಲೇ ಬ್ಲ್ಯಾಕ್‌ ಫಂಸಗ್‌ ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ನಿಮ್ಮಲ್ಲೇ ನೋಡಿಕೊಳ್ಳಿ ಎಂದು ಕಿಮ್ಸ್‌ನವರು ಹೇಳಿ ಕಳುಹಿಸಿದ್ದಾರೆ. ಈ ಮಹಿಳೆಗೆ ಕೊರೊನಾ ಪಾಸಿಟಿವ್‌ ಬಂದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ದಿನಗಳ ಹಿಂದೆ ಬ್ಲ್ಯಾಕ್‌ ಫಂಗಸ್‌ ಲಕÒ‌ಣಗಳು ಕಂಡು ಬಂದಿವೆ. ಇಲ್ಲಿಯ ಜಿಲ್ಲಾಸ್ಪತ್ರೆಗೆ ಬ್ಲ್ಯಾಕ್‌ ಫಂಗಸ್‌ ರೋಗಿಗಳಿಗೆ ನೀಡುವ ಯಾವ ಔಷಧಿಯೂ ಪೂರೈಕೆಯಾಗಿಲ್ಲ. ಅತ್ತ ಹುಬ್ಬಳ್ಳಿ ಕಿಮ್ಸ್‌ನಲ್ಲೂ ಜಿಲ್ಲೆಯ ಫಂಗಸ್‌ ರೋಗಿಗಳನ್ನು ದಾಖಲಿಸಿಕೊಳ್ಳುತ್ತಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಔಷಧ ಇಲ್ಲದ ಕಾರಣ ಕೊರೊನಾ ಪಾಸಿಟಿವ್‌ ಸೋಂಕಿತರಿಗೆ ನೀಡುವ ಚಿಕಿತ್ಸೆಯನ್ನಷ್ಟೇ ನೀಡಲಾಗುತ್ತಿದೆ. ಎಲ್ಲೆಡೆ ಬ್ಲ್ಯಾಕ್‌, ವೈಟ್‌ ಮತ್ತು ಹೊಸದಾಗಿ ಹಳದಿ ಫಂಗಸ್‌ ರೋಗ ಕಾಣಿಸಿಕೊಂಡು ಆತಂಕ ಮೂಡಿಸಿದೆ. ಆದರೆ ಜಿಲ್ಲೆಯಲ್ಲಿ ಈ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯ ಔಷ ಧಿಯೇ ಇಲ್ಲ ಎನ್ನುವುದು ಆತಂಕ ಮೂಡಿಸಿದೆ.

ಜಿಲ್ಲಾಸ್ಪತ್ರೆಯಲ್ಲೇ ಔಷ  ಧ ಕೊರತೆ: ಇತ್ತೀಚೆಗೆ ಜಿಲ್ಲೆಯಲ್ಲಿ ಬ್ಲ್ಯಾಕ್‌ ಫಂಗಸ್‌ ರೋಗ ಕಂಡು ಬರುತ್ತಿದ್ದು, ಜಿಲ್ಲಾಡಳಿತ ಮುನ್ನೆಚ್ಚರಿಕೆಯಾಗಿ ಸೂಕ್ತ ಔಷಧ ಸಂಗ್ರಹಣೆಗೆ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಜಿಲ್ಲಾಡಳಿತ ಮಾತ್ರ ನಿರ್ಲಕ್ಷ್ಯ ತೋರುತ್ತಿದ್ದು, ಸೂಕ್ತ ಸಮಯಕ್ಕೆ ಔಷ ಧ ತರಿಸಿಕೊಳ್ಳದೇ ರೋಗಿಗಳ ಪ್ರಾಣದ ಜತೆ ಚೆಲ್ಲಾಟವಾಡುತ್ತಿದೆ ಎಂಬ ಮಾತುಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.

ಜಿಲ್ಲಾಸ್ಪತ್ರೆಯಲ್ಲಿಯೇ ಬ್ಲ್ಯಾಕ್‌ ಫಂಗಸ್‌ ರೋಗಿಗಳ ಚಿಕಿತ್ಸೆಗೆ ಔಷಧ ಕೊರತೆ ಸಮಸ್ಯೆಯಾಗಿದ್ದರೆ, ತಾಲೂಕು ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳ ಸ್ಥಿತಿ ಏನು ಎಂಬ ಪ್ರಶ್ನೆ ಎದುರಾಗಿದೆ. ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ರೋಗಿಗಳ ಚಿಕಿತ್ಸೆಗೆ ಔಷಧ ತರಿಸಿ ಸೂಕ್ತ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು ಎಂಬುದು ರೋಗಿಗಳ ಸಂಬಂಧಿಕರ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next