ನವದೆಹಲಿ: ದೇಶದಲ್ಲಿ ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿರುವ ನಡುವೆಯೇ ಉತ್ತರಪ್ರದೇಶದಲ್ಲಿ 73 ಮಂದಿ ಕೋವಿಡ್ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸುಮ್ ಸುಮ್ನೆ ಕೋವಿಡ್ ಚೆಕ್ ಮಾಡಿದ್ರೆ ಸರಿ ಇರಲ್ಲ, ನನಗೆ ಡಿಸಿ ಗೊತ್ತು: ವ್ಯಕ್ತಿಯಿಂದ ರಂಪಾಟ
73 ಪ್ರಕರಣಗಳಲ್ಲಿ ವಾರಣಾಸಿಯಲ್ಲಿ 20 ಪ್ರಕರಣ, ಲಕ್ನೋದಲ್ಲಿ 15, ಗೋರಖ್ ಪುರದಲ್ಲಿ 10, ಪ್ರಯಾಗ್ ರಾಜ್ ನಲ್ಲಿ ಆರು, ಗೌತಮ್ ಬುದ್ಧ ನಗರದಲ್ಲಿ ಐದು, ಮೀರತ್ ನಲ್ಲಿ ನಾಲ್ಕು, ಕಾನ್ಪುರ್ ನಲ್ಲಿ ಮೂರು ಪ್ರಕರಣಗಳು ವರದಿಯಾಗಿದೆ ಎಂದು ವಿವರಿಸಿದೆ.
ಕಾನ್ಪುರದಲ್ಲಿ ಇಬ್ಬರು ಕೋವಿಡ್ 19 ರೋಗಿಗಳು ಸಾವನ್ನಪ್ಪಿದ್ದು, ಮಥುರಾದಲ್ಲಿ ಇಬ್ಬರು, ಲಕ್ನೋದಲ್ಲಿ ವ್ಯಕ್ತಿಯೊಬ್ಬರು ಬ್ಲ್ಯಾಕ್ ಫಂಗಸ್ ಸೋಂಕಿನಿಂದ ಕಣ್ಣಿನ ದೃಷ್ಟಿ ಕಳೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಕೋವಿಡ್ ನಡುವೆ ಆರಂಭಿಕ ಹಂತದಲ್ಲಿಯೇ ಮಾರಣಾಂತಿಕ ಬ್ಲ್ಯಾಕ್ ಫಂಗಸ್ ಹರಡುವುದನ್ನು ತಡೆಯಲು 14 ಮಂದಿ ಆರೋಗ್ಯ ತಜ್ಞರ ಸಮಿತಿಯೊಂದನ್ನು ರಚಿಸುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿರ್ದೇಶನ ನೀಡಿದ್ದಾರೆ.