Advertisement

ಆಗಾಗ ಮಾಸ್ಕ್ ಬದಲಿಸುತ್ತಿರಿ : ಬ್ಲ್ಯಾಕ್‌ ಫಂಗಸ್ ಹೊಡೆದೊಡಿಸಿ

03:09 PM May 24, 2021 | Team Udayavani |

ದೇಶದಲ್ಲಿ ರಕ್ಕಸ ಕೋವಿಡ್ ಮಹಾಮಾರಿ ಅಟ್ಟಹಾಸದ ಜೊತೆಗೆ ಬ್ಲ್ಯಾಕ್ ಫಂಗಸ್ ಕಾಯಿಲೆ ಕೂಡ ಭೀತಿ ಹುಟ್ಟಿಸುತ್ತಿದೆ. ಈಗಾಗಲೇ ಹಲವು ಜನರನ್ನು ಬಲಿ ಪಡೆದಿರುವ ಬ್ಲ್ಯಾಕ್ ಫಂಗಸ್ ದೇಶದ ಜನತೆಯನ್ನು ಬೆಂಬಿಡದೆ ಕಾಡುತ್ತಿದೆ.

Advertisement

ಹಾಗಾದರೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುವುದು ಹೇಗೆ ? ಈ ಕಾಯಿಲೆ ಹುಟ್ಟಿಕೊಳ್ಳಲು ಕಾರಣಗಳು ಏನು ? ಎಂಬುದರ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ.

ಬ್ಲ್ಯಾಕ್‌ ಫಂಗಸ್‌ಗೆ ಪ್ರಮುಖ ಕಾರಣವೇನು?

ತಜ್ಞರ ಪ್ರಕಾರ ಕೋವಿಡ್‌ 19 ಸೋಂಕಿತರಲ್ಲಿ ನಿಯಂತ್ರಣಕ್ಕೆ ಬಾರದ ಮಧುಮೇಹ ಸಮಸ್ಯೆಯಿದ್ದು ಅಂಥವರಿಗೆ ಸ್ಟಿರಾಯ್ಡ್, ಟೊಸಿಲಿಜುಮಾಬ್ ಹಾಗೂ ವೆಂಟಿಲೇಟರ್‌ ಚಿಕಿತ್ಸೆ ನೀಡಿದಾಗ ಈ ರೀತಿಯ ಮ್ಯೂಕೋರ್ಮೈಕೋಸಿಸ್ ಅಥವಾ ಬ್ಲ್ಯಾಕ್‌ ಫಂಗಸ್‌ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ.

ಏಮ್ಸ್‌ನ ಸೀನಿಯರ್‌ ನ್ಯೂರೋಸರ್ಜನ್ ಆಗಿರುವ ಡಾ. ಪಿ ಸರತ್‌ ಚಂದ್ರ ಅವರು ‘ ಕೋವಿಡ್ 19ಗೆ 6 ವಾರಗಳಿಗಿಂತ ಅಧಿಕ ಚಿಕಿತ್ಸೆ ಪಡೆದವರಲ್ಲಿ ಬ್ಲ್ಯಾಕ್‌ ಫಂಗಸ್‌ ಬರುವ ಅಪಾಯ ಅಧಿಕ’ ಎಂದು ಹೇಳಿದ್ದಾರೆ.

Advertisement

ಬ್ಲ್ಯಾಕ್‌ ಫಂಗಸ್‌ಗೆ ಒಂದು ಪ್ರಮುಖ ಕಾರಣವೆಂದರೆ ನಿಯಂತ್ರಣಕ್ಕೆ ಬಾರದ ಮಧುಮೇಹ, ಅಲ್ಲದೆ ವೆಂಟಿಲೇಟರ್‌ನಲ್ಲಿರುವ ರೋಗಿಯ ಚೇತರಿಕೆಗೆ ಬಳಸುತ್ತಿರುವ ಸ್ಟಿರಾಯ್ಡ್ ಹಾಗೂ ಟೊಸಿಲಿಜುಮಾ, ಆಕ್ಸಿಜನ್‌ ಸಪ್ಲಿಮೆಂಟ್ ಇವೆಲ್ಲಾ ಬ್ಲ್ಯಾಕ್‌ ಫಂಗಸ್‌ಗೆ ಪ್ರಮುಖ ಕಾರಣಗಳಾಗಿವೆ.

ಕೋಲ್ಡ್ ಆಕ್ಸಿಜನ್‌ನಿಂದ ಕೂಡ ಬ್ಲ್ಯಾಕ್‌ ಫಂಗಸ್‌ ಬರುವುದು

ರೋಗಿಗೆ ಕೋಲ್ಡ್‌ ಆಕ್ಸಿಜನ್ ನೀಡುವುದು ಮತ್ತು ಆ್ಯಂಟಿ ಫಂಗಲ್‌ ಡ್ರಗ್‌ Posaconazole ನೀಡುವುದರಿಂದಲೂ ಬ್ಲ್ಯಾಕ್‌ ಫಂಗಸ್‌ ಉಂಟಾಗುತ್ತದೆ.

ಮಾಸ್ಕ್‌ ಬದಲಾಯಿಸುತ್ತಿರಿ:

ಮಾಸ್ಕ್‌ ಅನ್ನು ತುಂಬಾ ಸಮಯ ಬಳಕೆ ಮಾಡುವುದು ಕೂಡ ಬ್ಲ್ಯಾಕ್‌ ಫಂಗಸ್‌ಗೆ ಒಂದು ಕಾರಣವಾಗಿದೆ. ಬಟ್ಟೆ ಮಾಸ್ಕ್‌ ಧರಿಸುವವರು ಪ್ರತಿದಿನ ತೊಳೆಯಬೇಕು, ಹಾಗೂ ಒಣಗಿದ ಮಾಸ್ಕ್‌ ಧರಿಸಿಬೇಕು. ಬಟ್ಟೆ ಮಾಸ್ಕ್‌ಗೆ ಇಸ್ತ್ರಿ ಹಾಕಿ ಬಳಸುವುದು ಮತ್ತಷ್ಟು ಸುರಕ್ಷಿತ. N95 ಮಾಸ್ಕ್‌ ಬಳಸುವವರು 5 ಬಾರಿ ಬಳಕೆ ಮಾಡಿದ ಬಳಿಕ ಅದನ್ನು ಡಿಸ್ಪೋಸ್ (ಕಸದ ಬುಟ್ಟಿಗೆ ಹಾಕಿ). ಒಂದೇ ಮಾಸ್ಕ್‌ ಅನ್ನು ವಾರ ಪೂರ್ತಿ ಬಳಸುವುದು, ಒದ್ದೆ ಮಾಸ್ಕ್ ಬಳಸುವುದು ಇವು ಬ್ಲ್ಯಾಕ್‌ ಫಂಗಸ್ ಅಪಾಯ ಹೆಚ್ಚಿಸುವುದು.

ಗಾಳಿ ಚೆನ್ನಾಗಿ ಓಡಾಡುವ ರೂಮಿನಲ್ಲಿರಿ :

ಕೋವಿಡ್‌ ಸೋಂಕಿನಿಂದ ಚೇತರಿಸಿದವರನ್ನು ಗಾಳಿ ಚೆನ್ನಾಗಿ ಓಡಾಡುವ ರೂಮಿನಲ್ಲಿ ಇರಿಸಿ. ಗಾಳಿ ಕಡಿಮೆ ಇರುವ ಕೋಣೆ, ವಾಶ್‌ ಮಾಡದೇ ಬಳಸುವ ಮಾಸ್ಕ್‌ ಬ್ಲ್ಯಾಕ್‌ ಫಂಗಸ್‌ ಬರಲು ಕಾರಣವಾಗುವುದು.

ಸ್ವಯಂ ಚಿಕಿತ್ಸೆ ಬೇಡ :

ಕೆಲ ಸೋಂಕಿತರು ಸ್ಟಿರಾಯ್ಡ್ ಚಿಕಿತ್ಸೆಯನ್ನು ಸ್ವಯಂ ತೆಗೆದುಕೊಳ್ಳುತ್ತಾರೆ, ಅಂಥವರಲ್ಲಿ ಕೂಡ ಈ ಬ್ಲ್ಯಾಕ್‌ ಫಂಗಸ್ ಕಂಡು ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next