Advertisement

ಅಭಿವೃದ್ಧಿ ಹೊಂದಿದ ವಾರ್ಡ್‌ಗೆ ಒಳಚರಂಡಿ ಸಮಸ್ಯೆಯೇ ಕಪ್ಪು ಚುಕ್ಕೆ!

10:46 PM Oct 12, 2019 | Team Udayavani |

ಮಹಾನಗರ: ಸಾರಿಗೆ ಸಂಪರ್ಕ ಕೊಂಡಿಯಾಗಿರುವ ಮಂಗಳೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ವಿಚಾರಣಾಧೀನ ಕೈದಿಗಳ ಜೈಲು, ಜಿಲ್ಲಾ ಪಶು ಸಂಗೋಪನ ಇಲಾಖೆ ಕಚೇರಿ, ಕಾನೂನು ಪಂಡಿತರನ್ನು ತಯಾರು ಮಾಡುವ ಕಾನೂನು ಮಹಾ ವಿದ್ಯಾಲಯ ಇರುವ ಕ್ಷೇತ್ರ ಮಹಾನಗರ ಪಾಲಿಕೆಯ ಕೊಡಿಯಾಲಬೈಲ್‌ (ನಂ. 30) ವಾರ್ಡ್‌.

Advertisement

ಬಹು ಮಹಡಿ ಅಪಾರ್ಟ್‌ಮೆಂಟ್‌ಗಳು, ಸಣ್ಣ ಮನೆಗಳು, ವಿಲ್ಲಾಗಳು, ದಲಿತ ಕಾಲನಿ ಸಹಿತ ಎಲ್ಲ ರೀತಿಯ ವಸತಿ ಕಟ್ಟಡಗಳನ್ನು ಹೊಂದಿ ರುವ ಈ ವಾರ್ಡ್‌ನ ಏಕೈಕ ಕಪ್ಪು ಚುಕ್ಕೆ ಅಂದರೆ ಅಸಮರ್ಪಕ ಒಳಚರಂಡಿ ವ್ಯವಸ್ಥೆ. ಇದರಿಂದ ಗಲೀಜು ನೀರು ತೆರೆದ ತೋಡು ಗಳಲ್ಲಿ ಹರಿಯುತ್ತಿದ್ದು, ಇದೊಂದು ಪ್ರಮುಖ, ದೀರ್ಘ‌ ಕಾಲೀನ ಸಮಸ್ಯೆ.

ಪ್ರಮುಖ ರಸ್ತೆಗಳಾದ ಲಾಲ್‌ಬಾಗ್‌- ಬಿಜೈ ವೃತ್ತ, ಕಂಗಲ್ಪಾಡಿ- ಬಿಜೈ, ಕದ್ರಿ ಕಂಬಳ ರಸ್ತೆ, ಎಂ.ಜಿ. ರಸ್ತೆಗಳಿಗೆ ಕಾಂಕ್ರೀಟ್‌ ಹಾಕಲಾಗಿದೆ. ಕಪುಚಿನ್‌ ಚರ್ಚ್‌ ಬಳಿಯಿಂದ ಕೆನರಾ ಕಾಲೇಜುವರೆಗಿನ ಜೈಲ್‌ ರೋಡ್‌, ಪಿಂಟೋಸ್‌ ಲೇನ್‌ ರಸ್ತೆಗೆ ಕಾಂಕ್ರೀಟ್‌ ಕಾಮಗಾರಿ ಬಾಕಿ ಇದೆ. ಪಿಂಟೋಸ್‌ ಲೇನ್‌ ರಸ್ತೆ ಅಲ್ಲಲ್ಲಿ ಡಾಮರು ಕಿತ್ತು ಹೋಗಿದೆ. ಕೊಡಿಯಾಲ್‌ಗ‌ುತ್ತು ರಸ್ತೆ ಉತ್ತಮವಾಗಿದೆ. ಬಲ್ಲಾಳ್‌ಬಾಗ್‌ನಿಂದ ವಿವೇಕ ನಗರ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಕಡೆ ಸಾಗುವ ರಸ್ತೆ ತಕ್ಕ ಮಟ್ಟಿಗೆ ಚೆನ್ನಾಗಿದೆ.

5 ವರ್ಷಗಳಲ್ಲಿ ಈ ವಾರ್ಡ್‌ನಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ರಸ್ತೆ, ಫುಟ್‌ಪಾತ್‌ಗಳ ಅಭಿವೃದ್ಧಿ, ಸ್ವಚ್ಛತೆಗೆ ಆದ್ಯತೆ, 3 ಪಾರ್ಕ್‌ಗಳ ನಿರ್ಮಾಣ ಕಾಮಗಾರಿಗಳು ನಡೆದಿದ್ದು, ಮಾದರಿ ವಾರ್ಡ್‌ ಆಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಅನ್ನು ಮಂಗಳೂರು.

ಪ್ರಗತಿಯಲ್ಲಿರುವ ಕಾಮಗಾರಿಗಳು
ಕದ್ರಿ ಕಂಬಳ ರಸ್ತೆ (ಭಾರತ್‌ ಬೀಡಿ ಸಂಸ್ಥೆಯ ಕಚೇರಿಯಿಂದ ಕದ್ರಿ ಮುಂಡಾನ ತನಕ), ಕರಂಗಲ್ಪಾಡಿ- ಬಿಜೈ ರಸ್ತೆ, ಲಾಲ್‌ಬಾಗ್‌- ಬಿಜೈ ರಸ್ತೆಯ ಚರಂಡಿ ಮತ್ತು ಫುಟ್‌ಪಾತ್‌ ಅಭಿವೃದ್ಧಿ, ಬಲ್ಲಾಳ್‌ಬಾಗ್‌ನ ವಿವೇಕನಗರ ದಲಿತ ಕಾಲನಿಯಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ, ಕಪುಚಿನ್‌ ಫ್ರಾಯರಿ ಬಳಿ ಸಮುದಾಯ ಭವನ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ.

Advertisement

ಪ್ರಮುಖ ಕಾಮಗಾರಿ
– ಬಿಜೈ ಮಾರುಕಟ್ಟೆ ಕಟ್ಟಡ ನಿರ್ಮಾಣ ಪೂರ್ತಿಗೊಳಿಸಿದ್ದಲ್ಲದೆ ಮೇಲಂತಸ್ತಿಗೂ ಅನುದಾನ ಮೀಸಲಿರಿಸಿ ಕಾಮಗಾರಿ ಆರಂಭಿಸಿ ಈಗ ಪ್ರಗತಿಯಲ್ಲಿ l 4 ಕಿರು ಸೇತುವೆಗಳ ನಿರ್ಮಾಣ
–  ಕೊಡಿಯಾಲಬೈಲ್‌ ವೆಟ್‌ವೆಲ್‌ಗೆ ಚಾಲನೆ
– ಕೊಡಿಯಾಲ್‌ಗ‌ುತ್ತು 6ನೇ ಅಡ್ಡ ರಸ್ತೆಯಲ್ಲಿ ಭೂಸ್ವಾಧೀನ ಮಾಡಿ ಹೊಸ ರಸ್ತೆ.
– ಕೃಷ್ಣ ಮಠ, ಚಂದ್ರಕಾ ಬಡಾವಣೆಯ ಸು. 4 ಕಿ.ಮೀ. ರಾಜ ಕಾಲುವೆಗೆ ತಡೆಗೋಡೆ
– ಕೊಡಿಯಾಲ್‌ಗ‌ುತ್ತು, ಭಾರತಿ ನಗರ ರಸ್ತೆಗಳಿಗೆ ಕಾಂಕ್ರೀಟ್‌
– ಸಾರ್ವಜನಿಕರ ನೆರವಿನಿಂದ ವಿವೇಕಾನಂದ ಪಾರ್ಕ್‌, ಅರೈಸ್‌ ಅವೇಕ್‌ ಪಾರ್ಕ್‌, ಚಂದ್ರಿಕಾ ಬಡಾವಣೆ ಕಿರು ಉದ್ಯಾನವನ
– ಬಿಜೈ, ಸ್ಥಳಾವಕಾಶ ಇರುವೆಡೆ ಮಿನಿ ಅರಣ್ಯ ನಿರ್ಮಾಣ
– ಬಹುತೇಕ ಒಳ ರಸ್ತೆಗಳ ದುರಸ್ತಿ, ಇಂಟರ್‌ಲಾಕ್‌
– ಬಲಿಪ ತೋಟದಲ್ಲಿ ಬಬ್ಬು ಸ್ವಾಮಿ ದೈವಸ್ಥಾನದ ಸಮುದಾಯ ಭವನಕ್ಕೆ ಮೇಲ್ಛಾವಣಿ, ಶೌಚಾಲಯ.

ಕೊಡಿಯಾಲಬೈಲ್‌ ವಾರ್ಡ್‌
ಭೌಗೋಳಿಕ ವ್ಯಾಪ್ತಿ: ಬೆಸೆಂಟ್‌ ಜಂಕ್ಷನ್‌ನ ಕೆನರಾ ಕಾಲೇಜು ಬಳಿಯಿಂದ ಜೈಲ್‌ ರೋಡ್‌, ಪವನ್‌ ಅಪಾರ್ಟ್‌ಮೆಂಟ್‌, ಪಿಂಟೋಸ್‌ ಲೇನ್‌, ಕದ್ರಿ ಕಂಬಳ ಜಂಕ್ಷನ್‌, ಕೃಷ್ಣ ಮಠ, ಬಿಜೈ ಚರ್ಚ್‌, ಬಿಜೈ ಮಾರ್ಕೆಟ್‌, ಲಾಲ್‌ಬಾಗ್‌ ಜಂಕ್ಷನ್‌, ಬಲ್ಲಾಳ್‌ ಬಾಗ್‌- ಕೊಡಿಯಾಲ್‌ಗ‌ುತ್ತು- ಬೆಸೆಂಟ್‌ ಜಂಕ್ಷನ್‌ವರೆಗೆ.

ಒಟ್ಟು ಮತದಾರರು 7,500
ನಿಕಟಪೂರ್ವ ಕಾರ್ಪೊರೇಟರ್‌- ಪ್ರಕಾಶ್‌ ಸಾಲ್ಯಾನ್‌

5 ವರ್ಷಗಳ‌ಲ್ಲಿ ಬಂದ ಅನುದಾನ
2014  15: 58.67 ಲಕ್ಷ ರೂ.
2015 16: 45.03 ಕೋಟಿ ರೂ.
2016 17: 76.13 ಕೋಟಿ ರೂ.
2017 18 : 76.13 ಕೋಟಿ ರೂ.
2018 19 : 95.69 ಕೋಟಿ ರೂ.

ಒಳಚರಂಡಿ ಅಭಿವೃದ್ಧಿಗೆ ಕ್ರಮ
ದೊಡ್ಡ ಮಳೆ ಬಂದಾಗ ರಾಜ ಕಾಲುವೆಯಲ್ಲಿ ನೀರು ಹರಿಯಲು ಸಾಧ್ಯವಾಗದೆ ಕೊಡಿಯಾಲ್‌ಗ‌ುತ್ತು ಪ್ರದೇಶದ 1ರಿಂದ 6ನೇ ಕ್ರಾಸ್‌ ತನಕ ನೀರು ಒಳ ಬರುತ್ತದೆ. ಭಾರತಿ ನಗರದಲ್ಲಿಯೂ ನೆರೆ ಬರುತ್ತದೆ. ಹಳೆಯ ಒಳ ಚರಂಡಿ ವ್ಯವಸ್ಥೆ ಇದ್ದು, ಅದೊಂದು ಮಾತ್ರ ಸಮಸ್ಯೆಯಾಗಿದೆ. ಎಡಿಬಿ 2ನೇ ಹಂತದ ಯೋಜನೆಯಲ್ಲಿ ಒಳಚರಂಡಿ ಅಭಿವೃದ್ಧಿ ಮಾಡುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಉಳಿದಂತೆ ರಸ್ತೆ, ಫುಟ್‌ಪಾತ್‌, ಸ್ವತ್ಛತೆ ಮತ್ತಿತರ ಕಾಮಗಾರಿ ನಡೆಸಲಾಗಿದೆ.
-ಪ್ರಕಾಶ್‌ ಸಾಲ್ಯಾನ್‌

  ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next