Advertisement

ಆರೋಗ್ಯಕ್ಕೆ ಪೂರಕ ಬ್ಲ್ಯಾಕ್ ಕಾಫಿ

12:54 PM Jul 24, 2019 | mahesh |

ಬೆಳಗ್ಗೆ ಎದ್ದ ಕೂಡಲೇ, ಸಂಜೆ, ಬಿಡುವಿನ ವೇಳೆ, ಕೆಲಸದ ಮಧ್ಯೆ ಕಾಫಿ, ಚಾ ಕುಡಿಯುವುದು ಬಹುತೇಕರ ಅಭ್ಯಾಸ. ಅದೇ ರೀತಿ ಬ್ಲ್ಯಾಕ್‌ ಕಾಫಿ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಇದರಿಂದ ಅನೇಕ ಪ್ರಯೋಜನಗಳಿವೆ.

Advertisement

1 ಸ್ಮರಣ ಶಕ್ತಿ ಹೆಚ್ಚಳ: ಪ್ರತಿ ದಿನ ಬೆಳಗ್ಗೆ ಬ್ಲ್ಯಾಕ್‌ ಕಾಫಿ ಕುಡಿಯುವುದರಿಂದ ಮೆದುಳು ಚುರುಕಾಗುತ್ತದೆ. ಮಾತ್ರವಲ್ಲ ಸ್ಮರಣ ಶಕ್ತಿ ಹೆಚ್ಚುತ್ತದೆ. ಇದನ್ನು ಕುಡಿಯುವರಲ್ಲಿ ಅಲ್ಜೀಮರ್‌ ಪಮಾಣ ಕಡಿಮೆಯಂತೆ

2 ದೈಹಿಕ ಕಾರ್ಯಕ್ಷಮತೆ ಹೆಚ್ಚಳ: ಹಾಲು ರಹಿತ ಕಾಫಿ ಸೇವನೆ ದೇಹಕ್ಕೆ ಪುಷ್ಟಿ ನೀಡುತ್ತದೆ. ಅದರಲ್ಲೂ ಜಿಮ್‌ನಲ್ಲಿ ಕಸರತ್ತು ಮಾಡುವವರಿಗೆ ಬೇಕಾದಷ್ಟು ಶಕ್ತಿ ಇದರಿಂದ ಲಭಿಸುತ್ತದೆ. ಅದಕ್ಕೆ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವ ಮುನ್ನ ಬ್ಲ್ಯಾಕ್‌ ಕಾಫಿ ಕುಡಿಯುವಂತೆ ಸಲಹೆ ನೀಡಲಾಗುತ್ತದೆ.

3 ಬುದ್ದಿ ಚುರುಕು: ಬ್ಲ್ಯಾಕ್‌ ಕಾಫಿಯ ಸೇವನೆ ನಿಮ್ಮ ಶಕ್ತಿಯನ್ನು ವೃದ್ಧಿಸುತ್ತದೆ. ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ಹೀಗೇ ಇಡೀ ದಿನ ನೀವು ಚಟುವಟಿಕೆಯಿಂದ ಇರಲು ಸಹಾಯ ಮಾಡುತ್ತದೆ.

4 ಹೊಟ್ಟೆ ಶುದ್ಧೀಕರಿಸುತ್ತದೆ: ಸಕ್ಕರೆ ರಹಿತ ಬ್ಲ್ಯಾಕ್‌ ಕಾಫಿ ಕುಡಿಯುವುದರಿಂದ ಹೊಟ್ಟೆಯಲ್ಲಿನ ಕಶ್ಮಲಗಳೆಲ್ಲ ಮೂತ್ರದ ರೂಪದಲ್ಲಿ ಹೊರ ಹೋಗುತ್ತದೆ ಎನ್ನುತ್ತದೆ ಸಂಶೋಧನೆ.

Advertisement

5 ಕೊಬ್ಬು ಕರಗಿಸಲು: ಜಿಮ್‌ನಲ್ಲಿ ಕಸರತ್ತು ಆರಂಭಿಸುವ ಅರ್ಧ ಗಂಟೆ ಮೊದಲು ಬ್ಲ್ಯಾಕ್‌ ಕಾಫಿ ಸೇವಿಸುವುದು ಕೊಬ್ಬು ಕರಗಿಸುವ ಪ್ರಯತ್ನಕ್ಕೆ ವೇಗ ನೀಡುತ್ತದೆ.

6 ಹೃದಯದ ರಕ್ತ ನಾಳದ ಆರೋಗ್ಯಕ್ಕೆ ಪೂರಕ: ಪ್ರತಿ ದಿನ 1 ಅಥವಾ 2 ಕಪ್‌ ಬ್ಲ್ಯಾಕ್‌ ಕಾಫಿ ಸೇವನೆ ಹೃದಯದ ರಕ್ತ ನಾಳದ ಆರೋಗ್ಯವನ್ನು ವೃದ್ಧಿಸುತ್ತದೆ ಮತ್ತು ಸ್ಟ್ರೋಕ್‌ ಕಾಣಿಸಿಕೊಳ್ಲುವ ಸಾಧ್ಯತೆ ಕಡಿಮೆಯಾಗುತ್ತದೆ. 7 ಪೋಷಕಾಂಶಗಳ ಆಗರ: ಬ್ಲ್ಯಾಕ್‌ ಕಾಫಿ ವಿಟಮಿನ್‌ ಬಿ 2, ಬಿ 3, ಬಿ 5, ಮ್ಯಾಂಗನೀಸ್‌, ಪೊಟ್ಯಾಶಿಯಂ ಮುಂತಾದ ಅಂಶಗಳನ್ನು ಒಳಗೊಂಡಿದೆ.

8 ಮಧುಮೇಹದ ಸಾಧ್ಯತೆ ಕ್ಷೀಣ: ದಿನಾ ಬ್ಲ್ಯಾಕ್‌ ಕಾಫಿಯ ಸೇವಿಸುವುದರಿಂದ ಮಧುಮೇಹ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು.

•ರಮೇಶ್‌ ಬಳ್ಳಮೂಲೆ

Advertisement

Udayavani is now on Telegram. Click here to join our channel and stay updated with the latest news.

Next