ಬೆಂಗಳೂರು : ಅದಾನಿ ಪೋರ್ಟ್‌ನಲ್ಲಿ ದೊರೆತ ಎಂಬತ್ತು ಟನ್ ಹೆರಾಯಿನ್ ಡೀಲರ್ ಯಾರು ಎಂಬುದರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಉತ್ತರ ನೀಡಲಿ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಇಡದ ಅವರು, ಹೆರಾಯಿನ್ ಡೀಲರ್ ಯಾರು ಎಂಬುದರ ಬಗ್ಗೆ ನಿಜವಾದ ಉತ್ತರ ಕೊಟ್ಟರೆ ನಾನು ರಾಜಕೀಯ ಬಿಡುತ್ತೇನೆ ಎಂದು ಸವಾಲು ಹಾಕಿದರು.
ಈ ವಿಚಾರ ಬೇರೆಡೆಗೆ ಸೆಳೆಯಲು ಒಂದೆರಡು ಗ್ರಾಂ ಡ್ರಗ್ಸ್ ಇಟ್ಟುಕೊಂಡಿದ್ದ ಹುಡುಗನನ್ನು ಬಂಧಿಸಿದ್ದಾರೆ. ರಾಹುಲ್ ಗಾಂಧಿ ಅವರ ಬಗ್ಗೆ ಕಟೀಲ್ ಹೇಳಿಕೆ ಬಗ್ಗೆ ನಾನು ಉಪ ಚುನಾವಣೆ ಪ್ರಚಾರದಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.
ಬಿಜೆಪಿಯವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಿನಬೆಳಗಾಗುವುದರಲ್ಲಿ ಸರ್ಕಾರ, ನಾಯಕರು ಬದಲಾಗುತ್ತಾರೆ ಎಂಬ ಅರಿವಿಲ್ಲ. ತಾವು 500 ವರ್ಷ ಬದುಕುವ ಭ್ರಮೆಯಲ್ಲಿದ್ದಾರೆ. ಜನ ಇವರಿಗೆ ಆದಷ್ಟು ಬೇಗ ಗಂಟೆ, ತಟ್ಟೆ ಬಾರಿಸಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ :ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ, ಉದ್ಯೋಗಗಳ ಸೃಷ್ಟಿ: ನಿರಾಣಿ ವಿಶ್ವಾಸ