Advertisement

ಬಿಜೆಪಿಯವರು ವೋಟರ್ ಐಡಿ ಕಳ್ಳರು : ಶಿವರಾಜ್ ತಂಗಡಗಿ ಕಿಡಿ

09:22 PM Dec 03, 2022 | Team Udayavani |

ಕುಷ್ಟಗಿ: ಬಂಗಾರ ಕಳ್ಳರು, ದುಡ್ಡಿನ ಕಳ್ಳರ ಬಗ್ಗೆ ಕೇಳಿದ್ದೀರಿ ಬಿಜೆಪಿಯವರು ವೋಟರ್ ಐಡಿ ಕಳ್ಳರಾಗಿದ್ದಾರೆ. ಬಿಜೆಪಿಯವರು ಮುಂದಿನ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಓಟರ್ ಐಡಿ ಡಿಲಿಟ್ ಮಾಡುವ ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ವಾಗ್ದಾಳಿ ನಡೆಸಿದರು.

Advertisement

ಇಲ್ಲಿನ ಎಸ್ ಪಿ ಸಭಾ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಕುಷ್ಟಗಿ-ಹನುಮಸಾಗರ ಸಹಯೋಗದಲ್ಲಿ 371 (ಜೆ) ಕಲಾಂ ರೂವಾರಿ, ಎಐಐಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಡಿ.10ರಂದು ಕಲಬುರಗಿಯಲ್ಲಿ ಗೌರವ ಸನ್ಮಾನ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿಯವರು ವೋಟರ್ ಐಡಿ ಕಳ್ಳರಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ 55 ಸಾವಿರ ವೋಟು ಡಿಲಿಟ್ ಆಗಿದ್ದು, ಕುಷ್ಟಗಿ ತಾಲೂಕಿನಲ್ಲಿ 15 ಸಾವಿರ ವೋಟು ಡಿಲಿಟ್ ಆಗಿದೆ. ಈಗಲೇ ಮತದಾರರ ಯಾದಿ ಪರೀಕ್ಷಿಸಿಕೊಳ್ಳಿ ಎಂದು ಎಚ್ಚರಿಸಿದರು. ಬಡವರಿಗೆ, ಶ್ರೀಮಂತರಿಗೆ ಒಂದೇ ಮತಮೌಲ್ಯ ನೀಡಿದ್ದ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮತದಾನದ ಶಕ್ತಿಯ ಹಕ್ಕು ನೀಡಿದ್ದು ಆ ಹಕ್ಕನ್ನು ಬಿಜೆಪಿಯವರು ಕಸಿಯುತ್ತಿದ್ದಾರೆ ಎಂದರು ಆರೋಪಿಸಿದರು.

ವೋಟರ್ ಐಡಿ ಡಿಲಿಟ್ ಮೊದಲ ಟಾರ್ಗೆಟ್ ಕಾಂಗ್ರೆಸ್ ಕಾರ್ಯಕರ್ತರಿಗೆ ಆಗಿದೆ. ಅವರು ಸತ್ತವರು, ಡಬಲ್ ಆದವರ ಡಿಲಿಟ್ ಮಾಡಿರುವುದಾಗಿ ಸಮಾಜಾಯಿಷಿ ನೀಡುತ್ತಿದ್ದಾರೆ. ಈ ವಾಮಮಾರ್ಗದಿಂದ ಗೆಲ್ಲುವ ಹಿನ್ನೆಲೆಯಲ್ಲಿ ನಾವು ಅಷ್ಟು ಸ್ಥಾನ ಇಷ್ಟು ಸ್ಥಾನ ಗೆದ್ದಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ನಾಚಿಕೆ, ಮಾನ, ಮರ್ಯಾದೆ ಏನೂ ಇಲ್ಲ
ಬಿಜೆಪಿಯವರು ಕಾಂಗ್ರೆಸ್ ಕಟ್ಟಿದ ಶಾಲೆಯಲ್ಲಿ ಓದಿದ್ದಾರೆ. ಕಾಂಗ್ರೆಸ್ನವರು ಕಟ್ಟಿದ ಆಣೆಕಟ್ಟಲ್ಲಿ ನೀರು ಕುಡಿದವರಾಗಿದ್ದರೂ, ಕಾಂಗ್ರೆಸ್ ನವರು ಏನೂ ಮಾಡಿಲ್ಲ ಎಂದು ಟೀಕಿಸುವ ಬಿಜೆಪಿಯವರಿಗೆ ನಾಚೆಗೆ ಮಾನ ಮರ್ಯಾದೆ ಏನೂ ಇಲ್ಲ ಎಂದ ಅವರು, ನಾವು ಮಾಡಿದ್ದ ಕೆಲಸಕ್ಕೆ ಸಣ್ಣ ಕೆಲಸ ಮಾಡಿ ತಾವೇ ಮಾಡಿರುವ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ ಎಂದರು.

Advertisement

ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾಖಾನ್ ಎಂದು ಟೀಕಿಸುವ ಸಿ.ಟಿ. ರವಿ ಅವರಿಗೆ ಸಿದ್ದರಾಮಯ್ಯ ಅವರ ಅನುಭವದಷ್ಟು ವಯಸ್ಸಾಗಿಲ್ಲ. ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ ಪರಿಕಲ್ಪನೆಯ ಅಡಿಯಲ್ಲಿ ಕೆಲಸ ಮಾಡಿರುವುದು ಅವರಿಗೇನು ಗೊತ್ತಿದೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರದ ದುರಾಸೆಗೆ ಬಿಜೆಪಿಯವರು ಜನ ಸಂಕಲ್ಪ ಯಾತ್ರೆ ಮಾಡಿದರೆ ರಾಜ್ಯದ ಜನ, ಬಿಜೆಪಿಯವರನ್ನು ಮನೆಗೆ ಕಳುಹಿಸಲು ಸಂಕಲ್ಪ ಮಾಡಿದ್ದಾರೆಂದು ಹೇಳಿದರು.

ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ ಶಾಸಕ ಹಸನಸಾಬ್ ದೋಟಿಹಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಚಂದ್ರು ನಾಲತವಾಡ, ಶಿವಶಂಕರಗೌಡ ಕಡೂರು, ಮಂಜುನಾಥ ಕಟ್ಟಿಮನಿ, ಸಂಗಪ್ಪ ಮೆಣಸಗೇರಿ, ಸುರೇಶ ಕುಂಟನಗೌಡ್ರು, ಪರಸಪ್ಪ ಅಮರಾವತಿ, ದೊಡ್ಡಯ್ಯ ಗದ್ದಡಕಿ, ಶಕುಂತಲಮ್ಮ ಹಿರೇಮಠ, ಪುರಸಭೆ ಸದಸ್ಯ ಸಯ್ಯದ್ ಖಾಜಾ ಮೈನುದ್ದೀನ್ ಮುಲ್ಲಾ, ತಾಜುದ್ದೀನ್ ದಳಪತಿ, ಶಿವರಾಜ್ ಕಟ್ಟಿಮನಿ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next