Advertisement

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ: ಬಿಜೆಪಿ ಗೆಲುವು ಖಚಿತ’

06:50 AM Oct 11, 2018 | Team Udayavani |

ಕೊಲ್ಲೂರು : ಅನಿರೀಕ್ಷಿತವಾಗಿ ಎದುರಾದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯನ್ನು ಎದುರಿಸಲು ಬಿಜೆಪಿ ಸಶಕ್ತವಾಗಿದೆ. ಈ ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ ಅವರ ಗೆಲುವು ಖಚಿತ. ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರದ ಸಾಧನೆ, ಜನಪರ ಕಾಳಜಿ ಮುಂಬರುವ ಚುನಾವಣೆಯಲ್ಲಿ ದಿಕ್ಸೂಚಿಯಾಗಲಿದೆ. ಎಂದು ಉಡುಪಿ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರ ವಂಡ್ಸೆ ನಿವಾಸದಲ್ಲಿ ಅ. 10ರಂದು ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಉಡುಪಿ ಜಿಲ್ಲೆಯಲ್ಲಿ ಎದುರಾಗಿರುವ ಮರಳುಗಾರಿಕೆ ಸಮಸ್ಯೆಯನ್ನು ಬಗೆ ಹರಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಅದನ್ನೇ ನಂಬಿ ಬದುಕಿರುವ ಕಾರ್ಮಿಕರ ಜೀವನದೊಡನೆ ಚೆಲ್ಲಾಟವಾಡುತ್ತಿರುವ ಈ ಸರಕಾರವು ಅ. 15 ರೊಳಗೆ ಇದಕ್ಕೊಂದು ಪರಿಹಾರ ಒದಗಿಸದಿದ್ದಲ್ಲಿ ಅ. 16ರಂದು ಜಿಲ್ಲಾಧಿಕಾರಿಗಳ ಕಚೇರಿಯೆದುರು ಭಾರೀ ಪ್ರತಿಭಟನೆ ನಡೆಸಲಾಗುವುದು ಎಂದರು. ದೇಶದಲ್ಲಿ ಸ್ವಸ್ಥ, ನಿಷ್ಕಳಂಕ, ನಿಸ್ವಾರ್ಥ ಸೇವೆಯ ನರೇಂದ್ರ ಮೋದಿಯವರ ನೇತƒತ್ವದ ಕೇಂದ್ರ ಸರಕಾರ ಮತ್ತೆ ಚುಕ್ಕಾಣಿ ಹಿಡಿಯಬೇಕಾದರೆ ಕಾರ್ಯಕರ್ತರ ಪಾತ್ರ ಮಹತ್ವವಾದದ್ದು. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಲೋಕಸಭಾ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ರಾಘವೇಂದ್ರ ಅವರನ್ನು 50,000 ಕ್ಕೂ ಹೆಚ್ಚಿನ ಮತದಿಂದ ಗೆಲ್ಲಿಸುವಲ್ಲಿ ಪ್ರಯತ್ನಿಸಬೇಕು ಎಂದರು. 

ರಾಜ್ಯ ಸರಕಾರ ಯಾವುದೇ ಅಭಿವೃದ್ದಿ ಕಾರ್ಯಕ್ರಮ ಮಾಡಿಲ್ಲ. ಮುಖ್ಯಮಂತ್ರಿಗಳು ದೇವಸ್ಥಾನಕ್ಕೆ ಭೇಟಿ ಹಾಗೂ ವರ್ಗಾವಣೆಯಲ್ಲಿ ಕಾಲ ಕಳೆಯುತ್ತಿದ್ದು ಕಾಂಗ್ರೆಸ್‌ ಹಾಗೂ ಜೆಡಿಸ್‌ ಮೈತ್ರಿ ಸರಕಾರವು ಪತನದ ಹಾದಿಯಲ್ಲಿದೆ. ಇಂತಹ ನಿಷ್ಕ್ರಿàಯ ಸರಕಾರ ದೌರ್ಬಲ್ಯ ಮರೆಮಾಚಲು ಕೇವಲ ಆಶ್ವಾಸನೆ ನೀಡುವುದರಲ್ಲೇ ಕಾಲ ಕಳೆಯುತ್ತಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.

ರಾಜ್ಯ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಶಿವಮೊಗ್ಗ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿರುವ ರಾಘವೇಂದ್ರ ಅವರು ಬೆ„ಂದೂರು ಕ್ಷೇತ್ರದ ಅಭಿವೃದ್ದಿಗಾಗಿ ಈ ಹಿಂದೆ 600 ಕೋಟಿ ರೂ. ಒದಗಿಸಿದ್ದು ಅನೇಕ ಕಾಮಗಾರಿಗಳು ಅನುಷ್ಠಾನಗೊಂಡಿದೆ. ಜನಪರ ಕಾಳಜಿಯ ಹರಿಕಾರರಾದ ಅವರ ಗೆಲುವಿಗೆ ಪ್ರತಿಯೋರ್ವ ಬಿಜೆಪಿ ಕಾರ್ಯಕರ್ತರೂ ಕೈಜೋಡಿಸಿ ಶ್ರಮಿಸಬೇಕೆಂದರು.

ಬೈಂದೂರು ಕ್ಷೇತ್ರ ಶಾಸಕ ಬಿ.ಎಮ್‌. ಸುಕುಮಾರ ಶೆಟ್ಟಿ ಮಾತನಾಡಿ ಕರ್ನಾಟಕ ರಾಜ್ಯ ಸರಕಾರದ ಆಡಳಿತ ವ್ಯವಸ್ಥೆಯಲ್ಲಿನ ಲೋಪವನ್ನು ಬೊಟ್ಟುಮಾಡಿದರಲ್ಲದೇ ಯಾವುದೇ ಯೋಜನೆಗೆ ಅನುದಾನ ಬಿಡುಗಡೆ ಮಾಡದಿರುವುದು ಸರಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿ. ಕೇವಲ ಜೆಡಿಎಸ್‌ ಶಾಸಕರಿಗೆ ಅನುದಾನ ಬಿಡುಗಡೆ ಗೊಳಿಸುತ್ತಿರುವ ಈ ಒಂದು ಸರಕಾರವು ದ‌Ìಂದ‌Ì ನೀತಿ ಅನುಸರಿಸುತ್ತಿರುವುದು ಖೇದರಕ ಎಂದರು.

Advertisement

ಶಿವಮೊಗ್ಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ಮಾತನಾಡಿ  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಹೆಚ್ಚಿನ ಅಂತರದಲ್ಲಿ ಗೆಲುವು ಸಾದಿಸಲು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ಶ್ರಮಿಸಿ ಪೊÅàತ್ಸಾಹಿಸಬೇಕೆಂದರು.

ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಂಗಳೂರು ಬಿಜೆಪಿ ವಿಭಾಗ ಪ್ರಭಾರ ಉದಯ ಕುಮಾರ್‌ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್‌ ಶೆಟ್ಟಿ, ಕುಯಾÉಡಿ ಸುರೇಶ್‌ ನಾಯಕ್‌, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಸಂಧ್ಯಾ ರಮೇಶ್‌, ಬೆ„ಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಕಾರ್ಯದರ್ಶಿಗಳಾದ ದೀಪಕ್‌ ಕುಮಾರ್‌ ಶೆಟ್ಟಿ, ಬಾಲಚಂದ್ರ ಭಟ್‌ ಮುಂತಾದವರು ಉಪಸ್ಥಿತರಿದ್ದರು.ಸದಾನಂದ ಉಪ್ಪಿನಕುದ್ರು ಸ್ವಾಗತಿಸಿ ದರು. ದೀಪಕ್‌ ಕುಮಾರ್‌ ಶೆಟ್ಟಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next