13 ಬಾರಿ ಕಾಂಗ್ರೆಸ್ ಗೆದ್ದು ಬೀಗಿರುವುದು ಇತಿಹಾಸ.
Advertisement
ಕಳೆದ ಬಾರಿ ಇಡೀ ದೇಶವೇ ಮೋದಿ ಅಲೆಯಲ್ಲಿದ್ದಾಗಲೂ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದರು. ಈ ಬಾರಿ ಬ್ರೇಕ್ ಬೀಳುವುದೇ ಎಂಬ ಕುತೂಹಲ ಮನೆ ಮಾಡಿದೆ. ಕಳೆದ ಚುನಾವಣೆಯಲ್ಲಿ ಮಾವ-ಅಳಿಯನ ನಡುವೆ ನಡೆದ ಜಿದ್ದಾಜಿದ್ದಿನ ಕಣದಲ್ಲಿ ಕಾಂಗ್ರೆಸ್ 1,499 ಮತಗಳ ಅಂತರದಿಂದ ಗೆಲುವು ದಾಖಲಿಸಿತ್ತು. ಈ ಬಾರಿಯೂ ಹಾಲಿ ಸಂಸದ ಬಿ.ವಿ.ನಾಯಕ ಕಣದಲ್ಲಿದ್ದು, ಬಿಜೆಪಿ ಇನ್ನೂ ಅಭ್ಯರ್ಥಿ ಘೋಷಿಸಿಲ್ಲ. ಈಗ ಜೆಡಿಎಸ್ಕೂಡ ಕಾಂಗ್ರೆಸ್ ಜತೆ ಕೈ ಜೋಡಿಸಿದ ಪರಿಣಾಮ ಎದುರಾಳಿ ಬಿಜೆಪಿಗೆ ಸಾಕಷ್ಟು ಸವಾಲು ಎದುರಾಗಿದೆ.
ಒಟ್ಟು ಎಂಟು ವಿಧಾನಸಭೆ ಕ್ಷೇತ್ರಗಳು ಒಳಗೊಂಡಿವೆ. ಬಿಜೆಪಿಗೆ ಮೋದಿ ಅಲೆ ಆಸರೆ: ಕಾಂಗ್ರೆಸ್ ಅಭ್ಯರ್ಥಿ ಈಗಾಗಲೇ ಭರದ ಪ್ರಚಾರ ನಡೆಸಿದ್ದಾರೆ. ಆದರೆ, ಸೂಕ್ತ ಎದುರಾಳಿಯನ್ನು ಶೋಧಿಸುವಲ್ಲಿ ಬಿಜೆಪಿ ಕಾಲಹರಣ
ಮಾಡಿದ್ದು, ನಾಮಪತ್ರ ಸಲ್ಲಿಕೆ ಶುರುವಾದರೂ ಘೋಷಣೆ ಮಾಡಿಲ್ಲ. ರಾಯಚೂರು ಕ್ಷೇತ್ರದ ವಿಚಾರಕ್ಕೆ ಬಂದರೆ ಕೇವಲ ಮೋದಿ ಅಲೆಯೊಂದೇ ಗೆಲುವಿನ ಮಾನದಂಡವಲ್ಲ ಎನ್ನುವ ಸತ್ಯ ಕಳೆದ ಚುನಾವಣೆ ಯಲ್ಲಿಯೇ ಸಾಬೀತಾಗಿದೆ. ಮಾಜಿ ಸಚಿವ ರಾಜಾ
ಅಮ ರೇಶ್ವರ ನಾಯಕ್, ಮಾಜಿ ಶಾಸಕ ತಿಪ್ಪರಾಜ ನಡುವೆ ಪೈಪೋಟಿ ಏರ್ಪಟ್ಟಿದೆ. ಇವರಲ್ಲಿ ಯಾರು ಪ್ರಬಲ ಪೈಪೋಟಿ ನೀಡಬಲ್ಲರು ಎಂಬ ಚಿಂತನೆಯಲ್ಲಿ ರುವ
ವರಿಷ್ಠರು, ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.
Related Articles
ರಾಯಚೂರಿನ 5, ಯಾದಗಿರಿ ಜಿಲ್ಲೆಯ 3 ವಿಧಾನಸಭೆ ಕ್ಷೇತ್ರ ಒಳಗೊಂಡಿದೆ. ಎಂಟರಲ್ಲಿ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೆ, ಮೂರರಲ್ಲಿ ಕಾಂಗ್ರೆಸ್ ಮತ್ತು ಒಂದು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಪ.ಪಂ.ಕ್ಕೆ ಮೀಸಲಾಗಿರುವ ಕಾರಣ
ಪ್ರಭಾವಿಯಾದ ನಾಯಕ ಸಮಾಜದ ಮತಗಳು ವಿಭಜನೆಗೊಳ್ಳುವ ಸಾಧ್ಯತೆ ಇದೆ. ಅಲ್ಪಸಂಖ್ಯಾತ ಮತ ಸೆಳೆಯುವಲ್ಲಿ ಕೈ ಸಫಲವಾದರೆ, ಲಿಂಗಾಯತ, ಕುರುಬ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಇನ್ನು ಪರಿಶಿಷ್ಟ ಪಂಗಡ ಕ್ಷೇತ್ರಗಳಿಂದ ಗೆಲುವು ಸಾಧಿ ಸಿದ ದೇವದುರ್ಗ ಶಾಸಕ ಶಿವನಗೌಡ, ಸುರಪುರ ಶಾಸಕ ರಾಜುಗೌಡ ಪಕ್ಷದ ಗೆಲುವಿಗೆ ಹೆಚ್ಚು ಒತ್ತು ನೀಡಿದರೆ, ಲಿಂಗಾಯತ ಸಮಾಜದ ರಾಯಚೂರು ನಗರ ಕ್ಷೇತ್ರದ ಡಾ| ಶಿವರಾಜ ಪಾಟೀಲ, ಯಾದಗಿರಿ ಕ್ಷೇತ್ರದ ವೆಂಕಟರೆಡ್ಡಿ ಮುದ್ನಾಳ, ಈಚೆಗೆ
ಪಕ್ಷ ಸೇರಿದ ಮಾಲಕರೆಡ್ಡಿ ಬಿಜೆಪಿ ಗೆಲುವಿಗೆ ಹೆಚ್ಚು ಶ್ರಮಿಸಬೇಕಿದೆ.
Advertisement
ತಂದೆಯ ಹಾದಿಯಲ್ಲಿ ಮಗ?ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ಅವರ ತಂದೆ ವೆಂಕಟೇಶ ನಾಯಕ ಅವರು ಇದೇ ಕ್ಷೇತ್ರದಿಂದ ಸತತ 4 ಬಾರಿ ಕಾಂಗ್ರೆಸ್ ನಿಂದ ಗೆಲುವು ದಾಖಲಿಸಿದ್ದರು. 2009ರಲ್ಲಿ ಬಿಜೆಪಿಯ ಸಣ್ಣ ಫಕ್ಕೀರಪ್ಪ ವಿರುದಟಛಿ ಸೋಲು ಅನುಭವಿಸುವ ಮೂಲಕ ಕಾಂಗ್ರೆಸ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿತ್ತು. ಅದಾದ ಬಳಿಕ ಕಳೆದ 2014ರ ಚುನಾವಣೆಯಲ್ಲಿ ಅವರ ಮಗ ಬಿ.ವಿ.ನಾಯಕ ಸ್ಪರ್ಧಿಸಿದರೆ, ಬಿಜೆಪಿಯಿಂದ ಅವರ ಅಳಿಯ ಬಿಜೆಪಿಯ ಕೆ.ಶಿವನಗೌಡ ನಾಯಕ ಸ್ಪಧಿ ì ಸಿದ್ದರು. ಮೋದಿ ಅಲೆ ಮೆಟ್ಟಿ ನಿಂತ ಬಿ.ವಿ.ನಾಯಕ ಕಡಿಮೆ ಅಂತರದ ಗೆಲುವು ದಾಖಲಿಸಿದ್ದರು. ಈಗ 2ನೇ ಬಾರಿ ಪುನಃ ಕಣಕ್ಕಿಳಿಯು ತ್ತಿರುವ ಬಿ.ವಿ.ನಾಯಕ ತಂದೆಯಂತೆ ಸರಣಿ ಗೆಲುವು ಮುಂದುವರಿಸುವರೋ ಎಂಬ ಕುತೂಹಲ ಮೂಡಿದೆ. ಸಿದ್ದಯ್ಯ ಸ್ವಾಮಿ ಕುಕನೂರು