ಬೆಂಗಳೂರು: ಹಿಜಾಬ್ ವಿಚಾರದಲ್ಲಿ ವಿದ್ಯಾರ್ಥಿನಿಯರ ಹಿಂದೆ ಪ್ರಚೋದಕ ಶಕ್ತಿಗಳಿವೆ. ಎಲ್ಲರೂ ಸರ್ಕಾರದ ಆದೇಶವನ್ನು ಪಾಲನೆ ಮಾಡಬೇಕು. ಹಿಜಾಬ್ ಧರಿಸಿಕೊಂಡು ಶಾಲೆಗೆ ಹೋಗುವುದು ಸರಿಯಲ್ಲ. ಈ ವಿಚಾರದಲ್ಲಿ ಜಾತಿ, ಧರ್ಮ, ಪಂಥ ಯಾವುದೂ ಅಡ್ಡ ಬರಬಾರದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಇಲ್ಲಿ ವಿದ್ಯಾರ್ಥಿಗಳ ತಪ್ಪಿಲ್ಲ. ಆದರೆ, ಇದರ ಹಿಂದೆ ಯಾರದ್ದೂ ಪ್ರಚೋದನೆ ಇದೆ. ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ಎಳೆಯಬಾರದು. ಯಾವುದೋ ಒಂದು ಧರ್ಮವನ್ನ ವೈಭವೀಕರಿಸುವುದು, ಮತ್ತೊಂದು ಧರ್ಮವನ್ನು ಪ್ರಪಾತಕ್ಕೆ ಬೀಳಿಸುವ ಕೆಲಸ ಮಾಡಬಾರದು ಎಂದರು.
ಹಿಜಾಬ್ ಗೆ ಪ್ರತಿಯಾಗಿ ಕೇಸರಿ ಶಾಲು ಧರಿಸಿಕೊಂಡು ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ರವಿಕುಮಾರ್, ‘ಇದು ನಿಜಕ್ಕೂ ಒಪ್ಪುವಂತಹದಲ್ಲ. ಡ್ರೆಸ್ ಹಾಕಿಕೊಂಡು ಬಂದರೆಂದು ಮತ್ತೊಂದು ಡ್ರೆಸ್ ಹಾಕುವುದು ಸರಿಯಲ್ಲ. ಹಿಜಾಬ್ ಹಾಕಿದರೆಂದು ಮುಜಾಬ್ ಹಾಕಬಾರದು. ಯಾವ ಸಮವಸ್ತ್ರ ಧರಿಸಬೇಕೆಂಬ ಸೂಚನೆ ಇದೆಯೋ ಅದನ್ನು ಹಾಕಿಕೊಂಡು ಬರಬೇಕು ಎಂದರು.
ಇದನ್ನೂ ಓದಿ:ಹಿಜಾಬ್ ವಿಚಾರದಲ್ಲಿ ಬಿಜೆಪಿ ರಾಜಕೀಯ: ಖಾದರ್, ಜಮೀರ್,ಬಾವಾ ಕಿಡಿ
ಜಮೀರ್ ಕಣ್ಣೀರು ವಿಚಾರ ಪ್ರತಿಕ್ರಿಯೆ ನೀಡಿದ ಅವರು, ಜಮೀರ್ ಗೆ ಕಣ್ಣೀರು ಬರುವುದು ಬಹಳ ಒಳ್ಳೆಯದಿ. ಆದರೆ, ವಿದ್ಯಾರ್ಥಿಗಳಿಗೆ ವಿಷ ಬೀಜ ಬಿತ್ತುವವರು ಯಾರು ಎಂದು ಪ್ರಶ್ನಿಸಿದರು.