Advertisement

ರಜನಿ ಭೇಟಿಯಾದ ಬಿಜೆಪಿ ಸಂಸದೆ: ಹೆಚ್ಚಿದ ಕುತೂಹಲ

08:05 AM Aug 08, 2017 | Team Udayavani |

ಚೆನ್ನೈ: ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರದ ಬಿಜೆಪಿ ಸಂಸದೆ ಪೂನಂ ಮಹಾಜನ್‌ ರವಿವಾರ ಸೂಪರ್‌ ಸ್ಟಾರ್‌ ರಜನಿಕಾಂತ್‌ರನ್ನು ಭೇಟಿ ಮಾಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.  

Advertisement

ಈ ಭೇಟಿಯನ್ನು ರಜನಿಕಾಂತ್‌ರ ರಾಜಕೀಯ ಪ್ರವೇಶ ಸನ್ನಿಹಿತವಾಗಿರುವುದರ ಸೂಚನೆ ಎಂದೇ ಬಿಂಬಿಸಲಾಗಿದೆ. ಆದರೆ ಬಿಜೆಪಿ ಮಾತ್ರ “ಇದೊಂದು ಸೌಹಾರ್ದ ಭೇಟಿ’ ಎಂದಿದೆ. ಚೆನ್ನೈನ ಪೊಯೇಸ್‌ ಗಾರ್ಡನ್‌ನಲ್ಲಿರುವ ಸೂಪರ್‌ಸ್ಟಾರ್‌ ಮನೆಗೆ ರವಿವಾರ ಭೇಟಿ ನೀಡಿದ ಮಹಾಜನ್‌, ರಜನಿ ದಂಪತಿ ಜತೆ ಕೆಲ ಹೊತ್ತು ಹರಟಿ, ಒಂದಷ್ಟು ಫೋಟೋ ತೆಗೆಸಿಕೊಂಡು ವಾಪಸಾಗಿದ್ದಾರೆ. ಜತೆಗೆ “ಇದು ರಾಜಕೀಯ ಭೇಟಿಯಲ್ಲ,’ ಎಂದು ಪೂನಂ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next