ಮಿನಿ ಸಮುದಾಯ ಭವನದಲ್ಲಿ ಬುಧವಾರ ಜಿಲ್ಲಾ ರೈತ ಪ್ರಹಾರಿಗಳ ಸಮಾವೇಶ ಉದ್ಘಾಟಿಸಿ, ಮಾತನಾಡಿದ ಅವರು, ಬಿಜೆಪಿ ಎಂದಿಗೂ
ಜಾತಿ ರಾಜಕಾರಣ ಮಾಡಿಲ್ಲ. ಸದಾ ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ರಾಜಕಾರಣ ಮಾಡುತ್ತಾ ಬಂದಿದೆ. ನಮ್ಮ ಪಕ್ಷದ ರಾಜ್ಯಾಧ್ಯಕ್ಷ
ಯಡಿಯೂರಪ್ಪನವರು ರೈತ ನಾಯಕರು. ಅವರು ಸಿಎಂ ಆಗಿದ್ದಾಗ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ, ರೈತ ಪರ ನಿಲುವು ಸಾಬೀತುಪಡಿಸಿದ್ದರು ಎಂದರು.
Advertisement
ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ನಮ್ಮ ಪಕ್ಷ ಜನಸಂಘದ ಕಾಲದಿಂದಲೂ ರೈತರಿಗಾಗಿ ಹೋರಾಟ ಮಾಡುತ್ತಲೇ ಬಂದಿದೆ.ಜನಸಂಘದ ಕಾಲದಲ್ಲಿ ಅಧಿಕಾರಿಗಳನ್ನು ವಿರೋಧ ಹಾಕಿಕೊಳ್ಳಲು ಎಲ್ಲರೂ ಹೆದರುತ್ತಿದ್ದರು. ಅಧಿಕಾರಿಗಳು ಸುಂಕದ ಹೆಸರಲ್ಲಿ ರೈತರ ಶೋಷಣೆ
ಮಾಡುತ್ತಿದ್ದರು. ಬಾಯಿಗೆ ಬಂದ ಬೆಲೆ ನಿಗದಿಮಾಡಿ ಸುಂಕ ವಸೂಲಿ ಮಾಡುತ್ತಿದ್ದರು. ನಮಗೆ ಜನಸಂಘದ ಮೂಲಕ ನೀಡಿದ ತಿಳಿವಳಿಕೆಯಿಂದಾಗಿ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುವಂತಹ ಪ್ರೇರಣೆ ಸಿಕ್ಕಿತು. ಹಾಗಾಗಿಯೇ ಈ ಹಿಂದೆ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಿ, ರೈತರಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಮಾಡಿದೆವು ಎಂದರು.
ಹಲವು ರೈತಪರ ಯೋಜನೆ ಜಾರಿಮಾಡಿದೆ. ಅಂತಹ ಯೋಜನೆಗಳು ರೈತರಿಗೆ ತಲುಪುವಂತೆ ಆಗಬೇಕು. ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ರೈತರ ವಿಷಯ ಬಂದಾಗ ಸಿಡಿಲಮರಿಯಿದ್ದಂತೆ. 7 ವರ್ಷಗಳ ಆಡಳಿತದಲ್ಲಿ ಯಡಿಯೂರಪ್ಪ ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯ ಆದಾಗ ಸಹಿಸಿಕೊಳ್ಳುತ್ತಿರಲಿಲ್ಲ ಎಂದು ಅವರು ಸ್ಮರಿಸಿದರು. ಇನ್ನೋರ್ವ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಕಾಂಗ್ರೆಸ್ ನವರದ್ದು ಎಲುಬಿಲ್ಲದ ನಾಲಿಗೆ. ಅವರು ರೈತ ಪರ ಎಂಬುದಾಗಿ ಹೇಳಿಕೊಳ್ಳುತ್ತಾರೆ. ಆದರೆ, ರೈತ ಪರ ಯಾವುದೇ ಕೆಲಸ ಮಾಡಲ್ಲ. ಇನ್ನೊಂದು ಪಕ್ಷ ಮಣ್ಣಿನ ಮಕ್ಕಳೆಂದೇ ಹೇಳಿಕೊಳ್ಳುತ್ತದೆ. ಆದರೆ,ಅವರು ಎಂದಿಗೂ ರೈತ ಪರ ಕೆಲಸ ಮಾಡಿದವರಲ್ಲ. ನಮ್ಮ ನಾಯಕ ಬಿ.ಎಸ್. ಯಡಿಯೂರಪ್ಪ ಮಾತ್ರಸದಾ ರೈತರ ಶ್ರಯೋಭಿವೃದ್ಧಿಗೆ ಶ್ರಮಿಸಿದವರು
ಎಂದರು.
Related Articles
ಪ್ರಧಾನಿಯಾಗಿದ್ದಾಗ ರೂಪಿಸಿದ್ದ ನದಿ ಜೋಡಣೆ ಯೋಜನೆಗೆ ಇದೀಗ ಕೇಂದ್ರ ಸರ್ಕಾರ ಚಾಲನೆ ನೀಡಲಿದೆ. ಇನ್ನು ರಸಗೊಬ್ಬರದ ಬೆಲೆ ಇಳಿಸಿದ್ದು
ಇತಿಹಾಸದಲ್ಲೇ ಮೊದಲು ನಾವೇ ಎಂಬುದು ನಮ್ಮ ಪಕ್ಷಕ್ಕೆ ರೈತರ ಬಗ್ಗೆ ಇರುವ ಕಾಳಜಿ ತೋರುತ್ತದೆಎಂದು ಅವರು ಪ್ರತಿಪಾದಿಸಿದರು.
Advertisement
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶಾಂತರಾಜ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶಿವಪ್ರಸಾದ್, ಮಾಜಿಶಾಸಕರಾದ ಕೆ. ಮಾಡಾಳು ವಿರುಪಾಕ್ಷಪ್ಪ, ಡಾ|ಎ.ಎಚ್. ಶಿವಯೋಗಿ ಸ್ವಾಮಿ, ಎಂ. ಬಸವರಾಜ ನಾಯ್ಕ, ಮುಖಂಡರಾದ ರಮೇಶ ನಾಯ್ಕ,ಎಚ್.ಎನ್. ಶಿವಕುಮಾರ, ಆನಂದಪ್ಪ, ಬನ್ನಿಕೋಡು ಹನುಮಂತಪ್ಪ, ತಾಪಂ ಸದಸ್ಯ ಸಂಗಜ್ಜಗೌಡ ಇತರರು ವೇದಿಕೆಯಲ್ಲಿದ್ದರು.