Advertisement

ಕೊನೇ ಘಳಿಗೆಯಲ್ಲಿ ವಿಧೇಯಕ ಮಂಡನೆಗೆ ಬಿಜೆಪಿ ಆಕ್ಷೇಪ

11:52 AM Jun 21, 2017 | Team Udayavani |

ವಿಧಾನಸಭೆ: ಅಧಿವೇಶನದ ಕೊನೆಯಲ್ಲಿ ಹೆಚ್ಚಿನ ವಿಧೇಯಕಗಳನ್ನು ಮಂಡಿಸಿ ಅನುಮೋದನೆ ಪಡೆಯುವ ಸರ್ಕಾರದ ಕ್ರಮಕ್ಕೆ ಪ್ರತಿ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆಕ್ಷೇಪ ವ್ಯಕ್ತಪಡಿಸಿದರು.

Advertisement

ಮಂಗಳವಾರ ಸರ್ಕಾರ ಖಾಸಗಿ ಆಸ್ಪತ್ರೆಗಳ ನಿಯಂತ್ರಣ, ವಿಶ್ವ ವಿದ್ಯಾಲಯಗಳ ಸಮಗ್ರ ತಿದ್ದುಪಡಿ ವಿಧೇಯಕಗಳು ಸೇರಿ ಹತ್ತಕ್ಕೂ ಹೆಚ್ಚು ವಿಧೇಯಕಗಳ ಬಗ್ಗೆ ಚರ್ಚಿಸಿ ಅಂಗೀ ಕರಿಸಲು ಮುಂದಾಗಿತ್ತು.

ಮಂಗಳವಾರವೇ, ಸಾರಿಗೆ ಇಲಾಖೆಯಿಂದ ರಸ್ತೆ ಸುರಕ್ಷಾ ಪ್ರಾಧಿಕಾರ ವಿಧೇಯಕ, ಗೃಹ ಇಲಾಖೆಯಿಂದ ಸಾರ್ವಜನಿಕ
ಸುರಕ್ಷೆಯ ವಿಧೇಯಕಗಳನ್ನು ಮಂಡಿಸಿ ಅನುಮೋದನೆ ನೀಡುವಂತೆ ಮನವಿ ಮಾಡಿಕೊಳ್ಳಲಾಯಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಗದೀಶ ಶೆಟ್ಟರ್‌, ಕೊನೆಯ ದಿನ ವಿಧೇಯಕಗಳನ್ನು ಮಂಡಿ ಸುವುದರಿಂದ ಸಮಗ್ರ ಚರ್ಚೆಗೆ
ಅವಕಾಶ ದೊರೆಯುವುದಿಲ್ಲ.

ಸುಗಮ ಕಲಾಪ ನಡೆಸಲು ಪ್ರತಿಪಕ್ಷಗಳು ಸಹಕಾರ ನೀಡುತ್ತಿವೆ. ಆದರೆ, ಒಂದೇ ದಿನ ಏಳೆಂಟು ವಿಧೇಯಕಗಳನ್ನು ಮಂಡಿಸಿದರೆ, ಶಾಸಕರು ಅವುಗಳ ಬಗ್ಗೆ ಅಧ್ಯಯನ ಮಾಡಿ ಚರ್ಚಿಸಲು ಅವಕಾಶ ಸಿಗುವುದಿಲ್ಲ. ತರಾತುರಿಯಲ್ಲಿ ವಿಧೇಯಕ ಮಂಡಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮುಂದಿನ ಅಧಿವೇಶನದಲ್ಲಿ ಈ ರೀತಿ ಕೊನೇ ಘಳಿಗೆಯಲ್ಲಿ ವಿಧೇಯಕ ಮಂಡನೆ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next