Advertisement

ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿಯ ನಾರಿ ಅಸ್ತ್ರ

03:02 AM Apr 12, 2019 | sudhir |

ಮಣಿಪಾಲ: ದೇವರನಾಡಿನ ವಯನಾಡ್‌ನಿಂದ ಸ್ಪರ್ಧಿಸುತ್ತಿರುವ ರಾಹುಲ್‌ ವಿರುದ್ಧ ಬಿಜೆಪಿ ಪರ ಪ್ರಚಾರ ಮಾಡುವವರು ಯಾರು ಅಂದುಕೊಂಡಿದ್ದೀರಿ?
ಅಮೇಠಿಯ ಒಂದು ಸಾವಿರ ಮಹಿಳೆಯರು. ಆ ಕ್ಷೇತ್ರದಲ್ಲಿ ರಾಹುಲ್‌ ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ ಎಂಬುದನ್ನು ಇಲ್ಲಿನ ಮತದಾರರಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ಬಿಜೆಪಿಯದ್ದು.

Advertisement

ರಾಜಕೀಯ ಲೆಕ್ಕಾ ಚಾರದ ಪ್ರಕಾರ ರಾಹುಲ್‌ ಗಾಂಧಿಗೆ ವಯನಾಡಿನಲ್ಲಿ ಗೆಲುವು ಕಷ್ಟವೇನಲ್ಲ. ಅಮೇಠಿಯಲ್ಲಿ ರಾಹುಲ್‌ ವಿರುದ್ಧ ಸ್ಪರ್ಧಿಸಿರುವ ಬಿಜೆಪಿಯ ಸ್ಮತಿ ಇರಾನಿ ಕಳೆದ ಚುನಾವಣೆಯಲ್ಲಿ ಸೋಲನು ಭವಿಸಿದ್ದರೂ ಗುಜರಾತ್‌ ನಿಂದ ರಾಜ್ಯ ಸಭೆ ಪ್ರವೇಶಿಸಿ ಮಂತ್ರಿ ಯಾದರು. ಕೇಂದ್ರ ಸಚಿವೆಯಾಗಿ ಒಂದಿಷ್ಟು ಪ್ರಭಾವ ಇರುವುದರಿಂದ ಅಮೇಠಿಯಲ್ಲಿ ಈ ಬಾರಿ ರಾಹುಲ್‌ ಗೆ ಜಯ ಬಹಳ ಸುಲಭವಿಲ್ಲ ಎನ್ನಲಾಗುತ್ತಿದೆ.

ಈಗ ಬಿಜೆಪಿಯು ವಯನಾಡಿನಲ್ಲಿ ರಾಹುಲ್‌ ಜಯಕ್ಕೆ ಅಡ್ಡ ಹಾಕುವ ಬಗೆ ಹುಡುಕುತ್ತಿದೆ. ಹೀಗಾಗಿ ಮಹಿಳಾ ಅಸ್ತ್ರ ಬಳಸಲು ನಿರ್ಧರಿಸಿದೆ. ಈ ಮೂಲಕ ರಾಹುಲ್‌ರನ್ನು ಎರಡೂ ಕ್ಷೇತ್ರಗಳಿಂದ ಸೋಲಿಸುವುದು ಬಿಜೆಪಿಯ ಉದ್ದೇಶ.

1000 ಮಹಿಳೆಯರು!
ಅಮೇಠಿಯ ಬೇರೆ ಬೇರೆ ಪ್ರದೇಶ ಗಳ 1000 ಮಹಿಳೆಯರು ವಯ ನಾಡಿಗೆ ಬಂದಿಳಿಯುವರು. ರಾಹುಲ್‌ 10 ವರ್ಷ ದಲ್ಲಿ ಏನೂ ಮಾಡಿಲ್ಲ ಮಹಿಳೆಯರು ವಿವರಿಸಲಿದ್ದಾರೆ. ಸಂಸದರಾಗಿ ರಾಹುಲ್‌ ಸಾಧನೆ ಕಳಪೆ ಎಂಬುದನ್ನು ಮತದಾರರಿಗೆ ವಿವರಿಸಲು ಈ ತಂತ್ರ.

ಬಿಜೆಪಿಗೆ ಏನು ಭಯ?
ದಕ್ಷಿಣದಲ್ಲಿ ಕರ್ನಾಟಕ ಹೊರತು ಪಡಿಸಿ ಬೇರೆಲ್ಲೂ ಅಷ್ಟಾಗಿ ಪ್ರಾಬಲ್ಯ ಹೊಂದಿ ರದ ಬಿಜೆಪಿಗೆ ವಯನಾಡ್‌ ಮಾತ್ರ ಗೆಲ್ಲಲೇಬೇಕೆನ್ನುವ ಹಠವೊಂದು ಮೇಲ್ನೋಟಕ್ಕೆ ಇದ್ದಂತೆ ಕಂಡರೂ ಅದರ ಹಿಂದಿನ ಕಾರ್ಯಸೂಚಿಯೇ ಬೇರೆ ಎನ್ನ ಲಾಗು ತ್ತಿದೆ. ಬಿಜೆಪಿಗೆ ವಯನಾಡಿ ನಲ್ಲಿ ಕಾಂಗ್ರೆಸ್‌ ಪ್ರತಿಸ್ಪರ್ಧಿಯಾಗಿದ್ದರೂ, ನಿಜವಾಗಿ ವಯನಾಡಿನಲ್ಲಿ ಸ್ಪರ್ಧೆ ಏರ್ಪ ಡು ವುದು ಕಾಂಗ್ರೆಸ್‌ ಮತ್ತು ಸಿಪಿಐಎಂ ಮಧ್ಯೆ. ಹಾಗಾಗಿ ಇವುಗಳ ಗೆಲುವನ್ನು ಕೊಂಚ ಜಟಿಲಗೊಳಿಸುವ ಉದ್ದೇಶವೂ ಬಿಜೆಪಿಗೆ ಇದ್ದಂತೆ ತೋರುತ್ತಿದೆ.

Advertisement

ಯಾಕೆ ಈ ಕ್ರಮ?
ಅಮೇಠಿ ಕಾಂಗ್ರೆಸ್‌ ಭದ್ರಕೋಟೆಯಾಗಿ ದ್ದರೂ, ರಾಹುಲ್‌ ದಕ್ಷಿಣದತ್ತ ಮುಖ ಮಾಡಿದ್ದು, ಪಕ್ಷದ ಬಲವರ್ಧನೆಗೆ ಎಂಬ ಕೂಗು ದಕ್ಷಿಣ ರಾಜ್ಯಗಳ ಕಾಂಗ್ರೆಸ್‌ ನಾಯಕರು ಪದೇ ಪದೇ ಉಚ್ಚರಿಸುತ್ತಿದ್ದರು. ಇದಕ್ಕಾಗಿ ಕರ್ನಾಟಕದಿಂದಲೂ ರಾಹುಲ್‌ ಸ್ಪರ್ಧೆಗೆ ಕೈ ನಾಯಕರು ವಿಶೇಷ ಪ್ರಯತ್ನ ನಡೆಸಿದ್ದರೂ, ಪ್ರಯೋಜನವಾಗಲಿಲ್ಲ. ರಾಹುಲ್‌ ಜಯಗಳಿಸಿದರೆ ನೆರೆಯ ರಾಜ್ಯಗಳೂ ಸೇರಿದಂತೆ ದಕ್ಷಿಣದಲ್ಲಿ ಬಿಜೆಪಿಯ ವಿಸ್ತಾರಕ್ಕೆ ಕಷ್ಟವಾಗಬಹುದು ಎಂಬ ಆತಂಕ ಬಿಜೆಪಿಯದ್ದು. ಆದ ಕಾರಣ 1000 ಮಹಿಳೆಯರಿಂದ ಪ್ರಚಾರ ನಡೆಸುವುದೂ ಸೇರಿದಂತೆ ಎಲ್ಲ ರಾಜಕೀಯ ತಂತ್ರಗಳನ್ನು ಬಳಸಲು ಬಿಜೆಪಿ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next