Advertisement

ಬಿಜೆಪಿ ಸದಸ್ಯತ್ವ ಬಲ 14 ಕೋಟಿ

12:16 AM Aug 22, 2019 | Sriram |

ಹೊಸದಿಲ್ಲಿ: ಬರೋಬ್ಬರಿ 11 ಕೋಟಿ ಸದಸ್ಯರು ಇರುವ ವಿಶ್ವದ ಬೃಹತ್‌ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಿಜೆಪಿಗೆ ಈಗ ಮತ್ತಷ್ಟು ಸದಸ್ಯರು ಸೇರ್ಪಡೆಯಾಗಿದ್ದು, ಸದಸ್ಯತ್ವ ಅಭಿಯಾನ ಯಶಸ್ವಿಯಾಗಿದೆ.

Advertisement

ಪ್ರಸಕ್ತ ಸಾಲಿನಲ್ಲಿ 2.2 ಕೋಟಿ ಹೊಸ ಸದಸ್ಯರನ್ನು ಸೇರಿಸಿಕೊಳ್ಳುವ ಗುರಿ ಹಾಕಿಕೊಂಡಿದ್ದ ಆಡಳಿತಾರೂಢ ಪಕ್ಷಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದ್ದು, 3.78 ಕೋಟಿ ಮಂದಿ ಹೊಸತಾಗಿ ಸದಸ್ಯರಾಗಿದ್ದಾರೆ. ಇದರಿಂದಾಗಿ, ಪಕ್ಷದ ಒಟ್ಟು ಸದಸ್ಯರ ಸಂಖ್ಯೆ 14 ಕೋಟಿಗೆ ಏರಿದೆ. ಹೊಸತಾಗಿ ಸದಸ್ಯತ್ವ ಪಡೆದುಕೊಂಡವರ ಸಂಖ್ಯೆ 3,78,67,753 ಆಗಿದೆ. ಸದಸ್ಯತ್ವ ಅಭಿಯಾನದ ಸಹ ಸಂಯೋಜಕ ಮತ್ತು ಉಪಾಧ್ಯಕ್ಷ ದುಷ್ಯಂತ್‌ ಕುಮಾರ್‌ ಗೌತಮ್‌ ಬುಧವಾರ ಹೊಸದಿಲ್ಲಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ 65 ಲಕ್ಷ, ಪಶ್ಚಿಮ ಬಂಗಾಳದಲ್ಲಿ 36 ಲಕ್ಷ, ಗುಜರಾತ್‌ನಲ್ಲಿ 34 ಲಕ್ಷ, ದಿಲ್ಲಿಯಲ್ಲಿ 15 ಲಕ್ಷ ಹೊಸ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next