Advertisement

ಕಾಂಗ್ರೆಸ್ಸಿನ ಅಭಿವೃದ್ಧಿ ಹೆಜ್ಜೆಗೆ ವಿರೋಧವೇ ಬಿಜೆಪಿ ಕೆಲಸ: ಕೆ.ಜೆ.ಜಾರ್ಜ್

12:26 PM Jun 16, 2023 | Team Udayavani |

ಚಿಕ್ಕಮಗಳೂರು: ಬಿಜೆಪಿಯವರ ಕೆಲಸವೇ ವಿರೋಧ ಮಾಡುವುದು. ಕಾಂಗ್ರೆಸ್ಸಿನ ಅಭಿವೃದ್ಧಿ ಹೆಜ್ಜೆಗೆ ವಿರೋಧವೇ ಅವರ ಕೆಲಸ. ಅವರು ಪ್ರತಿಪಕ್ಷ‌ ಅಲ್ಲ, ವಿರೋಧ ಪಕ್ಷ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಮೊದಲೇ ಇತ್ತು. ಬಲವಂತ, ಆಶ್ವಾಸನೆ ಕೊಟ್ಟು ಮತಾಂತರ ಮಾಡುವುದು ತಪ್ಪು, ಹಳೆಯ ಕಾಯ್ದೆಯೇ ಇದೆ. ಆರೋಪ ಮಾಡಿದವರು ಪ್ರೂವ್ ಮಾಡಬೇಕು. ಆರೋಪ ಮಾಡುವವರು ಸಾಕ್ಷಿ ಕೊಟ್ಟು ಹೇಳಬೇಕು. ನನ್ನ ಮೇಲೆ ಆರೋಪ‌ ಮಾಡಿದರೆ ನಾನೇ ಪ್ರೂವ್ ಮಾಡಬೇಕೆ? ಇದು ಯಾವ ಕಾನೂನಿನಲ್ಲಿ ಇದೆ. ಈ ರೀತಿ ತುಂಬಾ ತಪ್ಪು ಮಾಡಿದ್ದಾರೆ, ನಾವು ಸರಿ ಮಾಡುತ್ತೇವೆ ಎಂದರು.

ಇದನ್ನೂ ಓದಿ:Sand Mafia ಅಕ್ರಮ ಮರಳು ಸಾಗಣಿಕೆ: ಟ್ರ್ಯಾಕ್ಟರ್ ಹರಿದು ಪೊಲೀಸ್ ಪೇದೆ ಸಾವು

ಇಷ್ಟು ದಿನ ಇದ್ದರಲ್ಲ, ಹೊಸದಾಗಿ ಏನು ಕಂಡು ಹಿಡಿದಿದ್ದಾರೆ. ನಮ್ಮ ಜವಾಬ್ದಾರಿ ಇದೆ, ಎಲ್ಲರಿಗೂ ಸರಿ ಆಗುವ ಕಾಯ್ದೆ ಜಾರಿಗೆ ಮಾಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next