Advertisement

ಬಿಜೆಪಿಯದ್ದು ತುಷ್ಟೀಕರಣವಲ್ಲ ; ರಾಷ್ಟ್ರದೇವೋಭವ ಭಾವ: ಸಾಕ್ಷಿ ಮಹಾರಾಜ್‌

02:04 AM Dec 08, 2020 | mahesh |

ಉಡುಪಿ: ‘ಬಿಜೆಪಿಯದ್ದು ಖಂಡಿತಾ ಒಂದು ಸಮುದಾಯದ ತುಷ್ಟೀಕರಣವಲ್ಲ ; ಅದು ರಾಷ್ಟ್ರದೇವೋಭವ ಭಾವ’ಎಂದು ಸ್ಪಷ್ಪಪಡಿಸಿ ದವರು ಬಿಜೆಪಿಯ ಫ‌ಯರ್‌ ಬ್ರ್ಯಾಂಡ್‌ ನಾಯಕ ಹಾಗೂ ಸಂಸದ ಸಾಕ್ಷಿ ಮಹಾರಾಜ್‌.

Advertisement

ತಮ್ಮ ಬೆಂಕಿಯುಗುಳುವ ಮಾತು ಗಳಿಂದಲೇ ಪ್ರಸಿದ್ಧರಾಗಿರುವ ಸಾಕ್ಷಿ ಮಹಾ ರಾಜ್‌ ಪ್ರಸ್ತುತ ಉಡುಪಿಯ ತೆಕ್ಕಟ್ಟೆಯ ಆಯುರ್ವೇದ ಆಶ್ರಮದಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಾ ಆರಾಮ ವಾಗಿದ್ದಾರೆ. ವೈ ಪ್ಲಸ್‌ನಂಥ ಬಿಗಿ ಭದ್ರತೆಯನ್ನು ಸ್ವಲ್ಪ ಬದಿಗಿರಿಸಿ ಖುಷಿಯಿಂದ ಇದ್ದಾರೆ. ಇದೇ ಸಾಕ್ಷಿಯವರು ಸ್ವಸ್ಥಾನಕ್ಕೆ, ರಾಜಕೀಯ ಅಖಾಡಕ್ಕೆ ಮರಳಿದರೆ ಭದ್ರತೆಯ ಜಬರ್‌ದಸ್ತ್ ಬೇರೆ.

ಉಡುಪಿಯ ಡಾ| ತನ್ಮಯ ಗೋಸ್ವಾಮಿ ಅವರು ಚಿಕಿತ್ಸೆ ನೀಡುತ್ತಿದ್ದು, ಉದಯವಾಣಿಯ ಚುಟುಕು ಸಂದರ್ಶನದಲ್ಲಿ ಅದೇ ಬಿಗಿಯಲ್ಲೇ ಸಾಕ್ಷಿ ಮಹಾರಾಜ್‌ ಮಾತನಾ ಡಿದ್ದಾರೆ. ಒಟ್ಟು ಸಾರ ಇಲ್ಲಿ ನೀಡಲಾಗಿದೆ :

 ಬಿಜೆಪಿಯ ಗೆಲುವಿನ ಗುಟ್ಟೇನು?
ಸ್ವಾತಂತ್ರಾéನಂತರ ಅಭೂತಪೂರ್ವ ಕೆಲಸಗಳು ಯುದೊœàಪಾದಿಯಲ್ಲಿ ನಡೆಯು ತ್ತಿವೆ. ಶತಮಾನಗಳಷ್ಟು ಹಳೆಯ ಅಯೋಧ್ಯೆ, ಕಾಶ್ಮೀರದಂತಹ ಸಮಸ್ಯೆಗಳು ಬಗೆಹರಿಯುತ್ತಿವೆ. ಹಿಂದೂಗಳ ಭಾವನೆಗಳನ್ನು ಅರಿತು ಕೆಲಸ ಮಾಡಿರುವುದರಿಂದ ಜನರೂ ಬಿಜೆಪಿಯನ್ನೇ ಆಯ್ಕೆ ಮಾಡುತ್ತಾರೆ. ಇಲ್ಲಿ ತುಷ್ಟೀಕರಣವಿಲ್ಲ, ರಾಷ್ಟ್ರದೇವೋಭವ ಭಾವನೆ ಇದೆ.

 ನಿಮಗೆ ಮಂತ್ರಿ ಪದವಿ ಸಿಗುವ ಸಾಧ್ಯತೆ ಇದೆಯೆ?
ಎಲ್ಲ ಸಚಿವರೂ ನನಗೆ ಗೌರವ ಸಲ್ಲಿಸಿ ಸಲಹೆ ಪಡೆಯುತ್ತಿದ್ದಾರೆ. ಹೀಗಾಗಿ ನಾನು ಸಂತೃಪ್ತ. ರಾಜಕೀಯ ನನ್ನ ಜೀವನವ್ರತ ಅಲ್ಲ. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿದ್ದೇನೆ. ನಾನು ಹರಿದ್ವಾರದ ನಿರ್ಮಲಾ ಪಂಚಾಯತ್‌ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಸ್ಥಾನ ದಲ್ಲಿದ್ದೇನೆ. ಇದು ನನಗೆ ಹೆಚ್ಚು ಮುಖ್ಯ.

Advertisement

 ಕಟ್ಟಾ ಹಿಂದುತ್ವವಾದಿ ಯಾದ ನೀವು ಹೇಗೆ ಮುಲಾಯಂ ಸಿಂಗ್‌ ಸಖ್ಯದಲ್ಲಿದ್ದಿರಿ?
ಕೆಲವು ಸಮಯವಿದ್ದೆ. ಮುಲಾಯಂ ಅವರು ಉತ್ತಮ ನಾಯಕ. ಸಂಸತ್ತಿನಲ್ಲಿ ಸೋನಿಯಾ ಗಾಂಧಿಯವರು ಎದುರಿಗೆ ಇರುವಾಗಲೇ ಮೋದಿಯವರನ್ನು ಉದ್ದೇಶಿಸಿ ಉತ್ತಮ ಕೆಲಸ ಮಾಡಿದ್ದರಿಂದ ನೀವು ಮತ್ತೂಮ್ಮೆ ಪ್ರಧಾನಿಯಾಗುತ್ತೀರಿ ಎಂದು ಹೇಳುವ ಎದೆಗಾರಿಕೆ ಅವರಿಗೆ
ಇದೆ. ಅವರ ದೋಷವೆಂದರೆ ಮುಸ್ಲಿಮರ
ತುಷ್ಟೀಕರಣ. ಅವರ ಮಗ ಅಖೀಲೇಶ್‌ ಯಾದವ್‌ಗೆ ತುಷ್ಟೀಕರಣ ಭಾವನೆ ಇಲ್ಲ. ಸ್ವತಂತ್ರ ಚಿಂತನೆ ಇದೆ.

 ನಿಮ್ಮ ಫ‌ಯರ್‌ಬ್ರ್ಯಾಂಡ್‌ ಈಗ ಕಾಣುತ್ತಿಲ್ಲವಲ್ಲ?
ಹಿಂದೆ ಖಟ್ಟರ್‌ವಾದಿ ನಾನೊಬ್ಬನೇ ಇದ್ದೆ. ಈಗ ಮೋದಿ, ಶಾ, ಆದಿತ್ಯನಾಥ್‌ ಹೀಗೆ ಬಹಳಷ್ಟು ಜನರಿದ್ದಾರಲ್ಲ.

 ರಾಮಜನ್ಮಭೂಮಿ ವಿಚಾರದಲ್ಲಿ ಕಾಂಗ್ರೆಸ್‌ ಹಿಂದೂಗಳ ಪರವಾಗಿ ಕೆಲಸ ಮಾಡಿದರೂ ಏಕೆ ವಿರೋಧಿಸುತ್ತೀರಿ?
ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಮೂರ್ತಿಯನ್ನು ಇಟ್ಟು ಪೂಜಿಸಿದ್ದು, ಬೀಗ ತೆಗೆದದ್ದು, ರಾಜೀವ್‌ ಗಾಂಧಿಯವರು ಶಿಲಾನ್ಯಾಸ ಮಾಡಿದ್ದು, ನರಸಿಂಹ ರಾವ್‌ ಹಳೆಯ ಗುಂಬಜ್‌ ಒಡೆಯುವಾಗ ಮೌನ ತಾಳಿದ್ದು ಹೀಗೆ ಅನೇಕ ರೀತಿಯಲ್ಲಿ ಕಾಂಗ್ರೆಸ್‌ ನೆರವಾದದ್ದು ತುಷ್ಟೀಕರಣ ನೀತಿಯಿಂದ. ಮತ ಬ್ಯಾಂಕ್‌ ದೃಷ್ಟಿಯಲ್ಲಿ. ಇದೇ ರೀತಿ ಮುಸ್ಲಿಂ ತುಷ್ಟೀಕರಣವನ್ನೂ ಮಾಡಿತು. ಹಾಗಿದ್ದರೆ ಮಂದಿರ ನಿರ್ಮಾಣವನ್ನು ನಿಲ್ಲಿಸಬೇಕೆಂದು ಕಪಿಲ್‌ ಸಿಬಲ್‌ ಸರ್ವೋಚ್ಚ ನ್ಯಾಯಾಲಯದಲ್ಲಿ ಏಕೆ ವಾದಿಸಬೇಕಿತ್ತು? ಬಿಜೆಪಿ ತುಷ್ಟೀಕರಣ ಮಾಡುತ್ತಿಲ್ಲ, ರಾಮನಿಗಾಗಿ, ದೇಶಕ್ಕಾಗಿ ಕೆಲಸ ಮಾಡುತ್ತಿದೆ.

 ಮುಂದಿನ ಬಾರಿಯೂ ನರೇಂದ್ರ ಮೋದಿ ಯವರು ಪ್ರಧಾನಿಯಾಗಬಹುದೆ?
ಮೋದಿಯವರು ಬಯಸಿದಷ್ಟು ದಿನ ಪ್ರಧಾನಮಂತ್ರಿಯಾಗಿರಬಹುದು. ಅವರು ಬಯಸಿದರೆ ರಾಷ್ಟ್ರಪತಿಯೂ ಆಗಬಹುದು. ಅವರು ಭಾರತದ ಪ್ರಧಾನಿಯಾದರೂ
ಜಗತ್ತಿನ ನೇತಾರ.

ಸಾಕ್ಷಿ ಅವರ ಉನ್ನಾವೊ ಕ್ಷೇತ್ರದ ವೈಶಿಷ್ಟ್ಯ
ಸಾಕ್ಷಿ ಮಹಾರಾಜರ ಪೂರ್ಣ ಹೆಸರು ಸ್ವಾಮಿ ಸಚ್ಚಿದಾನಂದ ಹರಿ ಸಾಕ್ಷಿ ಮಹಾರಾಜ್‌. ಇವರ ಬೆಂಕಿಯುಗುಳುವ ಮಾತಿನಿಂದಾಗಿ ಬಿಜೆಪಿ ಫ‌ಯರ್‌ ಬ್ರ್ಯಾಂಡ್‌ ಎಂದೇ ಪ್ರಸಿದ್ಧಿ. ಆದರೆ ಇತ್ತೀಚಿನ ದಿನಗಳಲ್ಲಿ ತುಸು ಮೌನ ತಾಳಿದ್ದಾರೆ. ಉತ್ತರ ಪ್ರದೇಶದ ಮಥುರಾದಲ್ಲಿ ಒಂದು ಬಾರಿ, ಫ‌ರೂಕಾಬಾದ್‌ನಲ್ಲಿ ಮೂರು ಬಾರಿ, ಉನ್ನಾವೊದಲ್ಲಿ ಎರಡು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಸಾಕ್ಷಿಯವರಿಗೆ ಈಗ ಪ್ರತಿನಿಧಿಸುತ್ತಿರುವ ಉನ್ನಾವೊ ಕ್ಷೇತ್ರದ ಬಗೆಗೆ ಅಭಿಮಾನವಿದೆ. ಕ್ಷೇತ್ರದಲ್ಲಿ ಕ್ರಾಂತಿಕಾರಿ ಚಂದ್ರಶೇಖರ ಆಜಾದ್‌ ಹುಟ್ಟೂರು, ಲವಕುಶರು ಜನಿಸಿದ ವಾಲ್ಮೀಕಿ ಆಶ್ರಮ, ಪಂ| ಸೂರ್ಯಕಾಂತಿ ತ್ರಿಪಾಠಿಯಂತಹ ಹಿಂದಿ ಸಾಹಿತಿಗಳು, ಗುಲಾಬ್‌ಸಿಂಗ್‌ ಲೋಧಾರಂತಹ ಐತಿಹಾಸಿಕ ರಾಜರ ಸ್ಥಳ ಇವೆ-ಹೀಗೆ ಇದು ಆಡಳಿತ, ರಾಜಕೀಯ, ಆಧ್ಯಾತ್ಮಿಕ ಮಿಲನದ ಸಂಗಮ ಸ್ಥಳ ಎನ್ನುತ್ತಾರೆ ಸಾಕ್ಷಿ.

Advertisement

Udayavani is now on Telegram. Click here to join our channel and stay updated with the latest news.

Next