Advertisement

ಬಿಜೆಪಿಯ ಅನ್ವರ್ಥನಾಮ ವೆಂಕಯ್ಯ ನಾಯ್ಡು ಭಾರತದ ನೂತನ ಉಪ ರಾಷ್ಟ್ರಪತಿ

07:41 PM Aug 05, 2017 | Team Udayavani |

ಹೊಸದಿಲ್ಲಿ : ಎನ್‌ಡಿಎ ಅಭ್ಯರ್ಥಿ ರಾಮನಾಥ್‌ ಕೋವಿಂದ್‌ ಅವರು ರಾಷ್ಟ್ರಪತಿಯಾಗಿ ಚುನಾಯಿತರಾದ ಬಳಿಕ ಇದೀಗ ಮತ್ತೋರ್ವ ಎನ್‌ಡಿಎ ಅಭ್ಯರ್ಥಿ, ಕೇಂದ್ರದ ಮಾಜಿ ಸಚಿವ, ಬಿಜೆಪಿಯ ಅನ್ವರ್ಥನಾಮ, ಎಂ ವೆಂಕಯ್ಯ ನಾಯ್ಡು ಅವರು ಇಂದು ಶನಿವಾರ ನಡೆದ ಚುನಾವಣೆಯಲ್ಲಿ  ದೇಶದ 15ನೇ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.

Advertisement

ಒಟ್ಟು ಚಲಾಯಿಸಲ್ಪಟ್ಟ 760 ಮತಗಳಲ್ಲಿ ನಾಯ್ಡು ಅವರಿಗೆ 516 ಮತಗಳು ಲಭಿಸಿವೆ. ಅವರ ಪ್ರತಿಸ್ಪರ್ಧಿಯಾಗಿರುವ ವಿಪಕ್ಷಗಳ ಅಭ್ಯರ್ಥಿ, ಪಶ್ಚಿಮ ಬಂಗಾಲದ ಮಾಜಿ ರಾಜ್ಯಪಾಲ, ಗೋಪಾಲಕೃಷ್ಣ ಗಾಂಧಿ ಅವರಿಗೆ 244 ಮತಗಳ ಪ್ರಾಪ್ತವಾಗಿವೆ. 

ನಾಯ್ಡು ಅವರು ಇಷ್ಟೊಂದು ದೊಡ್ಡ ಅಂತರದಲ್ಲಿ ಚುನಾಯಿತರಾಗುವುದನ್ನು ಸ್ವತಃ ಬಿಜೆಪಿಯೇ ನಿರೀಕ್ಷಿಸಿರಲಿಲ್ಲ. 19 ವಿರೋಧ ಪಕ್ಷಗಳು ವೆಂಕಯ್ಯ ನಾಯ್ಡು ಪರವಾಗಿಯೇ ಮತ ಹಾಕಿರುವುದಾಗಿ ವರದಿಗಳು ತಿಳಿಸಿವೆ. 

ಎರಡು ಅವಧಿಯನ್ನು ಕಂಡಿರುವ ಹಾಲಿ ಉಪ ರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರ ಕಾರ್ಯಾವಧಿ ಇದೇ ಆಗಸ್ಟ್‌ 10ರಂದು ಮುಗಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next