Advertisement

ಬಿಜೆಪಿ ಸ್ಥಾಪನಾ ದಿನಾಚರಣೆ: ಕಾರ್ಯಕರ್ತರ ಜವಾಬ್ದಾರಿ ಹೆಚ್ಚಾಗಿದೆ; ಧರೆಪ್ಪ ಉಳ್ಳಾಗಡ್ಡಿ

06:07 PM Apr 06, 2022 | Team Udayavani |

ರಬಕವಿ-ಬನಹಟ್ಟಿ: ವಿಶ್ವದ ದೃಷ್ಠಿಕೋನ ಮತ್ತು ಭಾರತದ ದೃಷ್ಠಿಕೋನದಿಂದ ಬಿಜೆಪಿ ಪಕ್ಷದ ಹೊಣೆಗಾರಿಕೆ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರ ಹೊಣೆಗಾರಿಕೆ ಬಹಳಷ್ಟು ಮಹತ್ವದ್ದಾಗಿದೆ. ನಮ್ಮ ಪಕ್ಷಕ್ಕೆ ರಾಷ್ಟ್ರೀಯ ಹಿತಾಸಕ್ತಿ ಮುಖ್ಯವಾಗಿದೆ. ನಮ್ಮ ದೇಶದ ಹತ್ತಿರ ತನ್ನದೆ ಆದ ನೀತಿ ನಿಯಮಗಳಿವೆ. ಇದರಿಂದಾಗಿ ಭಾರತ ಇಂದು ಅನೇಕ ಕ್ಷೇತ್ರಗಳಲ್ಲಿ ಬಹಳಷ್ಟು ಅಭಿವೃದ್ಧಿಯನ್ನು ಸಾಧಿಸಿದೆ ಎಂದು ರಬಕವಿ ಬನಹಟ್ಟಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ ತಿಳಿಸಿದರು.

Advertisement

ಅವರು ಬುಧವಾರ ರಬಕವಿ ನಗರದ ಬೂತ್ ಮಟ್ಟದ ಅಧ್ಯಕ್ಷರ ಮನೆಯ ಮುಂಭಾಗದಲ್ಲಿ ಬಿಜೆಪಿ ಪಕ್ಷದ ಧ್ವಜವನ್ನು ಅನಾವರಣಗೊಳಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ನಗರಸಭೆಯ ಸದಸ್ಯ ಯಲ್ಲಪ್ಪ ಕಟಗಿ ಮಾತನಾಡಿ, ಈಚೇಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸಾಧನೆ ಗಮನ ಸೆಳೆಯುವಂತಹದು. ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶವನ್ನು ಮುನ್ನಡೆಸಲು ಪ್ರತಿಯೊಬ್ಬ ಕಾರ್ಯಕರ್ತರು  ಪಕ್ಷ ನಿರ್ವಹಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು. ಪಕ್ಷಕ್ಕೆ ನಿಷ್ಠೆ ಉಳ್ಳವರಿಗೆ ಪಕ್ಷ ಫಲವನ್ನು ನೀಡುತ್ತದೆ ಎಂದರು.

ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷರಾದ ಬಾಳೇಶ ಪಟೇಲ, ದಾನಪ್ಪ ತುಂಗಳ, ಪಕ್ಷದ ಪ್ರಧಾನ ಕಾರ್ಯದರ್ಶಿ ಈಶ್ವರ ಯಳಸಂಗ, ಕಾರ್ಯಕರ್ತರಾದ ಶಾಂತವೀರ ಗೋಣಿ, ರಾಘು ಖವಾಸಿ, ಗಿರೀಶ ರಾವಳ, ಆನಂದ ಚವಳಗಿ, ಅನ್ನಪ್ಪ ಚಾಪಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next