Advertisement
ಘಟನೆಗೆ ಬಿಜೆಪಿ ಮತ್ತು ಆರೆಸ್ಸೆಸ್ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದ ಕೆಲವೇ ಗಂಟೆಗಳಲ್ಲಿ ದರ್ಜಿಯನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ಕುರಿತು ಶನಿವಾರ ಪ್ರತಿಕ್ರಿಯಿಸಿದ ರಾಹುಲ್, “ಒಬ್ಬ ಬಿಜೆಪಿ ಕಾರ್ಯಕರ್ತ ದೊಡ್ಡ ಕಲ್ಲೊಂದನ್ನು ಕೈಯಲ್ಲಿ ಹಿಡಿದುಕೊಂಡು ನನ್ನತ್ತ ಓಡಿ ಬಂದು ಎಸೆದ. ಅದು ನನ್ನ ಖಾಸಗಿ ಭದ್ರತಾ ಅಧಿಕಾರಿ (ಪಿಎಸ್‌ಒ)ಗೆ ತಾಗಿತು. ಇದು ಮೋದಿ, ಬಿಜೆಪಿ ಮತ್ತು ಆರೆಸ್ಸೆಸ್ ಮಾಡುವಂಥ ರಾಜಕೀಯ. ಇದಕ್ಕಿಂತ ಹೆಚ್ಚಿನದ್ದನ್ನು ನಾನೇನೂ ಹೇಳಲಾರೆ. ಅವರೇ (ಬಿಜೆಪಿ) ಇದರ ಹಿಂದೆ ಇರುವಾಗ ಘಟನೆಯನ್ನು ಅವರೇಕೆ ಖಂಡಿಸುತ್ತಾರೆ’ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ತಮ್ಮ ವಿರುದ್ಧದ ದಾಳಿಯನ್ನು ಖಂಡಿಸಿ ಯಾರೂ ಪ್ರತಿಭಟನೆ ನಡೆಸಬೇಡಿ. ಅದರ ಬದಲಿಗೆ ಪ್ರವಾಹಪೀಡಿತ ಜನರ ನೆರವಿಗೆ ಧಾವಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
– ಪಿ. ಚಿದಂಬರಂ, ಕೇಂದ್ರದ ಮಾಜಿ ಸಚಿವ