Advertisement

ಇಂದಿನಿಂದ ಬಿಜೆಪಿ ಯಾತ್ರೆ;  ಬಿಎಸ್‌ವೈ ಪ್ರತ್ಯೇಕ ಪ್ರವಾಸಕ್ಕಿಲ್ಲ ಅನುಮತಿ

02:30 AM Apr 12, 2022 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿ ನಾಯಕರ 3 ತಂಡಗಳ, 3 ಹಂತದ ರಾಜ್ಯ ಪ್ರವಾಸ ಮಂಗಳವಾರ ಆರಂಭವಾಗಲಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ.

Advertisement

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಅರುಣ್‌ ಸಿಂಗ್‌ ತಂಡದ ಸದಸ್ಯರನ್ನಾಗಿ ಸೇರ್ಪಡೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಎ. 12 ಮತ್ತು ಎ. 13ರಂದು ಮೈಸೂರು ವಿಭಾಗ, ಎ. 19-ಎ. 20 ರಂದು ಬಳ್ಳಾರಿ ವಿಭಾಗ, ಎ. 21-ಎ. 22 ರಂದು ಧಾರವಾಡ ವಿಭಾಗ ಹಾಗೂ ಎ. 23-ಎ. 24ರಂದು ಬೆಂಗ ಳೂರು ನಗರ ವಿಭಾಗದಲ್ಲಿ ಪ್ರವಾಸ ಮಾಡಲಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ 150 ಸ್ಥಾನ ಸಿಗಲು ರಾಜ್ಯ ಪ್ರವಾಸ ಕೈಗೊಳ್ಳುವ ಬಗ್ಗೆ ಯಡಿಯೂರಪ್ಪ ಆಗಾಗ ಹೇಳುತ್ತ ಬಂದಿದ್ದರು. ಆದರೆ ಅವರ ಪ್ರತ್ಯೇಕ ಪ್ರವಾಸಕ್ಕೆ ಅವಕಾಶ ಕಲ್ಪಿಸದೆ, ಈಗ ಪ್ರವಾಸ ತಂಡ ರಚಿಸಿ ದ್ದರೂ ಅವರ ನೇತೃತ್ವವನ್ನು ಕೈಬಿಟ್ಟಿ ರುವುದು ಅಸಮಾಧಾನ ಮೂಡಿಸಿದೆ.

ಯಾರು ಇರಲಿದ್ದಾರೆ?
ಅರುಣ್‌ ಸಿಂಗ್‌ ನೇತೃತ್ವದ ತಂಡದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಆರ್‌. ಅಶೋಕ್‌, ಸಿ.ಟಿ. ರವಿ, ಮಾಲಿಕಯ್ಯ ಗುತ್ತೇದಾರ, ಎನ್‌. ಶಂಕರಪ್ಪ ಹಾಗೂ ಎಂ.ಬಿ. ನಂದೀಶ್‌ ಇರಲಿದ್ದಾರೆ.

Advertisement

ಸಿಎಂ ಬೊಮ್ಮಾಯಿ ನೇತೃತ್ವದ ಮತ್ತೊಂದು ತಂಡದಲ್ಲಿ ಡಿ.ವಿ. ಸದಾನಂದ ಗೌಡ, ಪ್ರಹ್ಲಾದ ಜೋಷಿ, ಡಾ| ಅಶ್ವತ್ಥನಾರಾಯಣ, ಬಿ. ಶ್ರೀರಾಮುಲು, ನಿರ್ಮಲಕುಮಾರ್‌ ಸುರಾನಾ, ಬಿ.ವೈ. ವಿಜಯೇಂದ್ರ, ಲಕ್ಷ್ಮಣ ಸವದಿ, ನಯನಾ ಗಣೇಶ್‌ ಇರಲಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ನೇತೃತ್ವದಲ್ಲಿ ಇನ್ನೊಂದು ತಂಡ ಸಂಚರಿಸಲಿದೆ.

ಈ ತಂಡಗಳು ರಾಜ್ಯ ಹಾಗೂ ಕೇಂದ್ರ ಸರಕಾರದ ಸಾಧನೆಗಳು, ಬಜೆಟ್‌ನಲ್ಲಿ ಘೋಷಿಸಿರುವ ಜನಪರ ಯೋಜನೆಗಳ ಕುರಿತು ಸ್ಥಳೀಯ ಮಟ್ಟದಲ್ಲಿ ಸಭೆ, ಸಮಾರಂಭಗಳನ್ನು ನಡೆಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next