ಕುಣಿಗಲ್: ಎಸ್.ಎಫ್.ಸಿ ವಿಶೇಷ ಅನುದಾನ ಹಂಚಿಕೆಯಲ್ಲಿ ಬಿಜೆಪಿ ಸದಸ್ಯರು ಪ್ರತಿನಿಧಿಸುವ ವಾರ್ಡುಗಳಿಗೆ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿ, ಆಡಳಿತದ ವಿರುದ್ದ ಧಿಕ್ಕಾರ ಕೂಗಿದ ಪ್ರಸಂಗ ಪುರಸಭಾ ಸಾಮಾನ್ಯ ಸಭೆಯಲ್ಲಿ ಸೋಮವಾರ ನಡೆಯಿತು.
ಪುರಸಭಾ ಅಧ್ಯಯ ರಂಗಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಸಂಗ ಜರುಗಿತು. ಸಭೆ ಪ್ರಾರಂಭವಾಗುತ್ತಿದ್ದಂತೆ ಪುರಸಭೆಯ ಬಿಜೆಪಿ ಸದಸ್ಯ ಕೃಷ್ಣ ಮಾತನಾಡಿ, ಎಸ್ ಎಫ್ ಸಿಯ 6 ಕೋಟಿ ವಿಶೇಷ ಅನುದಾನದಲ್ಲಿ ಕಾಂಗ್ರೆಸ್ ಸದಸ್ಯರ ಕಾಂಗ್ರೆಸ್ ಸದಸ್ಯರ ವಾರ್ಡ್ ಗಳಿಗೆ 23 ಲಕ್ಷ, 85 ಲಕ್ಷ, 20 ಲಕ್ಷ, 20 ಲಕ್ಷ, 24 ಲಕ್ಷ ಹೀಗೆಲ್ಲಾ ಹಂಚಿಕೆ ಮಾಡಿದ್ದಾರೆ. ಆದರೆ ಬಿಜೆಪಿ ಸದಸ್ಯ ವಾರ್ಡ್ ಗಳಿಗೆ ಕಡಿಮೆ ಅನುದಾನ ನೀಡಿ ತಾರತಮ್ಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾರತಮ್ಯ ಸರಿಪಡಿಸುವವರೆಗೂ ಸಭೆ ನಡೆಯಲು ಬಿಡುವುದಿಲ್ಲ ಎಂದು ಅಧ್ಯಕ್ಷರ ವೇದಿಕೆಯ ಮುಂಭಾಗ ಕುಳಿತು ಧರಣಿ ನಡೆಸಿ,ಪುರಸಭೆ ಕಾಂಗ್ರೆಸ್ ಸರ್ಕಾರವಾಗಿ ಪರಿವರ್ತನೆಗೊಂಡಿದೆ ಎಂದು ವಿಪಕ್ಷದ ಸದಸ್ಯರು ವಾಗ್ದಾಳಿ ನಡೆಸಿದರು.
ಅಧ್ಯಕ್ಷ ರಂಗಸ್ವಾಮಿ ಕ್ರೀಯಾ ಯೋಜನೆ ಅಡಿಯಲ್ಲಿ ಎಲ್ಲೋ ಒಂದು ಕಡೆ ತಪ್ಪಾಗಿ ಕೈ ಬಿಡಲಾಗಿದೆ ಬೇರೆ ಅನುದಾನದಲ್ಲಿ ಹಣ ಹಾಕಿ ಕೊಟ್ಟು ಹಾಗಿರುವ ತಾರತಮ್ಯವನ್ನು ಸರಿಪಡಿಸುವುದ್ದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಕೈ ಬಿಟ್ಟರು.
ಈ ಸಂದರ್ಭದಲ್ಲಿ ಸದಸ್ಯರಾದ ಕೋಟೆ ನಾಗಣ್ಣ, ಆನಂದ್ ಕುಮಾರ್, ಜಯಮ್ಮ, ಗೋಪಿ ಅರಸ್, ವೆಂಕಟೇಶ್, ಸಾಥ್ ನೀಡಿದರು.