ಕಾರ್ಯಕರ್ತರನ್ನು ಹೊಂದಿದ್ದು, ಪಕ್ಷ ನಿರ್ಧಾರ ಮಾಡಿದ ಅಭ್ಯರ್ಥಿಯ ಗೆಲುವಿಗೆ ಸದಾ ಕೊಡುಗೆ ನೀಡುತ್ತಾ ಬಂದಿದ್ದಾರೆ. ಕಾಂಗ್ರೆಸ್ ಮುಕ್ತ ಆಡಳಿತಕ್ಕೆ ಬಿಜೆಪಿ ಒಂದೇ ಹೆಜ್ಜೆ ಹಿಂದಿದ್ದು ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೇರುವ ಮೂಲಕ ಅದನ್ನೂ ಮಾಡಲಿದೆ. ಮತದಾರರು ಈ ಬಾರಿ ಬಿಜೆಪಿಗೆ ಮತ ನೀಡುವ ಮೂಲಕ ಅಧಿಕಾರಕ್ಕೇರಲು ಶಕ್ತಿ ತುಂಬಬೇಕು ಎಂದರು.
Advertisement
ಈ ಹಿಂದೆ ಯಡಿಯೂರಪ್ಪ ಸರಕಾರ ರೈತಪರ ಯೋಜನೆ ಜಾರಿಗೆ ತರುವ ಮೂಲಕ ಅವರ ಬೆಳೆಗಳಿಗೆ ಉತ್ತಮ ಬೆಲೆ ಸಿಗುವಂತೆ ಮಾಡುವಲ್ಲಿ ಶ್ರಮಿಸಿದ್ದರು. ನಗರ ಹಾಗೂ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಅನುದಾನ ಒದಗಿಸಿ ಮಹಾ ನಗರ ಪಾಲಿಕೆ, ಪಂಚಾಯತ್ ಪ್ರದೇಶಗಳಲ್ಲಿ ರಸ್ತೆ, ನೀರು ಸೌಲಭ್ಯ ಒದಗಿಸಿದ ಕೀರ್ತಿ ಬಿಜೆಪಿ ಸರಕಾರಕ್ಕೆ ಸಲ್ಲುತ್ತದೆ ಎಂದರು. ಮುಖಂಡರಾದ ಕಾರ್ಪೊರೇಟರ್ ಹರೀಶ್ ಶೆಟ್ಟಿ , ಅಶೋಕ್ ಕೃಷ್ಣಾಪುರ, ಸುಧಾಕರ ಅಡ್ಯಾರ್, ಕಿರಣ್ ಕುಮಾರ್ ಮೊದಲಾದವರಿದ್ದರು.
ಶ್ರೀ ಗಣೇಶಪುರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೆ ಸಂದರ್ಭ ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ| ವೈ. ಭರತ್ ಶೆಟ್ಟಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇರೇಬೈಲು ಶಿವಪ್ರಸಾದ ತಂತ್ರಿಗಳು ಗೌರವಿಸಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ, ಸಮಿತಿ ಸದಸ್ಯ ನಿರಂಜನ ಭಟ್, ವಿಶ್ವ ಹಿಂದೂ ಪರಿಷತ್ ಪ್ರಮುಖ ಜಿತೇಂದ್ರ, ಗಣೇಶ ಹೊಸಬೆಟ್ಟು, ಸದಾಶಿವ ಐತಾಳ, ಲೋಕೇಶ ಬೊಳ್ಳಾಜೆ, ಬಾಲಕೃಷ್ಣ ಸುವರ್ಣ, ಹೊನ್ನಯ್ಯ ಕೋಟ್ಯಾನ್ ಉಪಸ್ಥಿತರಿದ್ದರು.