Advertisement

ಬಿಜೆಪಿ ಹಣಿಯಲು ಹಾವು, ಮುಂಗೂಸಿ,ಬೆಕ್ಕು,ನಾಯಿಗಳ ವಿಪಕ್ಷ ಕೂಟ: ಶಾ

03:59 PM Apr 06, 2018 | Team Udayavani |

ಮುಂಬಯಿ : ‘ಬಿಜೆಪಿ ಎಂದೂ ಮೀಸಲಾತಿ ನೀತಿಯನ್ನು ರದ್ದು ಮಾಡುವುದಿಲ್ಲ ಮತ್ತು ಹಾಗೆ ಮಾಡಲು ಯಾರನ್ನೂ ಬಿಡುವುದಿಲ್ಲ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಇಂದಿಲ್ಲಿ ರಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

Advertisement

ಎಸ್‌ಸಿ/ಎಸ್‌ಟಿ ಕಾಯಿದೆಯನ್ನು ದುರ್ಬಲಗೊಳಿಸಿರುವ ಸುಪ್ರೀಂ ಕೋರ್ಟ್‌ ಆದೇಶದ ವಿರುದ್ಧ 10 ಬಲಿ ಪಡೆದ ಭಾರತ್‌ ಬಂದ್‌ ಮೂಲಕ ದೇಶಾದ್ಯಂತ ವ್ಯಕ್ತವಾದ ಹಿಂಸಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅಮಿತ್‌ ಶಾ ಈ ಮಾತುಗಳನ್ನು ಆಡಿದರು. 

ಮುಂದಿನ ವರ್ಷ ಲೋಕಸಭಾ ಚುನಾವಣೆಯಲ್ಲಿ  ಬಿಜೆಪಿಯನ್ನು ಹಣಿಯಲು ವಿರೋಧ ಪಕ್ಷಗಳು ನಡೆಸುತ್ತಿರುವ ಮೈತ್ರಿಕೂಟ ರಚನೆಯ ಯತ್ನವನ್ನು ಟೀಕಿಸಿದ ಅಮಿತ್‌ ಶಾ, ”ಅಂತಹದ್ದೊಂದು ಕೂಟವು ಪರಸ್ಪರ ಬದ್ಧ ವೈರಿಗಳಾಗಿರುವ ಹಾವು, ಮುಂಗೂಸಿ, ನಾಯಿ ಮತ್ತು ಬೆಕ್ಕುಗಳನ್ನು ಒಳಗೊಂಡಿರುತ್ತದೆ” ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next