ಮೈಸೂರು: ಹಲವು ದಿನಗಳಿಂದ ಕುತೂಹಲ ಕೆರಳಿಸಿದ್ದ ಮೈಸೂರು ಮೇಯರ್ ಚುನಾವಣೆ ಕೊನೆಗೂ ನಡೆದಿದೆ. ರಾಜಕೀಯ ಜಿದ್ದಾಜಿದ್ದಿನ ಬಳಿಕ ಮೈಸೂರು ಮೇಯರ್, ಉಪ ಮೇಯರ್ ಎರಡೂ ಸ್ಥಾನವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಡಿದೆ.
ಮೇಯರ್ ಚುನಾವಣೆಯಲ್ಲಿ 47 ನೇ ವಾರ್ಡ್ ಸದಸ್ಯ ಬಿಜೆಪಿಯ ಶಿವಕುಮಾರ್ ಆಯ್ಕೆಯಾದರು. ವಾರ್ಡ್ ನಂಬರ್ 53 ರ ಬಿಜೆಪಿ ಸದಸ್ಯೆ ರೂಪ ಉಪ ಮೇಯರ್ ಆಗಿ ಆಯ್ಕೆಯಾದರು.
ಮೊದಲು ಉಪ ಮೇಯರ್ ಆಗಿ ಜೆಡಿಎಸ್ ನ ರೇಷ್ಮಾ ಬಾನು ಆಯ್ಕೆ ಎಂದು ಹೇಳಲಾಗಿತ್ತು, ಆದರೆ ಪಾಲಿಕೆ ಮೇಯರ್ ಚುನಾವಣೆ ಕೊನೆ ಕ್ಷಣದಲ್ಲಿ ಬದಲಾವಣೆಯಾಗಿದೆ. ಉಪ ಮೇಯರ್ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ ರೇಷ್ಮಾಬಾನು ಅವರ ದಾಖಲೆ ವ್ಯತ್ಯಾಸ ಹಿನ್ನೆಲೆ ವಾರ್ಡ್ ನಂಬರ್ 53 ರ ಬಿಜೆಪಿ ಸದಸ್ಯೆ ರೂಪ ಉಪ ಮೇಯರ್ ಆಗಿ ಆಯ್ಕೆಯಾದರು.
ಇದನ್ನೂ ಓದಿ:ದೆಹಲಿ ಅಬಕಾರಿ ನೀತಿ ಹಗರಣ: ಸಿಸೋಡಿಯಾ ನಿವಾಸ ಹೊರತುಪಡಿಸಿ 30 ಸ್ಥಳಗಳಲ್ಲಿ ಇ.ಡಿ ದಾಳಿ
ಇಂದು ಬೆಳಗ್ಗೆ ಮಹಾನಗರ ಪಾಲಿಕೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಎರಡನೇ ಬಾರಿಯೂ ಬಿಜೆಪಿಯವರೇ ಮೇಯರ್ ಆಗಿ ಆಯ್ಕೆಯಾಗಿದ್ದು, ಕಾಂಗ್ರೆಸ್ ತಂತ್ರಗಾರಿಕೆಗೆ ಫಲ ಸಿಗಲಿಲ್ಲ.