ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಸೊಂಡೇಕೊಪ್ಪ ಗ್ರಾಪಂಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಒಂದು ಮತದ ಮುನ್ನಡೆಯೊಂದಿಗೆ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ಸೊಂಡೇಕೊಪ್ಪ ಗ್ರಾಪಂ ಅಧ್ಯಕ್ಷರಾಗಿ ಬಿಎಸ್‌ಲಕ್ಷ್ಮೀನರಸಮ್ಮ, ಉಪಾಧ್ಯಕ್ಷರಾಗಿ ಎಚ್.ನಾಗರಾಜಯ್ಯ ಆಯ್ಕೆಯಾದರು.
ಕೈಕೊಟ್ಟ ನಾಲ್ಕು ಸದಸ್ಯರು: 21 ಸ್ಥಾನವಿರುವ ಗ್ರಾಪಂನಲ್ಲಿ ಶಾಸಕ ಎಸ್. ಆರ್ ವಿಶ್ವನಾಥ್ ಬೆಂಬಲದೊಂದಿಗೆ ಬಿಜೆಪಿ 15 ಸದಸ್ಯ ಬಲವಿತ್ತು. ಕೊನೆ ಕ್ಷಣದ ಕೆಲವು ಬದಲವಣೆಗಳಿಂದನಾಲ್ಕು ಜನ ಸದಸ್ಯರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಕೈಕೊಟ್ಟಿದ್ದು, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಬಿಜೆಪಿ ಅಭ್ಯರ್ಥಿಗಳ ಒಂದು ಮತದೊಂದಿಗೆ ಜಯ ಗಳಿಸುವಂತಾಯಿತು.
ಅಭಿನಂದನೆ: ಒಂದು ಮತದೊಂದಿಗೆ ಜಯಗೊಳಿಸಿದ ಸುದ್ದಿ ಕೇಳುತ್ತಿದ್ದಂತೆಬಿಜೆಪಿ ಕಾರ್ಯಕರ್ತರು, ಮುಖಂಡರು ಪಟಾಕಿ ಸಿಡಿಸಿ, ಸಹಿ ಹಂಚಿ ಸಂಭ್ರಮಿಸಿದರು. ಸದಸ್ಯರಾದ ನಾಗರಾಜು, ಎಚ್.ಆರ್ ವೆಂಕಟೇಶ್,ಚೈತ್ರಾ,ದಾಕ್ಷಾಯಣಿ, ಮುನಿಲಕ್ಷಮ್ಮ, ಸುಜಾತಾ, ಜಗದೀಶ್, ಶೀಲಾ.ಕೆ. ಚಂದ್ರಯ್ಯ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಪೊಲೀಸರ ಭದ್ರತೆ: ಸೊಂಡೆಕೊಪ್ಪ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ವೇಳೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸತ್ಯನಾರಾಯಣ್ ಭದ್ರತೆ ವಹಿಸಿದ್ದರು. ನೂತನ ಸದಸ್ಯರು ಪಂಚಾಯಿತಿಗೆ ಬಂದು ಚುನಾವಣೆ ಫಲಿತಾಂಶ ಘೋಷಣೆಯಾಗುವವರೆಗೂ ಬೀಡುಬಿಟ್ಟಿದ್ದರು. ಬಿಜೆಪಿ ಸದಸ್ಯರು ಗೆಲುವು ಪಡೆದ ನಂತರ ವಾಪಸ್ ತೆರಳಿದರು. ಮಾದನಾಯನಹಳ್ಳಿ ಠಾಣೆ ಪೊಲೀಸರ ನಡೆಯ ಬಗ್ಗೆ ಸಾರ್ವಜನಿಕವಾಗಿ ವಿರೋಧ ವ್ಯಕ್ತವಾಗಿದೆ.
ಬಿಜೆಪಿ ಜಿಲ್ಲಾ ಕಾರ್ಯದರ್ಶಿಎಸ್.ಎಲ್‌ರಾಜಣ್ಣ, ಉಪಾಧ್ಯಕ್ಷ ಎಸ್.ಎನ್.ಶಶಿಧರ್, ಭೂನ್ಯಾಯಮಂಡಳಿಸದಸ್ಯ ಬಸವರಾಜು, ಮುಖಂಡವೆಂಕಟೇಶ್, ಶಂಕರ್ ಸ್ವಾಮಿ, ಎಸಿಪಿಗಣೇಶಪ್ಪ, ಮಾಜಿ ಸದಸ್ಯ ರವೀಂದ್ರ, ಮಮತಾ, ಮುನಿಶಾಮಯ್ಯ, ಪ್ರಭಾ ನಾಗೇಶ್, ರಮೇಶ್, ರಾಮಕೃಷ್ಣಪ್ಪ, ಗಂಗಾಧರಪ್ಪ, ರಾಮಣ್ಣ ಇದ್ದರು.