Advertisement
ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ಆರ್.ಆರ್.ನಗರದಲ್ಲಿ ಒಳ್ಳೆಯ ಸ್ಪರ್ಧೆ ನೀಡುತ್ತೇವೆ ಎಂದು ಕೊಂಡಿದ್ದೆವು. ಆದರೆ ಜನರ ತೀರ್ಪನ್ನು ನಾವು ಒಪ್ಪಿಕೊಂಡಿದ್ದೇವೆ ಎಂದರು.
Related Articles
Advertisement
ಇದನ್ನೂ ಓದಿ:ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗುತ್ತಿದೆ ಎನ್ನಲು ಇಂದಿನ ಫಲಿತಾಂಶ ನಿದರ್ಶನ: ಬಿ.ಸಿ.ಪಾಟೀಲ್
ಆರ್ ಆರ್ ನಗರದಲ್ಲಿ ಜೆಡಿಎಸ್ ಬಿಜೆಪಿ ಹೊಂದಾಣಿಕೆ ಮಾಡಿಕೊಂಡ ರೀತಿ ಕಾಣಿಸುತ್ತದೆ. ಜೆಡಿಎಸ್ ನವರು ದುರ್ಬಲ ಅಭ್ಯರ್ಥಿಯನ್ನು ಬೇಕೆಂದೆ ಹಾಕಿದ್ದಾರೆ ಎಂದರು.
ಯಡಿಯೂರಪ್ಪ ಬದಲಾವಣೆ: ಉಪಚುನಾವಣೆ ಬಳಿಕ ಬಿಎಸ್ ವೈ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ತುತ್ತಾರೆ ಎಂದು ಮತ್ತೊಮ್ಮೆ ಪ್ರತಿಪಾದಿಸಿದ ಅವರು, ನಾನು ಈಗಲೂ ಹಾಗೆ ಹೇಳ್ತಿನೆ. ನನಗೆ ಈಗಲೂ ಮಾಹಿತಿ ಇದೆ. ಚುನಾವಣೆ ಬಳಿಕ ಯಡಿಯೂರಪ್ಪನವರನ್ನು ಬದಲಾವಣೆ ಮಾಡುತ್ತಾರೆ ಎಂದರು.
ಸಂಸದ ಪ್ರತಾಪ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಾನು ಪ್ರತಾಪ ಸಿಂಹನಿಗೆ ಪ್ರತಿಕ್ರಿಯೆ ನೀಡಲ್ಲ. ಪ್ರತಾಪ ಸಿಂಹಗೆ ಇನ್ನು ರಾಜಕೀಯ ಪ್ರೌಢಿಮೆ ಇಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ: ಆರ್.ಆರ್.ನಗರ ಕುರುಕ್ಷೇತ್ರದಲ್ಲಿ ಮುನಿರತ್ನನೇ ಕಿಂಗ್: ಎದುರಾಳಿ ಕುಸುಮಾ ಎದುರು ಭರ್ಜರಿ ಜಯ
ಉಪ ಚುನಾವಣೆಯ ಸೋಲಿನ ಹೊಣೆ ಡಿಕೆಶಿವಕುಮಾರ್ ಯಾಕೆ ಹೊರಬೇಕು. ಯಾರು ಅಧ್ಯಕ್ಷರಾದರೂ ಅಷ್ಟೆ. ಇದು ಬೈ ಎಲೆಕ್ಷನ್. 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲತ್ತೇವೆ ಎಂದು ಹೇಳಿದರು.
ಬಿಹಾರ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು, ಬೆಳಗ್ಗೆ ಮಹಾಘಟಬಂಧನ ಮುನ್ನಡೆಯಲ್ಲಿತ್ತು. ಕ್ರಮೇಣ ಬಿಜೆಪಿ ಮುನ್ನಡೆ ಸಾಧಿಸಿದೆ. ಇನ್ನೂ ಮತ ಏಣಿಕೆ ನಡೆಯುತ್ತಿದೆ. ಅಂತಿಮವಾಗಿ ಏನಾಗುತ್ತದೆಯೋ ನೋಡಬೇಕು ಎಂದರು.
ಎಲ್ಲಾ ಸಮೀಕ್ಷೆಗಳು ಮಹಾಘಟಬಂಧನ ಗೆಲ್ಲುತ್ತೆ ಎಂದಿತ್ತು. ಇದರ ಬಗ್ಗೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. 40 ಸ್ಥಾನ ಲೀಡ್ ಇದ್ದಿದ್ದು, ಇದ್ದಕ್ಕಿದ್ದಂತೆ ಎನ್ ಡಿಎ ಲೀಡ್ ಬಂದಿದೆ. ಹೀಗಾಗಿ ಅನುಮಾನ ಬರಲ್ವಾ? ಇವಿಎಂ ಮಶೀನ್ ಬಗ್ಗೆ ಏನು ಗೊತ್ತಿಲ್ಲ. ಕಾಂಗ್ರೆಸ್, ಉಳಿದ ಪಕ್ಷಗಳ ನಾಯಕರು ಆ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದರು.