Advertisement
ವೋಟಿಂಗ್ ಸ್ವರೂಪ “ಧ್ರುವೀಕರಣ’ವಲ್ಲ: ಉತ್ತರ ಪ್ರದೇಶ ಚುನಾವಣೆಯು ಹಿಂದೂ ವರ್ಸಸ್ ಮುಸ್ಲಿಂ ಚುನಾವಣೆಯಲ್ಲ. ಇಲ್ಲಿ ಮುಸ್ಲಿಮರು, ಹಿಂದೂಗಳು ಅಥವಾ ಯಾದವರು ಎಂಬ ಪ್ರಶ್ನೆಯೇ ಬರುವುದಿಲ್ಲ ಎಂದೂ ಶಾ ಸ್ಪಷ್ಟಪಡಿಸಿದ್ದಾರೆ. ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್ ಅವರ “80-20′ ಹೇಳಿಕೆ ಕುರಿತ ಪ್ರಶ್ನೆಗೆ ಶಾ ಈ ರೀತಿ ಉತ್ತರಿಸಿದ್ದಾರೆ. ಇದೇ ವೇಳೆ, ಯುಪಿಯಲ್ಲಿ ಧ್ರುವೀ ಕರಣ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ, “ಖಂಡಿತಾ ನಡೆಯುತ್ತಿದೆ. ಬಡವರು ಮತ್ತು ರೈತರು ಧ್ರುವೀ ಕರಣಗೊಂಡಿದ್ದಾರೆ. ಬಹುತೇಕ ರೈತರು ಕಿಸಾನ್ ಕಲ್ಯಾಣ್ ನಿಧಿಯೋಜನೆಯಿಂದ ಹಣ ಪಡೆಯುತ್ತಿದ್ದಾರೆ. ಹೀಗಾಗಿ ನನಗೆ ಧ್ರುವೀಕರಣ ಸ್ಪಷ್ಟವಾಗಿ ಗೋಚರಿಸುತ್ತಿದೆ’ ಎಂದಿದ್ದಾರೆ. ಜತೆಗೆ, ಓಟಿಂಗ್ ಸ್ವರೂಪವನ್ನು ಧ್ರುವೀ ಕರಣ ಎಂದು ಬಣ್ಣಿಸಲಾಗದು ಎಂದೂ ಹೇಳಿದ್ದಾರೆ.
“ಪ್ರಧಾನಿ ಮೋದಿ ನೇತೃತ್ವದ ಸರಕಾರದ ಕಾಶ್ಮೀರ ಸಂಬಂಧ ನೀತಿಗಳು ಪಾಕಿಸ್ಥಾನ ಮತ್ತು ಚೀನವನ್ನು ಮತ್ತಷ್ಟು ಹತ್ತಿರವಾಗಿಸಿದವು’ ಎಂದು ಸಂಸತ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಗೂ ಸಂದರ್ಶನದಲ್ಲಿ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರಿಗೆ ದೇಶದ ಇತಿಹಾಸ ಗೊತ್ತಿಲ್ಲ. ಹೀಗಿರುವಾಗ ಅವರು ಸಂಸತ್‌ನಲ್ಲಿ ಹೇಳಿಕೆಯನ್ನೇ ನೀಡಬಾರದಿತ್ತು. 1962ರಲ್ಲಿ ಏನಾಗಿತ್ತು, ಯಾರಿಂದ ಆಗಿತ್ತು ಎಂಬುದೂ ಅವರಿಗೆ ಗೊತ್ತಿಲ್ಲ. ಚೀನ ಹಾಕಿದ ಪ್ರತಿಯೊಂದು ಸವಾಲಿಗೂ ನರೇಂದ್ರ ಮೋದಿ ಸರಕಾರ ತಕ್ಕ ಪ್ರತ್ಯುತ್ತರ ನೀಡಿದೆ ಎಂದಿದ್ದಾರೆ ಶಾ. ಜತೆಗೆ ಸಂಸತ್‌ನಲ್ಲಿ ಇಷ್ಟೆಲ್ಲ ಮಾತನಾಡಿರುವ ರಾಹುಲ್ ಗಾಂಧಿ ಅವರು, ಶಿಷ್ಟಾಚಾರವನ್ನೇ ಉಲ್ಲಂ ಸಿ ಚೀನದ ನಿಯೋಗವನ್ನು ಭೇಟಿಯಾಗಿ ದ್ದೇಕೆ? ಅವರೊಂದಿಗೆ ಏನನ್ನು ಚರ್ಚೆ ಮಾಡಿದಿರಿ ಎಂದೂ ಶಾ ಪ್ರಶ್ನಿಸಿದ್ದಾರೆ.