Advertisement
ಟೈಮ್ಸ್ ನೌ ಸುದ್ದಿವಾಹಿನಿ ನಡೆಸಿದ ಸಮೀಕ್ಷೆಯಲ್ಲಿ ಈ ಫಲಿತಾಂಶ ಬಂದಿದೆ. ಕಳೆದ ಬಾರಿಯ ಚುನಾವಣೆಯಲ್ಲಿ 47 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ, 2017ರ ಚುನಾವಣೆಯಲ್ಲಿ 202 ಸೀಟುಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಪಕ್ಷದ ಜನಪ್ರಿಯತೆ + 155 ಹೆಚ್ಚಿದ್ದು, ಆಡಳಿತರೂಢ ಎಸ್ಪಿ ತೀವ್ರ ಕುಸಿತ ಕಂಡಿದೆ. ಎಸ್ಪಿ- ಕಾಂಗ್ರೆಸ್ ಈಗ 252 ಸ್ಥಾನಗಳನ್ನು ಹೊಂದಿದ್ದರೂ, ಸರ್ವೆ ಪ್ರಕಾರ ಮಹಾಮೈತ್ರಿಗೆ ಒಲಿಯುವ ಒಟ್ಟು ಸ್ಥಾನಗಳು 147! ಮೈತ್ರಿಯ ಜನಪ್ರಿಯತೆ -105ಕ್ಕೆ ಕುಸಿದಿದ್ದು, ಬಿಎಸ್ಪಿಯ ಜನಪ್ರಿಯತೆಯೂ -33 ಇಳಿಕೆ ಕಂಡಿದೆ. ಮೈತ್ರಿಯಿಂದಲೇ ಎಸ್ಪಿಗೆ ಹಿನ್ನೆಡೆ ಆಗಲಿದೆ ಎಂಬ ಜನಾಭಿಪ್ರಾಯ ಮೂಡಿದೆ.
ಎಬಿಪಿ ಸುದ್ದಿವಾಹಿನಿಯೂ ಉತ್ತರ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದ್ದು, ಅತಂತ್ರ ಫಲಿತಾಂಶದ ಭವಿಷ್ಯ ಹೊರಹಾಕಿದೆ. ಬಿಜೆಪಿ ಇಲ್ಲಿ ಹಿನ್ನಡೆ ಅನುಭವಿಸಿದ್ದು, 118- 128 ಸ್ಥಾನಗಳಷ್ಟೇ ಪಡೆಯಲಿದೆ ಎಂದು ಹೇಳಿದೆ. ಕಾಂಗ್ರೆಸ್- ಎಸ್ಪಿ ಮೈತ್ರಿಗೆ ಮತದಾರ ಜೈ ಎಂದಿದ್ದು 187- 197 ಸ್ಥಾನಗಳನ್ನು ಪಡೆಯಬಹುದು. ಬಿಎಸ್ಪಿ- 76- 86 ಸೀಟುಗಳಿಗೆ ತೃಪ್ತಿ ಪಡೆಯಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.
Related Articles
Advertisement
ಫೆ.4ರಿಂದ ಮಾ.8ರ ವರೆಗೆ ಸಮೀಕ್ಷೆ ಇಲ್ಲಫೆಬ್ರವರಿ 4ರಿಂದ ಮಾರ್ಚ್ 8ರ ವರೆಗೆ ಚುನಾವಣಾ ಸಮೀಕ್ಷೆ ನಡೆಸದಂತೆ ಮಾಧ್ಯಮಗಳಿಗೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ. 126 ಎ ಕಲಂ ಅಡಿಯಲ್ಲಿ ಯಾವುದೇ ಮಾಧ್ಯಮ ಈ ಅವಧಿಯಲ್ಲಿ ಚುನಾವಣಾ ಸಮೀಕ್ಷೆ ನಡೆಸಬಾರದು. ಚುನಾವಣಾ ಪ್ರದೇಶ ಸೇರಿದಂತೆ ದೇಶದ ಯಾವುದೇ ಭಾಗದಿಂದಲೂ ಮಾಧ್ಯಮಗಳು ಸರ್ವೆಗೆ ಮುಂದಾಗಬಾರದು ಎಂದು ಆದೇಶ ಹೊರಡಿಸಿದೆ. ಸರ್ವೆ ಸಾರಾಂಶ
1. ಯಾರಿಗೆ ಎಷ್ಟು?
ಬಿಜೆಪಿ- 202
ಎಸ್ಪಿ- ಕಾಂಗ್ರೆಸ್ 147
ಬಿಎಸ್ಪಿ- 47
ಇತರೆ- 7
ಒಟ್ಟು – 403 2. ಮತಗಳ ಹಂಚಿಕೆ
ಬಿಜೆಪಿ- ಶೇ.34
ಎಸ್ಪಿ- ಕೈ ಮೈತ್ರಿ- ಶೇ. 31
ಬಿಎಸ್ಪಿ- ಶೇ.24 3. ಸಿಎಂ ಯಾರಾಗ್ಬೇಕು?
ಅಖೀಲೇಶ್ ಯಾದವ್- ಶೇ.39
ಮಾಯಾವತಿ- ಶೇ.23
ಯೋಗಿ ಆದಿತ್ಯನಾಥ್- ಶೇ.19
ಮುಲಾಯಂ ಸಿಂಗ್ ಯಾದವ್- ಶೇ.1
ಶೀಲಾ ದೀಕ್ಷಿತ್- ಶೇ.2 4. ಅಪನಗದೀಕರಣದಿಂದ ದೇಶಕ್ಕೆ ಒಳಿತಾಗಿದೆಯೇ?
ಹೌದು- 63.4
ಇಲ್ಲ- 31.9
ಗೊತ್ತಿಲ್ಲ- 4.7