Advertisement

150 ಸ್ಥಾನ ಗೆದ್ದು ಬಿಜೆಪಿ ಅಧಿಕಾರಕ್ಕೆ

05:36 PM May 31, 2022 | Team Udayavani |

ಸಂಡೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರುವುದು. ಸಮಾವೇಶದ ನೆನಪಿಗಾಗಿ ಖಡ್ಗವನ್ನು ನೀಡಿದ್ದಾರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಎನ್ನುವ ಹೈದರಾಲಿಯನ್ನು ಮದಕರಿ ನಾಯಕರ ಖಡ್ಗದಿಂದ ಎದುರಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ನುಡಿದರು.

Advertisement

ಅವರು ತಾಲೂಕಿನ ತೋರಣಗಲ್ಲಿನಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟನೆ ನೆರವೇರಿಸಿ ಮಾತನಾಡಿ, ದೀನದಯಾಳ ಉಪಾಧ್ಯಾಯ ಅವರ ಆಶಯದಂತೆ ಅಂತ್ಯೋದಯ ಪರಿಕಲ್ಪನೆಯಡಿಯಲ್ಲಿ ದೇಶದ ಕಟ್ಟಕಡೆ ವ್ಯಕ್ತಿಗೂ ಸರಕಾರದ ಸೌಲಭ್ಯಗಳು ದೊರಕಬೇಕು ಎಂಬ ಆಶಯದಂತೆ ಸ್ವಾಭಿಮಾನಪೂರಿತವಾದ ಬದುಕಿನ ಮುಖಾಂತರ ಸ್ವಾಭಿಮಾನ ಪೂರಕ ಸಮಾಜ ನಿರ್ಮಾಣವಾಗಬೇಕು. ಕಲ್ಯಾಣ ರಾಜ್ಯವಾಗಬೇಕು, ಕಲ್ಯಾಣ ಕರ್ನಾಟಕವಾಗಬೇಕು. ಸಮೃದ್ಧ ಭಾರತವಾಗಬೇಕು. ಇಂದಿರಾಗಾಂಧಿ ಕಾಲಘಟ್ಟದಲ್ಲಿ ಕಾಂಗ್ರೆಸ್‌ ಲೈಟ್‌ ಕಂಬವನ್ನು ಚುನಾವಣೆಗೆ ನಿಲ್ಲಿಸಿದರೂ ಕಾಂಗ್ರೆಸ್‌ ಗೆಲ್ಲುತ್ತಿತ್ತು ಎಂಬ ಮಾತಿತ್ತು. ಆದರೆ ಇಂದು ಸೋನಿಯಾ ಗಾಂಧಿ ಚುನಾವಣೆಗೆ ನಿಂತರೂ ಗೆಲ್ಲುವುದು ಕಷ್ಟವಿದೆ. ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್‌, ರಾಮನಿಗೆ ಅವಮಾನ ಮಾಡಿದ್ದು ಕಾಂಗ್ರೆಸ್‌. ಒಡೆದು ಆಳುವ ನೀತಿಯಿಂದ ಅವನತಿಯ ಅಂಚಿನಲ್ಲಿರುವುದು ಕಾಂಗ್ರೆಸ್‌. ದಲಿತರ ವಿಷಯವನ್ನು ಮುಂದಿಟ್ಟು ಕಣ್ಣೀರಿಡುವ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ಪರಮೇಶ್ವರನಾಯ್ಕ ಅವರನ್ನು ಚುನಾವಣೆಯಲ್ಲಿ ಸೋಲುವಂತೆ ನೋಡಿಕೊಂಡು ದಲಿತ ಮುಖಂಡರು ಮುಖ್ಯಮಂತ್ರಿ ಆಗದಂತೆ ನೋಡಿಕೊಂಡರು. ಹಾಗಾಗಿ ದಲಿತರ ಮೊದಲ ವಿರೋಧಿ ಸಿದ್ದರಾಮಯ್ಯ. ಮುಂದಿನ ಮುಖ್ಯಮಂತ್ರಿ ನಾನೇ ಎಂದು ಕನಸು ಕಾಣುವ ಸಿದ್ದರಾಮಯ್ಯನವರಿಗೆ ಅಧಿಕಾರವಿಲ್ಲದೆ ಮತಿ ಭ್ರಮಣೆಯಾಗಿದೆ. ಹಾಗಾಗಿ ಆರ್‌ಎಸ್‌ಎಸ್‌ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ರಾಜಕೀಯ ಪಾಠ ಮಾಡಿದ ದೇವೇಗೌಡರನ್ನು ಅವಮಾನ ಮಾಡಿದ ಸಿದ್ದರಾಮಯ್ಯನವರಿಗೆ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಿದ್ದರಾಮಯ್ಯನವರು ಕಾಂಗ್ರೆಸ್ಸಿಗೆ ಹೋದಾಗಿನಿಂದ ಕಾಂಗ್ರೆಸ್‌ ಮುಕ್ತ ಕರ್ನಾಟಕವಾಗಿದೆ. ಸಿದ್ದರಾಮಯ್ಯನವರು ಕಾಂಗ್ರೆಸನ್ನು ಮುಗಿಸಿಯೇ ಮನೆಗೆ ಹೋಗುತ್ತಾರೆ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಕಾಂಗ್ರೆಸ್‌ ನಲ್ಲಿಯೇ ಇರುವುದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್‌ ಕೂಡ ಇರುವುದಿಲ್ಲ ಎಂದರು.

ಸಂಸದ ವೈ. ದೇವೇಂದ್ರಪ್ಪ, ಸಾರಿಗೆ ಸಚಿವ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯ್ಕ, ಎಸ್‌ಟಿ ಮೋರ್ಚಾದ ರಾಷೀóಯ ಉಪಾಧ್ಯಕ್ಷ, ಮಾಜಿ ಶಾಸಕ ಗಂಗಾಧರ ನಾಯಕ್‌, ಬಿಜೆಪಿ ಜಿಲ್ಲಾಧ್ಯಕ್ಷ ಮುರಾರಿ ಗೌಡ, ಪ್ರಭಾರಿ ಸಿದ್ದೇಶ್‌ ಯಾದವ್‌, ಚಂದ್ರಶೇಖರ್‌ ಪಾಟೀಲ್‌ ಹಲಗೇರಿ, ಎಸ್ಸಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಹುಲಿಕಾರ್‌, ಬಳ್ಳಾರಿ ಜಿಲ್ಲಾ ಎಸ್ಟಿ ಮೋರ್ಚಾದ ಅಧ್ಯಕ್ಷ ಓಬಳೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next