Advertisement

ಬಿಜೆಪಿ-ಎಐಎಡಿಎಂಕೆ ಸಮರ; ಪ್ರಮುಖ ಮುಖಂಡರ ಬಂಧನ, ಬಿಡುಗಡೆ

01:15 AM Nov 07, 2020 | mahesh |

ಚೆನ್ನೈ: ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ತಮಿಳುನಾಡಿನಲ್ಲಿ “ಮಿತ್ರ’ ಪಕ್ಷಗಳ ನಡುವೆ ಯಾತ್ರೆ ಸಮರ ಏರ್ಪಟ್ಟಿದೆ.
ಪೊಲೀಸರ ಅನುಮತಿ ಇಲ್ಲದೆಯೇ ಯಾತ್ರೆ ಆರಂಭಕ್ಕೆ ಮುಂದಾದ ಬಿಜೆಪಿ ರಾಜ್ಯಾಧ್ಯಕ್ಷ ಎಲ್‌.ಮುರುಗನ್‌, ರಾಜ್ಯ ಉಸ್ತುವಾರಿ ಸಿ.ಟಿ.ರವಿ ಸೇರಿದಂತೆ 100ಕ್ಕೂ ಹೆಚ್ಚು ನಾಯಕರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಲಾಗಿದೆ.

Advertisement

ಗುರುವಾರವಷ್ಟೇ ಮದ್ರಾಸ್‌ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದ ತಮಿಳುನಾಡು ಸರಕಾರ, ಕೊರೊನಾ ಸೋಂಕು ಕಾರಣದಿಂದಾಗಿ ವೆಟ್ರಿ ವೇಲ್‌ ಯಾತ್ರೆಗೆ ಅನುಮತಿ ನೀಡಲಾಗಿಲ್ಲ ಎಂದಿತ್ತು. ಆದರೆ, ಶುಕ್ರವಾರ ಬೆಳಗ್ಗೆ ಎಲ್‌.ಮುರುಗನ್‌, ಸಿ.ಟಿ.ರವಿ ಮತ್ತು ಅಣ್ಣಾಮಲೈ ನೇತೃತ್ವದಲ್ಲಿ ತಿರುವಲ್ಲೂರು ಜಿಲ್ಲೆಯ ಥಿರುತ್ತಾನಿ ಮುರುಗನ್‌ ದೇವಾಲಯದಿಂದ ಯಾತ್ರೆ ಆರಂಭಿಸಿತು. ಚೆನ್ನೈ-ತಿರುವಲ್ಲೂರು ಗಡಿಯಲ್ಲಿ ಈ ಯಾತ್ರೆ ತಡೆದ ಪೊಲೀಸರು, ಮುರುಗನ್‌ ಮತ್ತು ಕೆಲವೇ ಮಂದಿ ಕಾರ್ಯಕರ್ತರಿಗೆ ಹೋಗಲು ಅವಕಾಶ ಮಾಡಿಕೊಟ್ಟಿದ್ದರು. ಬಳಿಕ ಅನುಮತಿ ಇಲ್ಲದಿದ್ದರೂ ಯಾತ್ರೆ ನಡೆಸಿದ ಕಾರಣಕ್ಕಾಗಿ ಬಂಧಿಸಿದರು.

ಮುರುಗನ್‌ ದೇವರನ್ನು ಪೂಜಿಸುವುದು ಅಪರಾಧವೇ? ದೇಗುಲಗಳ ನಾಡಾದ ತಮಿಳುನಾಡಿನಲ್ಲಿ ಇಂಥ ಘಟನೆಯಾಗಬಾರದಿತ್ತು. ತಮಿಳು ಜನರ ಸೇವೆ ಮುಂದುವರಿಸುತ್ತೇವೆ.
– ಸಿ.ಟಿ.ರವಿ ಬಿಜೆಪಿ ಪ್ರ. ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next