Advertisement

ಮೋದಿಗೆ ಪುನಃ ಗೆಲುವಿನ ಭರವಸೆ

06:00 AM Aug 21, 2018 | |

ನವದೆಹಲಿ: ಈಗ ಲೋಕಸಭೆಗೆ ಚುನಾವಣೆ ನಡೆಸಿದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಪುನಃ ಅಧಿಕಾರಕ್ಕೇರುವುದು ಖಚಿತ. ಆದರೆ 2014ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದಷ್ಟು ಕ್ಷೇತ್ರಗಳಲ್ಲಿ ಗೆಲ್ಲಲಾಗದು. ಇಂಡಿಯಾ ಟುಡೇ ಮೂಡ್‌ ಆಫ್ ದಿನ ನೇಶನ್‌ ಜುಲೈನಲ್ಲಿ ನಡೆಸಿದ ಸಮೀಕ್ಷೆಯನ್ನು ಬಿಡುಗಡೆ ಮಾಡಿದ್ದು, ಎನ್‌ಡಿಎ 281 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಯುಪಿಎ 122 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಇತರ ಪಕ್ಷಗಳು ಉಳಿದ 140 ಕ್ಷೇತ್ರಗಳನ್ನು ಬಾಚಿಕೊಳ್ಳಲಿವೆ ಎಂದು ಹೇಳಿದೆ.

Advertisement

ಎನ್‌ಡಿಎ ಶೇ. 36ರಷ್ಟು ಮತಗಳನ್ನು ಪಡೆಯಲಿದ್ದು, ಯುಪಿಎ ಶೇ. 31ರಷ್ಟು ಮತ ಪಡೆಯಲಿವೆ. ಎನ್‌ಡಿಎಗೆ ಶೇ. 4 ನಷ್ಟ ವಾದರೆ, ಯುಪಿಎಗೆ ಶೇ. 4ಗಳಿಕೆಯಾಗಲಿದೆ. ಸದ್ಯ ಎನ್‌ಡಿಎಯಲ್ಲಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಅನ್ನೂ ಪರಿಗಣಿಸಲಾಗಿದೆ. ಒಂದು ವೇಳೆ ಜೆಡಿಎಸ್‌ ಹಾಗೂ ಟಿಡಿಪಿ ಮತ್ತು ಪಿಡಿಪಿ ಪಕ್ಷಗಳು ಯಾವುದಾದರೂ ಮೈತ್ರಿಕೂಟಕ್ಕೆ ಸೇರಿದರೆ ಆಗ ಮೈತ್ರಿಕೂಟಗಳ ಸ್ಥಿತಿ ಬದಲಾಗುತ್ತದೆ.

ಬಿಜೆಪಿ ವರ್ಸಸ್‌ ಕಾಂಗ್ರೆಸ್‌: ಬಿಜೆಪಿ ಅತಿದೊಡ್ಡ ಪಕ್ಷವಾಗಿಯೇ ಮುಂದುವರಿ ಯಲಿದ್ದು, 245 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. 2014ರಲ್ಲಿ 282 ಕ್ಷೇತ್ರಗಳಲ್ಲಿ ಗೆದ್ದಿತ್ತು. ಇನ್ನು ಕಾಂಗ್ರೆಸ್‌ 83 ಸ್ಥಾನಗಳಲ್ಲಿ ಜಯಿಸಲಿದ್ದು, 2014ರ ಚುನಾವಣೆಗಿಂತ ಬಹುತೇಕ ದುಪ್ಪಟ್ಟಾಗಿರಲಿದೆ.

ಮೋದಿಯೇ ಪ್ರಧಾನಿ: ಪ್ರಧಾನಿಗೆ ಉತ್ತಮ ಆಯ್ಕೆ ಯಾರು ಎಂಬ ಪ್ರಶ್ನೆಗೆ ಶೇ.49ರಷ್ಟು ಜನ ಮೋದಿಯನ್ನೇ ಆಯ್ಕೆ ಮಾಡಿದ್ದಾರೆ. ಕೇವಲ ಶೇ.27ರಷ್ಟು ಜನರು ರಾಹುಲ್‌ ಗಾಂಧಿ ಆರಿಸಿದರೆ, ಶೇ. 3ರಷ್ಟು ಜನರು ಪ್ರಿಯಾಂಕಾ ಗಾಂಧಿ ಉತ್ತಮ ಅಭ್ಯರ್ಥಿ ಎಂದಿದ್ದಾರೆ. 

ಪ್ರಮುಖ ಸಮಸ್ಯೆ
34%    ನಿರುದ್ಯೋಗ 
24%    ಬೆಲೆ ಏರಿಕೆ 
18%    ಭ್ರಷ್ಟಾಚಾರ
05%   ಅಪನಗದೀಕರಣದಿಂದ ಆದಾಯ ನಷ್ಟ
05%    ಮಹಿಳಾ ಸುರಕ್ಷತೆ

Advertisement

281 ಎನ್‌ಡಿಎ 122ಯುಪಿಎ 140 ಇತರೆ 
245 ಬಿಜೆಪಿ 83 ಕಾಂಗ್ರೆಸ್‌ 215 ಇತರೆ 

Advertisement

Udayavani is now on Telegram. Click here to join our channel and stay updated with the latest news.

Next