Advertisement
ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿಮುಡಾ ಅಕ್ರಮದಲ್ಲಿ ಸಿಎಂ ಕುಟುಂಬ ಶಾಮೀಲಾಗಿದೆ. ಮುಖ್ಯಮಂತ್ರಿ ಯವರಿಂದಲೇ ಅಕ್ರಮ ಆಗಿದೆ. ಇದರ ಬಗ್ಗೆ ನಾವು ನೀವು ಜನರಿಗೆ ಮನದಟ್ಟು ಮಾಡಬೇಕಿದೆ. ಭ್ರಷ್ಟಾಚಾರದಲ್ಲಿ ತೊಡಗಿ, ಜನ ವಿರೋಧಿಯಾಗಿ ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ತಾಕತ್ತಿದ್ದರೆ ಈಗ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ.
-ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ
ಸಿಎಂ ಅವರ ಪತ್ನಿ ಅರ್ಜಿ ಸಲ್ಲಿಸಿದ ಬಳಿಕ ಮುಡಾ ಅಧ್ಯಕ್ಷ ಮತ್ತು ಆಯುಕ್ತರು 50:50 ಅನುಪಾತದಲ್ಲಿ ನಿವೇಶನ ನೀಡಿದ್ದಾರೆ. ಇದರಿಂದ ಮುಡಾಗೆ ನಷ್ಟವಾಗಿದೆ. 50:50 ಮಾಡುವುದಾದರೆ ಸರಕಾರಕ್ಕೆ ಕಳುಹಿಸಿ ಒಪ್ಪಿಗೆ ಸಿಕ್ಕಿ ಆದೇಶವಾಗಬೇಕು. ಅಕ್ರಮವಾಗಿ ಅವರೇ ಹಂಚಿಕೆ ಮಾಡಿಕೊಂಡಿದ್ದಾರೆ. ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಆಗಷ್ಟೇ ಸತ್ಯ ಹೊರಬರಲಿದೆ.
-ಆರ್. ಅಶೋಕ್, ವಿಧಾನಸಭೆ ವಿಪಕ್ಷ ನಾಯಕ ನಮಗೆ 62 ಕೋಟಿ ರೂ.
ಪರಿಹಾರ ಕೊಟ್ಟುಬಿಡಿ
ಮುಡಾ 50:50 ಅನುಪಾತದಲ್ಲಿ ನಿವೇಶನ ಹಂಚಿರು ವುದೇ ತಪ್ಪು ಎಂದಾದರೆ 62 ಕೋಟಿ ರೂ. ಪರಿಹಾರ ಕೊಟ್ಟುಬಿಡಲಿ. 50:50ರಲ್ಲಿ ನಿವೇಶನ ಹಂಚುವ ಕಾನೂನು ತಂದದ್ದೇ ಬಿಜೆಪಿಯವರು. ಅವರೇ ಅದನ್ನು ತಪ್ಪು ಎಂದು ವಿರೋಧಿಸಿದರೆ ಹೇಗೆ? ನನ್ನ ಭಾವಮೈದುನನ ಹೆಸರಲ್ಲಿದ್ದ 3.16 ಎಕರೆಯನ್ನು ನನ್ನ ಪತ್ನಿಗೆ ಉಡುಗೊರೆ ಯಾಗಿ ಕೊಟ್ಟಿದ್ದ. ಅದರಲ್ಲಿ ಮುಡಾದವರು ನಿವೇಶನ ನಿರ್ಮಿಸಿದ್ದಾರೆ. ಕಾನೂನಿನ ಪ್ರಕಾರ ಅದಕ್ಕೆ ಬದಲಿ ಜಮೀನು ಕೊಡಬೇಕಿತ್ತು, ಆ ಪ್ರಕಾರ ಕೊಟ್ಟಿದ್ದಾರೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ
Related Articles
ಮುಡಾ ಹಗರಣದ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯವರು ಸ್ಪಷ್ಟನೆ ಕೊಟ್ಟಿದ್ದಾರೆ. ಎಲ್ಲವನ್ನೂ ಸಿಬಿಐ ತನಿಖೆಗೇ ಕೊಡುವುದಾದರೆ ನಮಗಿಲ್ಲೇನು ಕೆಲಸ? ನಮ್ಮಲ್ಲಿರುವವರೂ ಪೊಲೀಸ್ ಅಧಿಕಾರಿಗಳೇ ಅಲ್ಲವೇ? ಅವರ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲವೇ?
–ಡಾ| ಜಿ. ಪರಮೇಶ್ವರ್, ಗೃಹ ಸಚಿವ
Advertisement