Advertisement

ಮಂಜೇಶ್ವರದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ : ನಳಿನ್‌ ಕುಮಾರ್‌ ಕಟೀಲು

10:58 AM Mar 31, 2021 | Team Udayavani |

ಮಂಜೇಶ್ವರ: ಮಂಜೇಶ್ವರ ಮತ್ತು ಮಂಗಳೂರು ಒಂದೇ ಸಮಯದಲ್ಲಿ ರೂಪಿತವಾದ ಪ್ರದೇಶಗಳು. ಪ್ರಸ್ತುತ ಮಂಜೇಶ್ವರಕ್ಕೂ ಮಂಗಳೂರಿಗೂ ಎಲ್ಲ ಕ್ಷೇತ್ರದಲ್ಲೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ಅವರು ಜೋಡುಕಲ್ಲಿನಲ್ಲಿರುವ ಎನ್‌ಡಿಎ ಚುನಾವಣಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಯುವಮೋರ್ಚಾದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

Advertisement

ಮಂಗಳೂರಿನಲ್ಲಿರುವ ಹೈ ಸ್ಪೆಷಾಲಿಟಿ ಆಸ್ಪತ್ರೆಗಳಾಗಲಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಉನ್ನತ ಮಟ್ಟದ ಶಾಲಾ ಕಾಲೇಜುಗಳಾಗಲಿ, ಉದ್ಯೋಗ ನೀಡುವ ಕಂಪೆನಿಗಳಾಗಲಿ ಹಾಗೂ ಮೂಲಭೂತ ಸೌಕರ್ಯಗಳಾಗಲಿ ಮಂಜೇಶ್ವರದಲ್ಲಿಲ್ಲ. 1957ರಿಂದ ಮಂಜೇಶ್ವರದಲ್ಲಿ ಕಮ್ಯೂನಿಸ್ಟ್‌ ಮತ್ತು ಕಾಂಗ್ರೆಸ್‌, ಮುಸ್ಲಿಂಲೀಗ್‌ ಆಡಳಿತ ನಡೆಸುತ್ತಾ ಬಂದಿದೆ. ಪ್ರಸ್ತುತ ಜನರು ಚಿಂತಿಸತೊಡಗಿದ್ದಾರೆ. ಅಭಿವೃದ್ಧಿ ಕಾಣದ ಮಂಜೇಶ್ವರವು ಬದಲಾಗಿ ಅಭಿವೃದ್ಧಿ ಹೊಂದಿದ ಮಂಜೇಶ್ವರದ ಬಗ್ಗೆ ಕನಸು ಕಾಣುತ್ತಿದ್ದಾರೆ ಎಂದರು.

ಆದ್ದರಿಂದ ಅಭಿವೃದ್ಧಿಗೋಸ್ಕರ ಬಿಜೆಪಿಗೆ ಮತ ನೀಡಿ, ಎನ್‌ಡಿಎ ಅಭ್ಯರ್ಥಿ ಕೆ.ಸುರೇಂದ್ರನ್‌ ಅವರನ್ನು ಗೆಲ್ಲಿಸಿ ಎಂದು ನಳಿನ್‌ಕುಮಾರ್‌ ಕಟೀಲು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಯುವಮೋರ್ಚಾ ಮಂಡಲ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ ವಹಿಸಿದ್ದರು. ಯುವಮೋರ್ಚಾ ರಾಜ್ಯಾಧ್ಯಕ್ಷ ಪ್ರಫುಲ್ಲ ಕೃಷ್ಣ , ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸುರೇಶ್‌ಕುಮಾರ್‌ ಶೆಟ್ಟಿ ಪೂಕಟ್ಟೆ, ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ ಪಟ್ಲ, ಮಂಡಲ ಚುನಾವಣಾ ಉಸ್ತುವಾರಿ ಸಂತೋಷ್‌ಕುಮಾರ್‌ ರೈ ಬೋಳಿಯಾರು ಮುಂತಾದವರು ಉಪಸ್ಥಿತರಿದ್ದರು. ಪ್ರದೀಪ್‌ ಬಂಬ್ರಾಣ ಸ್ವಾಗತಿಸಿ, ಧನರಾಜ್‌ ಸೋಂಕಾಲ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next