Advertisement
ದೇಶಾದ್ಯಂತ 1 ಕೋಟಿ ಜನರ ಅಭಿಪ್ರಾಯ ಸಂಗ್ರಹಿಸುವ ಗುರಿ ಹೊಂದಿರುವ ಬಿಜೆಪಿಯು, ರಾಜ್ಯದಲ್ಲಿ ಕನಿಷ್ಠ 3 ಲಕ್ಷ ಜನರ ಅಭಿಪ್ರಾಯ ಗಳನ್ನು ಸಂಗ್ರಹಿಸುವ ಸಂಕಲ್ಪ ಮಾಡಿದೆ.
Related Articles
Advertisement
ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರಿಂದ ಮೊದಲ ಪತ್ರವಿಕಸಿತ ಹೆಸರಿನ ಪೆಟ್ಟಿಗೆಯೊಳಗೆ ಮೊದಲ ಸಂಕಲ್ಪ ಪತ್ರವನ್ನು ಕ್ರಿಕೆಟ್ ತಾರೆ ವೆಂಕಟೇಶ್ ಪ್ರಸಾದ್ ಅವರು ಹಾಕುವ ಮೂಲಕ ಚಾಲನೆ ನೀಡಲಾಯಿತು. ಅಭಿಯಾನದ ಸಹ ಸಂಚಾಲಕಿ ಮಾಳಿವಿಕಾ ಅವಿನಾಶ್ ಮಾತನಾಡಿ, ಸಂಕಲ್ಪ ಪತ್ರಕ್ಕೆ ಡಿಜಿಟಲ್ ಮೀಡಿಯ ಮೂಲಕ ಅಥವಾ ನಮೋ ಆ್ಯಪ್ ಮೂಲಕ ದಾಖಲಿಸಲು ಅವಕಾಶವಿದೆ. ಇದನ್ನು ಬಳಸಿಕೊಳ್ಳಿ ಎಂದು ವಿನಂತಿಸಿದರು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಲೋಕಸಭಾ ಚುನಾವಣೆ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರವಾಲ್, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಸಾಹಿತಿ- ಐಎಎಸ್ ಅಧಿ ಕಾರಿ, ಅಭಿಯಾನದ ಸಹ ಸಂಚಾಲಕ ಸಿ.ಆರ್.ಸೋಮಶೇಖರ್, ರಾಜ್ಯ ಸಂಘಟನ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ಉಪಸ್ಥಿತರಿದ್ದರು. ಏನಿದು ವಿಕಸಿತ ಭಾರತ- ಸಂಕಲ್ಪ ಪತ್ರ?
ಮಾ.3ರಂದು ಆರಂಭಗೊಂಡಿರುವ ಸಂಕಲ್ಪ ಪತ್ರ ಅಭಿಯಾನವು ಮಾ.15ರ ವರೆಗೆ ನಡೆಯಲಿದ್ದು, ರಾಜ್ಯಾದ್ಯಂತ ಸಲಹಾ ಪೆಟ್ಟಿಗೆಗಳನ್ನು ಕೊಂಡೊಯ್ಯಲಾಗುತ್ತದೆ. ವಿಕಸಿತ ಭಾರತ- ಇದು ಮೋದಿ ಗ್ಯಾರಂಟಿ ಎನ್ನುವ ವಿಷಯದ ಕುರಿತು ರಾಜ್ಯಾದ್ಯಂತ ವೀಡಿಯೋ ವ್ಯಾನ್ ಕೂಡ ಸಂಚರಿಸಲಿದ್ದು, 10 ವರ್ಷಗಳ ಸಾಧನೆಯನ್ನೂ ವೀಡಿಯೋ ಮೂಲಕ ಬಿತ್ತರಿಸಲಾಗುತ್ತದೆ. ಮುಂದಿನ 5 ವರ್ಷಗಳ ವಿಕಸಿತ ಭಾರತ ಕಟ್ಟುವ ಕನಸಿಗೆ ಪೂರಕವಾಗಿ ಸಾರ್ವಜನಿಕರು ತಮ್ಮ ಸಲಹೆಗಳನ್ನು ಬರೆದು ಪೆಟ್ಟಿಗೆಯಲ್ಲಿ ಹಾಕಬಹುದು. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಲಹಾ ಪೆಟ್ಟಿಗೆ ಇಡಲಾಗುತ್ತದೆ. ಇದಲ್ಲದೆ, 909090-2124 ಸಂಖ್ಯೆಗೆ ಮಿಸ್ ಕಾಲ್ ನೀಡುವ ಮೂಲಕವೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು. ಸಲಹಾ ಪೆಟ್ಟಿಗೆ ಮೇಲಿನ ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ಸಲಹೆಗಳನ್ನು ನೀಡಬಹುದು ಎಂದು ಬಿಜೆಪಿ ತಿಳಿಸಿದೆ. ಭಾರತ ವಿಶ್ವಗುರುವಾ ಗುವುದು ಎಲ್ಲರ ಬಯಕೆ. ಇದಕ್ಕಾಗಿ ಪ್ರತಿ ಪ್ರಜೆಯ ಸಂಕಲ್ಪವನ್ನು ದಾಖಲಿಸಲು ಈ ಅಭಿಯಾನ ಮಾಡಲಾಗುತ್ತಿದೆ. ರಸ್ತೆ ಬದಿ ವ್ಯಾಪಾರಿ, ಪೊಲೀಸ್ ಕಾನ್‌ಸ್ಟೆಬಲ್, ಎಂಜಿನಿಯರ್, ಕ್ರೀಡಾಪಟು ಸಹಿತ ಪ್ರತಿಯೊಬ್ಬರ ಭಾವನೆಗೂ ಅವಕಾಶವಿದೆ. ಶಿಕ್ಷಣ, ಕ್ರೀಡೆ, ಧಾರ್ಮಿಕ ಭಾವನೆಗಳ ರಕ್ಷಣೆ ಸಹಿತ ಎಲ್ಲ ಕ್ಷೇತ್ರಗಳ ಭಾವನೆಗಳ ಸಂಗ್ರಹ ನಡೆಯಲಿದೆ.
-ಆರ್.ಅಶೋಕ,
ವಿಧಾನಸಭೆ ವಿಪಕ್ಷ ನಾಯಕ