Advertisement

BJP: ಯತ್ನಾಳ್‌ ಉಚ್ಚಾಟನೆಗೆ ವಿಜಯೇಂದ್ರ ಬಣ ಪಟ್ಟು

01:15 AM Nov 30, 2024 | Team Udayavani |

ಬೆಂಗಳೂರು: ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಬಣ ರಾಜಕೀಯ ಈಗ ಮತ್ತೊಂದು ಮಜಲು ತಲುಪಿದ್ದು, ಯತ್ನಾಳ್‌ರನ್ನು ಕೂಡಲೇ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟನೆ ಮಾಡಬೇಕೆಂದು ವಿಜಯೇಂದ್ರ ಬಣ ಒತ್ತಾಯಿಸಿದೆ. ಅಲ್ಲದೆ, ತಾಕತ್ತಿದ್ದರೆ ವಕ್ಫ್ ಹೋರಾಟಕ್ಕೆ ಅನುಮತಿ ಕೊಟ್ಟ ರಾಷ್ಟ್ರೀಯ ನಾಯಕ ಯಾರೆಂಬುದನ್ನು ಹೇಳುವಂತೆಯೂ ಸವಾಲು ಹಾಕಿದೆ.

Advertisement

ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ 20ಕ್ಕೂ ಹೆಚ್ಚು ಮಾಜಿ ಶಾಸಕರು ಸಭೆ ನಡೆಸಿ ಯತ್ನಾಳ್‌ ಉಚ್ಚಾಟನೆಗೆ ಆಗ್ರಹಿಸಿದ್ದಾರೆ. ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಂದ ಯತ್ನಾಳ್‌ ಸುಪಾರಿ ಪಡೆದಿದ್ದಾರೆಂದು ಆರೋಪಿಸಿ ಅವರನ್ನು ವರಿಷ್ಠರು ತತ್‌ಕ್ಷಣವೇ ಉಚ್ಚಾಟಿಸಿ ಖಡಕ್‌ ಸಂದೇಶ ನೀಡಬೇಕೆಂದು ಮನವಿ ಮಾಡಿದ್ದಾರೆ.

ನೀನು ಬ್ಲ್ಯಾಕ್‌ ಮೇಲ್ ಮಾಸ್ಟರಾ?
ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, ಡಿ.ವಿ. ಸದಾನಂದ ಗೌಡರು ಬಿಜೆಪಿಯ ಹಿತದೃಷ್ಟಿಯಿಂದ ಕೆಲವು ಸಲಹೆಗಳನ್ನು ನೀಡಿದ್ದಾರೆ. ಆದರೆ ಸ್ವಯಂಘೋಷಿತ ಮಹಾನಾಯಕರೊಬ್ಬರು ಸದಾನಂದ ಗೌಡರು ಮಾತಾಡಿದ್ದಕ್ಕೆ ಬಿಚ್ಚಿಡುತ್ತೇನೆ ಎಂದು ಹೇಳುತ್ತಿದ್ದಾರೆ. ನೀನು ಏನು ಬ್ಲ್ಯಾಕ್‌ ಮೇಲ್ ಮಾಸ್ಟರಾ? ಎಂದು ರೇಣುಕಾಚಾರ್ಯ ಕಿಡಿಕಾರಿದರು.

ನಮ್ಮಲ್ಲಿ ಒಡಕುಗಳಿಲ್ಲ
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ಮಾತನಾಡಿ, ನಮ್ಮಲ್ಲಿ ಯಾವುದೇ ರೀತಿಯ ಒಡಕುಗಳಿಲ್ಲ. ಕೆಲವರು ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನ ಈಡೇರುವುದಿಲ್ಲ. ಕೆಲವರು ಪರ್ಯಾಯ ನಾಯಕತ್ವ ಸೃಷ್ಟಿಸಲು ಹೊರಟಿದ್ದಾರೆ. ಇದರಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next