Advertisement
ಮೋದಿ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ 35 ವರ್ಷ ನಿಶಿತ್ ಪ್ರಮಾಣಿಕ್ ಅವರನ್ನು ಸೇರ್ಪಡೆಮಾಡಿಕೊಂಡ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಅಸ್ಸಾಂನ ಕಾಂಗ್ರೆಸ್ ಸಂಸದ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ರಿಪುನ್ ಬೋರಾ, ಪ್ರಮಣಿಕ್ ಅವರ ಜನ್ಮಸ್ಥಳ ಮತ್ತು ರಾಷ್ಟ್ರೀಯತೆಯ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು.
Related Articles
Advertisement
ಇನ್ನೊಬ್ಬ ರಾಜ್ಯ ಸಚಿವ ಇಂದ್ರಾನಿಲ್ ಸೇನ್, “ಕೇಂದ್ರ ಸಚಿವ ನಿಶಿತ್ ಪ್ರಾಮಣಿಕ್ ಬಾಂಗ್ಲಾದೇಶದ ಪ್ರಜೆಯಾಗಿರಬಹುದು ಎಂದು ತಿಳಿದು ಆಘಾತಕ್ಕೊಳಗಾಗಿದ್ದೇನೆ” ಎಂದು ಹೇಳಿದ್ದಾರೆ.
ಆದಾಗ್ಯೂ, ಪ್ರಾಮಣಿಕ್ ವಿಚಾರವಾಗಿ ಕೇಳಿ ಬರುತ್ತಿರುವ ಅಭಿಪ್ರಾಯಗಳನ್ನು ಬಿಜೆಪಿ ತಳ್ಳಿಹಾಕಿದೆ, ಈ ಕುರಿತಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆಗಳೊಂದಿಗೆ ಮಾತನಾಡಿದ ಪಶ್ಚಿಮ ಬಂಗಾಳದ ಬಿಜೆಪಿ ವಕ್ತಾರ ಸಮಿಕ್ ಭಟ್ಟಾಚಾರ್ಯ, ” ಕೇವಲ ಬೆರಳು ತೋರಿಸಿದರೆ ಸಾಲದು, ಪುರಾವೆ ತೋರಿಸಲಿ” ಎಂದು ಹೇಳಿದ್ದಾರೆ.
ಪ್ರಾಮಾಣಿಕ್ ಅವರ ಪೌರತ್ವದ ಬಗ್ಗೆ ಧ್ವನಿ ಎತ್ತಿದವರಲ್ಲಿ ಯಾರೊಬ್ಬರೂ ಇದುವರೆಗೂ ಯಾವುದೇ ಪುರಾವೆಗಳನ್ನು ನೀಡಿಲ್ಲ. ಸುಖಾಸುಮ್ಮನೆ ಪಕ್ಷವನ್ನು ನಿಂದಿಸುವ ಪ್ರಯತ್ನ ನಡೆಯುತ್ತಿದೆ. ಆ ವಿಷಯ ಹೌದಾದಲ್ಲಿ ಪುರಾವೆಗಳನ್ನು ನೀಡಲಿ ಎಂದು ಅವರು ಸಿಡಿದಿದ್ದಾರೆ.
ಪ್ರಾಮಾಣಿಕ್ ಬಾಂಗ್ಲಾದಲ್ಲಿ ಜನಿಸಿದ್ದು..! : ಫೇಸ್ ಬುಕ್ ಪೋಸ್ಟ್
ಪೂಜರ್ ಮೇಳ ಎಂಬವರ ಫೇಸ್ ಬುಕ್ ಅಕೌಂಟ್ ನ ಪೋಸ್ಟ್ ನಲ್ಲಿ, ಪ್ರಾಮಾಣಿಕ್ ಅವರ ಬಗ್ಗೆ ಮೊದಲು ಈರೀತಿಯ ವಿಚಾರ ಹೊರಬಿದ್ದಿದ್ದು. ನೂತನ ಸಚಿವ ಸಂಪುಟ ರಚನೆಯಾದ ಬೆನ್ನಿಗ ೀ ಪೋಸ್ಟ್ ನಲ್ಲಿ ಕಾಣಿಸಿಕೊಂಡಿತ್ತು.
ಪ್ರಾಮಾಣಿಕ್ ಬಾಂಗ್ಲಾದೇಶದಲ್ಲಿ ಜನಿಸಿದ್ದು, ಪಶ್ಚಿಮ ಬಂಗಾಳದಲ್ಲಿ ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡಿದರು. ಅವರನ್ನುಈಗ ಗೃಹ ಇಲಾಖೆಯ ಸಹಾಯಕ ಸಚಿವರನ್ನಾಗಿ ಮಾಡಲಾಗಿದೆ ಎಂದು ಉಲ್ಲೇಖಿಸಿ, “ಬಾಂಗ್ಲಾದೇಶದ ಗೈಬಂಧ ಜಿಲ್ಲೆಯ ಪಲಾಶ್‌ಬರಿ ಪೊಲೀಸ್ ಠಾಣೆ ಪ್ರದೇಶದಲ್ಲಿ ಹರಿನಾಥಪುರದ ಯಶಸ್ವಿ ಮಗ” ಎಂದು ಪೋಸ್ಟ್ ಮಾಡಲಾಗಿತ್ತು. ಆದರೇ, ಈಗ ಆ ಪೋಸ್ಟ್ ನನ್ನು ಫೇಸ್ ಬುಕ್ ನಿಂದ ಡಿಲೀಟ್ ಮಾಡಲಾಗಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆದರೇ, ಅವರ ಜನ್ಮಸ್ಥಳ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ದಿನ್ಹಾಟಾ ಮತ್ತು ಅವರು ಕಂಪ್ಯೂಟರ್ ಅಪ್ಲಿಕೇಶನ್ ಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ ಎಂದು ಲೋಕಸಭೆಯಲ್ಲಿರುವ ಪ್ರಾಮಾಣಿಕ್ ಅವರ ಸ್ವವಿವರದಲ್ಲಿ ಹೇಳಲಾಗಿದೆ.
ಆದಾಗ್ಯೂ, ಅವರ ಶಿಕ್ಷಣದ ಅರ್ಹತೆಯನ್ನು, ಪೌರತ್ವವನ್ನು ತೃಣಮೂಲ ನಾಯಕರು ಪ್ರಶ್ನಿಸಿದ್ದಾರೆ. ಮಾತ್ರವಲ್ಲದೇ, ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಒಳಗೊಂಡು ಹನ್ನೆರಡು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ವಾರಂಬಳ್ಳಿ ಗ್ರಾಮದಲ್ಲಿ ಹಡಿಲು ಭೂಮಿ ಕೃಷಿ ನಾಟಿಗೆ ಚಾಲನೆ