Advertisement

ಬಿಜೆಪಿಗೆ ಸಮೀಕ್ಷೆಯ ಬಲ; ಕಾಂಗ್ರೆಸ್‌ಗೆ ನಿರೀಕ್ಷೆಯ ಕಾಲ

02:40 AM May 21, 2019 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆ ಮುಗಿದ ಬಳಿಕ ಈಗ ಚುನಾವಣೋತ್ತರ ಸಮೀಕ್ಷೆಗಳು ನಿಜವಾಗುತ್ತಾ, ಸುಳ್ಳಾ ಗುತ್ತಾ ಎಂಬ ಚರ್ಚೆಗಳು ಶುರುವಾಗಿದ್ದು, ಇದರ ನಡುವೆಯೇ, ಪರಸ್ಪರ ವ್ಯಂಗ್ಯಭರಿತ ಟೀಕೆಗಳು, ಆರೋಪಗಳು, ಇವಿಎಂ ಕುರಿತ ಅನು ಮಾನ ಗಳು ರಾಜಕೀಯ ವಲಯದಲ್ಲಿ ಚುರುಕಾಗತೊಡಗಿವೆ.

Advertisement

ಎಕ್ಸಿಟ್‌ ಪೋಲ್‌ ಫ‌ಲಿತಾಂಶಗಳು ಹೊರಬಿದ್ದ ಹಿನ್ನೆಲೆಯಲ್ಲಿ ಸೋಮವಾರ ವಿವಿಧ ರಾಜಕೀಯ ಪಕ್ಷಗಳ ನಾಯಕರು ತಮ್ಮ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬಿಜೆಪಿ ಕಾರ್ಯ ಕರ್ತ ರಂತೂ ಉಲ್ಲಾಸದಲ್ಲಿ ಮೇ 23ರ ಫ‌ಲಿತಾಂಶಕ್ಕೆ ಕಾಯುತ್ತಿದ್ದರೆ, ಕಾಂಗ್ರೆಸ್‌ ಸಹಿತ ಇತರ ಪಕ್ಷಗಳ ಕಾರ್ಯಕರ್ತರು ಆತಂಕದ ನಡುವೆಯೂ ಭರವಸೆಯನ್ನು ಹೊತ್ತು ಕೂತಿದ್ದಾರೆ. ದಿಲ್ಲಿಯ ಕಾಂಗ್ರೆಸ್‌ ಪ್ರಧಾನ ಕಚೇರಿಯಲ್ಲಿ ಸೋಮವಾರ ನೀರವ ಆವರಿಸಿತ್ತಾದರೂ, ಕಾರ್ಯಕರ್ತರು ಮಾತ್ರ ವಿಶ್ವಾಸ ಕಳೆದು ಕೊಂ ಡಿಲ್ಲ. ನಾವು ಮತಗಟ್ಟೆ ಸಮೀಕ್ಷೆಗಳನ್ನು ತಿರಸ್ಕರಿಸುತ್ತೇವೆ. ಇದನ್ನು ಬಳಸಿಕೊಂಡು, ಬಿಜೆಪಿ ಇವಿಎಂಗಳನ್ನು ತಿರುಚುವ ಸಾಧ್ಯತೆ ಯಿದೆ ಎಂದು ಕಾರ್ಯಕರ್ತರು ಅಭಿಪ್ರಾಯ ಪಟ್ಟಿದ್ದಾರೆ.

ಇದೇ ವೇಳೆ, ಕೇಂದ್ರ ವಿತ್ತ ಸಚಿವ ಅರುಣ್‌ ಜೇಟಿÉ ಅವರೂ ಸಮೀಕ್ಷೆ ಕುರಿತು ಪ್ರತಿಕ್ರಿಯಿಸಿದ್ದು, “ಬಹುತೇಕ ಮಂದಿ ಮತಗಟ್ಟೆ ಸಮೀಕ್ಷೆಗಳ ನಿಖರತೆ ಕುರಿತು ಅನುಮಾನ ವ್ಯಕ್ತಪಡಿಸುತ್ತಾರೆ. ಆದರೆ, ಹತ್ತಾರು ಸಮೀಕ್ಷೆಗಳು ಒಂದೇ ಸಂದೇಶವನ್ನು ಸಾರಿವೆ ಎಂದರೆ, ಫ‌ಲಿತಾಂಶದ ದಿಕ್ಕನ್ನು ತೋರಿಸಿದಂತೆಯೇ ಸರಿ’ ಎಂದು ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಕೇರಳ ಸಿಎಂ ಪಿಣ ರಾಯಿ ವಿಜಯನ್‌, ಊಹೆಗಳ ಆಧಾರದಲ್ಲಿ ಮಾಡಿರುವ ಊಹೆ ಗಳನ್ನು ನಂಬುವ ಅಗತ್ಯವಿಲ್ಲ ಎಂದಿದ್ದಾರೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಈ ಸಮೀಕ್ಷೆಯೇ ಒಂದು ದೊಡ್ಡ ವಂಚನೆ ಎಂದು ಬಣ್ಣಿಸಿದ್ದಾರೆ.

ಗಿರಿರಾಜ್‌ ಸಿಂಗ್‌ ವ್ಯಂಗ್ಯ: ಈ ನಡುವೆ, ಕೇಂದ್ರ ಸಚಿವ ಗಿರಿ ರಾಜ್‌ ಸಿಂಗ್‌ ಅವರು ಮತಗಟ್ಟೆ ಸಮೀಕ್ಷೆಯ ಹೆಸರಲ್ಲಿ ವಿಪಕ್ಷ ಗಳ ವಿರುದ್ಧ ಕಿಡಿಕಾರಿದ್ದಾರೆ. ಸಮೀಕ್ಷೆ ನೋಡಿದೊಡನೆ ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು ಮತ್ತಿತರ ವಿಪಕ್ಷ ನಾಯಕರು ಐಸಿಯುಗೆ ಅಡ್ಮಿಟ್‌ ಆಗಿದ್ದಾರೆ. ಮೇ 23ರ ಫ‌ಲಿತಾಂಶದ ಬಳಿಕ ಇವರೆಲ್ಲರೂ ರಾಜಕೀಯ ಪಶ್ಚಾತ್ತಾಪ ಪಟ್ಟು, ಕೊನೆಗೆ ರಾಜಕೀಯ ಮೋಕ್ಷ ಪಡೆಯಲಿದ್ದಾರೆ ಎಂದು ಸಿಂಗ್‌ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ, ಮಹಾಮೈತ್ರಿ ಕುರಿತು ಶಿವಸೇನೆ ಕೂಡ ಕಟಕಿಯಾಡಿದೆ. ವಿಪಕ್ಷಗಳ ಸಂಭಾವ್ಯ ಮೈತ್ರಿಯು ಮೇ 23ರ ವರೆಗೂ ಉಳಿಯುವ ಸಾಧ್ಯತೆಯಿಲ್ಲ ಎಂದು ಹೇಳಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್‌ ಮಾತನಾಡಿ, ಚುನಾವಣೆ ಆರಂಭವಾಗುವುದಕ್ಕೂ ಮುನ್ನವೇ ಮಹಾಮೈತ್ರಿ ವಿಫ‌ಲವಾಗಿದೆ. ಹಲವು ಪಕ್ಷಗಳು ಸೇರಿ ಮಹಾ ಘಟಬಂಧನ್‌ ಮಾಡಲು ಮುಂದಾದವು. ಆದರೆ ಒಂದೇ ಒಂದು ರಾಜ್ಯದಲ್ಲೂ ಅದನ್ನು ಯಶಸ್ವಿಯಾಗಿ ಮಾಡಲು ಸಾಧ್ಯ ವಾಗಲಿಲ್ಲ. ಚುನಾವಣೆಯ ಬಳಿಕ ಮತ್ತೂಮ್ಮೆ ಇಂಥ ಯತ್ನ ನಡೆಯಿತು.

Advertisement

ಆದರೆ, ಚುನಾವಣೆಗೆ ಮುನ್ನ ನಡೆಯದ್ದು, ಬಳಿಕ ನಡೆಯಲು ಸಾಧ್ಯವೇ? ನೋಡ್ತಾ ಇರಿ, ಪಶ್ಚಿಮ ಬಂಗಾಲವು ಈ ಬಾರಿ ಎಲ್ಲರನ್ನೂ ಅಚ್ಚರಿಗೆ ನೂಕಲಿದೆ. ನಮ್ಮ ಪಕ್ಷವು ಅತ್ಯುತ್ತಮ ಸಾಧನೆ ಮಾಡಲಿದೆ ಎಂದು ಹೇಳಿದ್ದಾರೆ.
ನಾವು ನಂಬೋದಿಲ್ಲ: ತಮಿಳುನಾಡಿನಲ್ಲಿ ಡಿಎಂಕೆ ಉತ್ತಮ ಸಾಧನೆ ಮಾಡಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿ ದ್ದರೂ, ಪಕ್ಷದ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್‌ ಮಾತ್ರ, ನಾವು ಈ ಸಮೀಕ್ಷೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಮತ್ತು ಜನಾದೇಶಕ್ಕಾಗಿ 3 ದಿನ ಕಾಯುತ್ತೇವೆ ಎಂದಿದ್ದಾರೆ.

ಎಡಪಕ್ಷಗಳು ಕಾದು ನೋಡುವ ತಂತ್ರ ಅನುಸರಿಸಿದ್ದು, ಮೇ 23ರ ಫ‌ಲಿ ತಾಂಶದ ಬಳಿಕವೇ ವಿಪಕ್ಷಗಳ ಮೈತ್ರಿ ಜತೆ ಕೈಜೋಡಿ ಸುವುದೋ, ಬೇಡವೋ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ಚಿಂತನೆ ನಡೆಸಿದೆ.

ಶಬರಿಮಲೆ ಎಫೆಕ್ಟ್: ವ್ಯತಿರಿಕ್ತ ಹೇಳಿಕೆ: ಶಬರಿಮಲೆ ವಿವಾದವು ಚುನಾವಣೆಯ ಫ‌ಲಿತಾಂಶದ ಮೇಲೆ ಪರಿಣಾಮ ಬೀರು ತ್ತ ದೆಯೇ ಎಂಬ ವಿಚಾರದಲ್ಲಿ ಕೇರಳ ಸಿಎಂ ಪಿಣರಾಯಿ ವಿಜ ಯನ್‌ ಮತ್ತು ಅವರ ಸಂಪುಟ ಸಹೋದ್ಯೋಗಿ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾ ರವು ಚುನಾವಣೆ ಮೇಲೆ ಪರಿಣಾಮ ಬೀರಿಲ್ಲ. ಎಲ್‌ಡಿಎಫ್ ಉತ್ತಮ ಫ‌ಲಿತಾಂಶ ಕಾಣಲಿದೆ ಎಂದು ವಿಜಯನ್‌ ಹೇಳಿದ್ದಾರೆ. ಆದರೆ, ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ಮಾತನಾಡಿ, ದೇಗುಲ ವಿವಾದವು ಫ‌ಲಿತಾಂಶದ ಮೇಲೆ ಪರಿಣಾಮ ಬೀರಿರ ಬಹುದು. ಶಬರಿಮಲೆ ವಿವಾದದಲ್ಲಿ ಎಲ್‌ಡಿಎಫ್ ಎಡವಿದೆ ಎಂದು ಕೆಲವು ಕೋಮುವಾದಿ ಶಕ್ತಿಗಳು ಸುಳ್ಳುಗಳನ್ನು ಹಬ್ಬಿ ಸುತ್ತಾ ಸಾಗಿದವು. ಹೀಗಾಗಿ ಅದು ಚುನಾವಣೆ ಮೇಲೆ ಪರಿ ಣಾಮ ಬೀರಿರಬಹುದು. ಆದರೆ, ಜನರಿಗೆ ಈಗ ಸತ್ಯ ಏನೆಂದು ಅರಿವಾಗಿದೆ ಎಂದಿದ್ದಾರೆ.

ಬಂಗಾಲದಲ್ಲಿ ಮರು ಮತದಾನಕ್ಕೆ ಬಿಜೆಪಿ ಆಗ್ರಹ
ಸೋಮವಾರ ಬಿಜೆಪಿ ನಿಯೋಗವು ಚುನಾವಣ ಆಯೋ ಗ ‌ ವನ್ನು ಭೇಟಿ ಮಾಡಿ, ಹಿಂಸಾಚಾರ ಪೀಡಿತ ಪಶ್ಚಿಮ ಬಂಗಾಲ ದಲ್ಲಿ ಮರು ಮತದಾನ ನಡೆಸಬೇಕೆಂದು ಆಗ್ರಹಿ ಸಿದೆ. ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌, ಬಂಗಾಲದಲ್ಲಿ ನಮ್ಮ ಕಾರ್ಯಕರ್ತರ ಮೇಲಾದ ಹಲ್ಲೆಯಂಥ ಘಟನೆಗಳು ಹಾಗೂ ಹಿಂಸಾ ಚಾರ ಗಳ ಬಗ್ಗೆ ವಿಸ್ತೃತ ವರದಿಯನ್ನು ಆಯೋಗಕ್ಕೆ ಸಲ್ಲಿಸಿ ದ್ದೇವೆ. 7ನೇ ಹಂತ ಮಾತ್ರವಲ್ಲದೆ, ಹಿಂದಿನ ಹಂತಗಳ ಮತದಾನದ ವೇಳೆ ಹಿಂಸಾ ಚಾರ ನಡೆದಂಥ ಎಲ್ಲ ಕ್ಷೇತ್ರಗಳಲ್ಲೂ ಮರು ಮತದಾನಕ್ಕೆ ಆದೇಶಿಸಬೇಕೆಂದು ಮನವಿ ಮಾಡಿದ್ದೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next