Advertisement

ಅಧಿಕಾರ ಪಡೆಯಲು ಬಿಜೆಪಿ ಗೆಲ್ಲಿಸಿ: ಮಾಜಿ ಸಚಿವ ರಾಮದಾಸ್‌

12:35 PM Mar 11, 2017 | Team Udayavani |

ನಂಜನಗೂಡು: ಮುಂದಿನ ಬಾರಿ ರಾಜ್ಯದ ಅಧಿಕಾರವನ್ನು ಬಿಜೆಪಿ ಪಡೆಯಬೇಕಾದರೆ ನಂಜನಗೂಡಿನ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಅನಿವಾರ್ಯ ಎಂದು ಮಾಜಿ ಸಚಿವ ಎಸ್‌.ಎ.ರಾಮದಾಸ್‌ ತಿಳಿಸಿದ್ದಾರೆ.

Advertisement

ನಗರದ ಕಬಿನಿ ಸಂಗಮ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನಗರದ 50 ಬೂತ್‌ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಕಾಂಗ್ರೆಸ್‌ನ ಭ್ರಷ್ಟಾಚಾರಯುಕ್ತ ದುರಾಡಳಿತ ಜನತೆಗೆ ಸಾಕಾಗಿದೆ. ಹಾಗಾಗಿ ಜನ ಆ ಪಕ್ಷಕ್ಕೆ ಪಾಠ ಕಲಿಸಲು ಸಿದ್ಧರಾಗಿದ್ದಾರೆ. ನಂಜನಗೂಡಿನ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದರ ಮೂಲಕ 2018ರ ವಿಜಯೋತ್ಸವದ ಆರಂಭ ದಕ್ಷಿಣ ಕಾಶಿ ಎನ್ನುವ ಈ ಪವಿತ್ರ ಕ್ಷೇತ್ರದಿಂದಲೇ ಪ್ರಾರಂಭವಾಗಬೇಕಿದೆ ಎಂದರು.

ಶ್ರೀನಿವಾಸ್‌ ಪ್ರಸಾದ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಕ್ಷೇತ್ರದ ನೆನಪಾಗಿದೆ ಎಂದು ಟೀಕಿಸಿದ ಅವರು, ಅದಕ್ಕಾಗಿಯೇ ಕ್ಷೇತ್ರದ 22 ಸಾವಿರ ಜನರಿಗೆ ಸಾಲ ಸೌಲಭ್ಯ ನೀಡಿದ್ದೂ ಅಲ್ಲದೆ ಆಡಳಿತ ಪಕ್ಷವಾಗಿ ಏನೇನು ಮಾಡಬಾರದಿತ್ತೋ ಅಂಥ ಎಲ್ಲಾ ರೀತಿಯ ಪ್ರಯತ್ನಗಳನ್ನೂ ಅವರು ಮಾಡುತ್ತಿದ್ದಾರೆ. ಹಣ ಬಲ, ಅಧಿಕಾರ ಹಾಗೂ ಅಧಿಕಾರಿಗಳು ಮತ್ತು ಪೊಲೀಸ್‌ ಬೆಂಬಲ ನಮಗಿಲ್ಲ.

ಇರುವುದು ಜನರ ಶ್ರೀರಕ್ಷೆ ಎಂದು ರಾಮದಾಸ್‌ ಹೇಳಿದರು. ಫೈನಲ್‌ ಪ್ರವೇಶಿಸಬೇಕಿದ್ದರೆ ಸೆಮಿಫೈನಲ್‌ನ ಗೆಲುವು ಹೇಗೆ ಅನಿವಾರ್ಯವೂ ಹಾಗೆಯೇ ನಮ್ಮೆಲ್ಲರ ನಾಯಕ ಬಿ.ಎಸ್‌.ಯಡಿಯೂರಪ್ಪ2018ರಲ್ಲಿ ಮತ್ತೆ ಮುಖ್ಯಮಂತ್ರಿ ಆಗಬೇಕಾದರೆ ನಾವು ನಂಜನಗೂಡಿನ ಈ ಉಪ ಚುನಾವಣೆಯ ವಿಜಯೋತ್ಸವ ಆಚರಿಸುವಂತಾಗ‌ಬೇಕು. ಅದಕ್ಕಾಗಿ ನಾವು ಎಲ್ಲ ಪ್ರಯತ್ನ ಕೈಗೊಳ್ಳಬೇಕಿದೆ ಎಂದರು.

ಜಿಲ್ಲಾ ಗ್ರಾಮಾಂತರ  ಬಿಜೆಪಿ ಅಧ್ಯಕ್ಷ ಕೋಟೆ ಶಿವಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಜಿಪಂ ಸದಸ್ಯ ಎಚ್‌.ಎಸ್‌.ದಯಾನಂದಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರ್ಬಳ್ಳಿ ಮೂರ್ತಿ, ತಾಲೂಕು ಬಿಜೆಪಿ ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾಧ್ಯಕ್ಷ ವಿನಯಕುಮಾರ್‌, ಮುಖಂಡ ಯು.ಎನ್‌.ಪದ್ಮನಾಭರಾವ್‌, ನಗರದ ಚುನಾವಣೆ ಉಸ್ತುವಾರಿ ಬೋರೆಗೌಡ, ನಗರಸಭಾ ಉಪಾಧ್ಯಕ್ಷ ಪ್ರದೀಪ್‌, ಸದಸ್ಯ ದೊರೆಸ್ವಾಮಿ, ಕೆ.ಜಿ.ಮಂಗಳಾ, ಸುಧಾಮಹೇಶ್‌, ಕೆ.ಜಿ.ಆನಂದ, ಗಿರೀಶ್‌, ಎನ್‌.ಆರ್‌.ಕೃಷ್ಣಪ್ಪಗೌಡ, ಗಣೇಶ ಮಹಿಳಾ ಮೋರ್ಚಾ ಅಧ್ಯಕ್ಷ ಗಾಯಿತ್ರಿ, ಎಪಿಎಂಸಿ ಸದಸ್ಯ ಗುರುಸ್ವಾಮಿ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next