ಕೆಜಿಎಫ್: ದೇಶದ ಜನತೆ ಉತ್ತಮ ವ್ಯಕ್ತಿತ್ವವುಳ್ಳ ಮತ್ತು ದೇಶಭಕ್ತ ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯಾಗಬೇಕು ಎಂದು ಬಯಸಿದ್ದಾರೆ. ಆದರೆ, ಬಿಜೆಪಿ ಜಿಲ್ಲೆಗೆ ಒಬ್ಬ ಅವಿದ್ಯಾವಂತ ಹಾಗೂ ಗೂಂಡಾ ಅಭ್ಯರ್ಥಿಗೆ ಟಿಕೆಟ್ ನೀಡಿರುವುದು ದುರಾದೃಷ್ಟಕರ ಎಂದು ಬಂಡಾಯ ಅಭ್ಯರ್ಥಿ ಡಾ.ರಮೇಶ್‌ಬಾಬು ಆರೋಪಿಸಿದರು.
ಕ್ಷೇತ್ರದ ಬೆಮೆಲ್‌ನಗರ ಹಾಗೂ ಇತರೆ ಪ್ರದೇಶಗಳಲ್ಲಿ ಮತಯಾಚಿಸಿದ ಅವರು, ಸಂಸದ ಕೆ.ಎಚ್.ಮುನಿಯಪ್ಪ 30 ವರ್ಷಗಳಿಂದ ಜಿಲ್ಲೆಗೆ ಮತ್ತು ತಾಲೂಕಿಗೆ ಏನೂ ಅಭಿವೃದ್ಧಿ ಮಾಡಿಲ್ಲ. ನಿರುದ್ಯೋಗ ಸಮಸ್ಯೆ
ಕಾಡುತ್ತಿದೆ, ಪರ್ಯಾಯ ಕಾರ್ಖಾನೆ ಇಲ್ಲ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಇಂತಹ ಅಭ್ಯರ್ಥಿನ್ನು ಜನರು ತಿರಸ್ಕರಿಸಿದ್ದಾರೆ ಎಂದು ಹೇಳಿದರು.
ಇವರಿಗೆ ಪೈಪೋಟಿ ನೀಡುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯದ ನಾಯಕರು 8 ತಿಂಗಳಿಂದ ಕೋಲಾರ ಜಿಲ್ಲೆ ಅಭ್ಯರ್ಥಿ ನೀನೆ ಎಂದು ಫೈನಲ್ ಮಾಡಿದ್ದರು. ಆದರೆ, ರಾಜ್ಯಾ ಧ್ಯಕ್ಷರು ಮತ್ತು ಅರವಿಂದ್ ಲಿಂಬಾವಳಿ ಕುತಂತ್ರ ರೂಪಿಸಿ ಕಡೆಗಳಿಗೆಯಲ್ಲಿ ನನ್ನನ್ನು ಕೈಬಿಟ್ಟು ಎಸ್.ಮುನಿಸ್ವಾಮಿಗೆ ಟಿಕೆಟ್ ನೀಡಿದ್ದು, ಪಕ್ಷಕ್ಕೆ ಧಕ್ಕೆಯಾಗಿದೆ ಎಂದರು.
ಬೆಂಗಳೂರಿನ ಕಾಡಗೋಡಿ ವ್ಯಾಪ್ತಿಯಲ್ಲಿ 79 ಪ್ರಕರಣ ದಾಖಲಾಗಿದ್ದು, ಅವುಗಳ ಪೈಕಿ ಜಾತಿನಿಂದನೇ ಪ್ರಕರಣದಲ್ಲಿ ಮುನಿಸ್ವಾಮಿ ಅವರೇ 40ಕ್ಕೂ ಹೆಚ್ಚು ಸ್ವಯಂ ದೂರು ನೀಡಿದ್ದಾರೆ. ಅಲ್ಲದೆ, ಮತ್ತೂಂದು ಪ್ರಕರಣದಲ್ಲಿ ಶಾಸಕ ಅರವಿಂದ ಲಿಂಬಾವಳಿ, ಅಭ್ಯರ್ಥಿ ಮುನಿ ಸ್ವಾಮಿ, ಕೊತ್ತೂರು ಮಂಜುನಾಥ್ ಮತ್ತು ಮುಳಬಾಗಿಲು ಶಾಸಕ ನಾಗೇಶ್
ಒಂದೇ ಪ್ರಕರಣದ ಆರೋಪಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು ಒಬ್ಬ ವಿದ್ಯಾವಂತ, ಸಮಾಜ ಸೇವೆ ಮತ್ತು ಜನರ ಸೇವೆ ನನಗೆ ಬಹಳ ಇಷ್ಟ. ನರೇಂದ್ರಮೋದಿ ಅವರ ಉತ್ತಮ ಆಡಳಿತ ಮತ್ತು ವ್ಯಕ್ತಿಕತ್ವಕ್ಕೆ ಕೋಲಾರ ಜಿಲ್ಲೆಯಲ್ಲಿ ನನ್ನ ಸೇವೆ ಮುಂದುವರೆಸಲು ನನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಈ ಭಾಗದಲ್ಲಿ ಜನಪರ ಕಾರ್ಯಕ್ರಮಗಳನ್ನು ನಡೆಸುಕೊಂಡು ಬರುತ್ತಿದೇನೆ. ಕೆಜಿಎಫ್ ಕ್ಷೇತ್ರದಲ್ಲಿರುವ ವಿವಿಧ
ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಈಡೇರಿಸಲು ನನಗೆ ಅವಕಾಶ ನೀಡಿಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಮತ ಪ್ರಚಾರದಲ್ಲಿ ಮಸ್ಟ್ರಹಳ್ಳಿ ಮಂಜು ನಾಥರೆಡ್ಡಿ, ಗಂಗಾಧರ, ವೆಂಕಟರಾಮಪ್ಪ, ಶ್ರೀನಿವಾಸ್‌ಬಾಬು, ಗುತ್ತಿಗೆದಾರ ನಾರಾಯಣÓ ಾÌಮಿ, ರಾಜು, ಡೋಮನಿಕ್, ಪ್ರಭು ಪಾಲ್ಗೊಂಡಿದ್ದರು.